ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಬೇಕಿದೆ ಈ ಮೂರು ಪ್ರಮುಖ ಬದಲಾವಣೆ
ಐಪಿಎಲ್ ಆವೃತ್ತಿಯಲ್ಲಿ ಉತ್ತಮ ಆರಂಭ ಕಂಡಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಸೋಲಿನ ಹಾದಿ ಹಿಡಿದಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ರೋಚಕ ಸೋಲು ಅನುಭವಿಸಿದ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸಿಡಿದೆದ್ದಿತ್ತು. ಆದರೆ ಮೂರನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ 223 ರನ್ ಗಳಿಸಿಯೂ ಸೋಲು ಅನುಭವಿಸಿತ್ತು. ನಂತರ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಹೀನಾಯ ಸೋಲು ಅನುಭವಿಸಿತು.
ತಂಡದ ಮೇಲ್ಪಂಕ್ತಿಯ ಆಟಗಾರರಾದ ಕೆಎಲ್ ರಾಹುಲ್, ಮಯಾಂಕ್ ಅಗರವಾಲ್ ಮತ್ತು ನಿಕೋಲಸ್ ಪೂರನ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಬ್ಯಾಟಿಂಗ್ ವಿಭಾಗಕ್ಕೆ ಅಗತ್ಯವಾದ ಬಲ ನೀಡಿದ್ದಾರೆ. ಆದರೆ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಸತತ ವೈಫಲ್ಯ ಅನುಭವಿಸುತ್ತಿದೆ. ಇನ್ನೊಂದೆಡೆ ಬೌಲಿಂಗ್ ವಿಭಾಗ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ವೇಗದ ಬೌಲರ್‌ಗಳು ಇದುವರೆಗೂ ಅಷ್ಟೇನೂ ಗಮನಾರ್ಹ ಪ್ರದರ್ಶನ ನೀಡಿಲ್ಲ.
ಕಿಂಗ್ಸ್ ಇಲೆವೆನ್ ತಂಡ ಜಯದ ಹಾದಿಗೆ ಮರಳಲು ತಂಡದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲೇಬೇಕಾದ ಅಗತ್ಯವಿದೆ. ಮುಖ್ಯವಾಗಿ ಬೇಕಿರುವ ಮೂರು ಬದಲಾವಣೆಗಳು ಇವು. ಮುಂದೆ ಓದಿ.

ಇಶಾನ್ ಪೋರಲ್
ಮೊಹಮ್ಮದ್ ಶಮಿ ಮತ್ತು ಶೆಲ್ಡನ್ ಕಾಟ್ರೆಲ್ ಪಂಜಾಬ್ ತಂಡಕ್ಕೆ ಉತ್ತಮ ಆರಂಭವನ್ನೇನೋ ಒದಗಿಸುತ್ತಿದ್ದಾರೆ. ಇಬ್ಬರೂ ಐದು ಪಂದ್ಯಗಳಲ್ಲಿ 14 ವಿಕೆಟ್‌ಗಳನ್ನು ತೆಗೆದಿದ್ದಾರೆ. ಆದರೆ ಎದುರಾಳಿಗಳನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಮುಖ್ಯವಾಗಿ ತಂಡಕ್ಕೆ ಮತ್ತೊಬ್ಬ ಪ್ರಬಲ ವೇಗಿಯ ಕೊರತೆ ಇದೆ. ಮೂರನೇ ವೇಗಿ ಕ್ರಿಸ್ ಜೋರ್ಡನ್ ಸ್ಥಾನಕ್ಕೆ ಭಾರತದ ಯುವ ವೇಗಿ ಇಶಾನ್ ಪೋರೆಲ್ ಅವರನ್ನು ಸೇರಿಸಿಕೊಳ್ಳಬೇಕಿದೆ. 14 ಟಿ20 ಪಂದ್ಯಗಳನ್ನು ಆಡಿರುವ ಪೋರೆಲ್ 6.11 ಎಕಾನಮಿಯಲ್ಲಿ 16 ವಿಕೆಟ್ ಪಡೆದಿದ್ದಾರೆ. ಪೋರೆಲ್ ಸೇರ್ಪಡೆ ತಂಡಕ್ಕೆ ಹೆಚ್ಚಿನ ಬಲ ನೀಡಬಹುದು.

ಕ್ರಿಸ್ ಗೇಲ್
ಸ್ಫೋಟಕ ಬ್ಯಾಟ್ಸ್‌ಮನ್ ಗ್ಲೆನ್ ಮ್ಯಾಕ್ಸ್‌ವೆಲ್ ಕಳಪೆ ಫಾರ್ಮ್ ತಂಡಕ್ಕೆ ದೊಡ್ಡ ತಲೆನೋವಾಗಿದೆ. ಐದು ಇನ್ನಿಂಗ್ಸ್‌ಗಳಲ್ಲಿ ಮ್ಯಾಕ್ಸ್‌ವೆಲ್ ಗಳಿಸಿರುವ ರನ್ 1, 5, 13*, 11, 11*. ಇದುವರೆಗಿನ ಪಂದ್ಯಗಳಲ್ಲಿ ಕೇವಲ 41 ರನ್ ಬಾರಿಸಿರುವ ಮ್ಯಾಕ್ಸ್‌ವೆಲ್ ಬದಲು ಕ್ರಿಸ್ ಗೇಲ್ ಅವರನ್ನು ಆಡಿಸಬೇಕಿದೆ. ಇದುವರೆಗೂ ಗೇಲ್ ಮೈದಾನಕ್ಕೆ ಇಳಿದಿಲ್ಲ. ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿರುವ ಗೇಲ್ ಆರಂಭಿಕರಾಗಿ ಇಳಿದರೆ ಬ್ಯಾಟಿಂಗ್ ಶಕ್ತಿ ಹೆಚ್ಚಲಿದೆ.
ಕೆಎಲ್ ರಾಹುಲ್‌ಗೆ ಅತ್ಯಮೂಲ್ಯ ಸಲಹೆ ನೀಡಿದ ದಿಗ್ಗಜ ಬ್ರಿಯಾನ್ ಲಾರಾ

ಮುಜೀಬ್ ಉರ್ ರಹಮಾನ್
ಸ್ಪಿನ್ ಬೌಲಿಂಗ್ ಕೂಡ ಕಿಂಗ್ಸ್ ಇಲೆವೆನ್‌ಗೆ ಸಮಸ್ಯೆಯಾಗಿಯೇ ಉಳಿದಿದೆ. ಅನುಭವಿಗಳ ಕೊರತೆ ತಂಡಕ್ಕಿದೆ. ರವಿ ಬಿಶ್ನೋಯಿ ಗಮನ ಸೆಳೆದರೂ ಅವರಿಗೆ ಸೂಕ್ತ ಬೆಂಬಲ ಸಿಗಬೇಕಿದೆ. ಯುವ ಸ್ಪಿನ್ನರ್ ಹರ್ಪ್ರೀತ್ ಬ್ರಾರ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಡುವ ಅವಕಾಶ ಪಡೆದಿದ್ದರು. 4 ಓವರ್‌ಗಳಲ್ಲಿ 41 ರನ್ ಬಿಟ್ಟುಕೊಟ್ಟಿದ್ದರು. ಆದರೆ ಪಂಜಾಬ್ ತಂಡ ತನ್ನಲ್ಲಿ ಮುಜೀಬ್ ಉರ್ ರೆಹಮಾನ್ ಎಂಬ ವಿಶ್ವದರ್ಜೆಯ ಬೌಲರ್ ಇರುವುದನ್ನು ಮರೆತಂತಿದೆ. ಅಫ್ಘಾನಿಸ್ತಾನದ ಮುಜೀಬ್ ಟಿ20ಯ ಪರಿಣತ ಬೌಲರ್. 122 ಟಿ20 ಪಂದ್ಯಗಳಲ್ಲಿ ಕೇವಲ 6.60 ಎಕಾನಮಿಯಲ್ಲಿ 131 ವಿಕೆಟ್‌ಗಳನ್ನು ಪಡೆದಿರುವ ಮುಜೀಬ್, ಪವರ್ ಪ್ಲೇನಲ್ಲಿಯೂ ಅತ್ಯುತ್ತಮ ಬೌಲರ್. ಅವರನ್ನು ಪಂಜಾಬ್ ಬಳಸಿಕೊಳ್ಳಬೇಕಿದೆ.

ಇತರೆ ಆಟಗಾರರು ಬೆಂಚ್‌ನಲ್ಲಿರುವ ಆಟಗಾರರು
ಪಂಜಾಬ್ ತಂಡದಲ್ಲಿ ಟಿ20ಗೆ ಹೇಳಿ ಮಾಡಿಸಿದ ಆಟಗಾರರಿಗೇನೂ ಕೊರತೆಯಿಲ್ಲ. ಬ್ಯಾಟಿಂಗ್ ವಿಭಾಗದಲ್ಲಿ ಸರ್ಫರಾಜ್ ಖಾನ್ ಜಾಗವನ್ನು ದೀಪಕ್ ಹೂಡಾ ತುಂಬಬಲ್ಲರು. ಕರ್ನಾಟಕದವರೇ ಆದ ಜಗದೀಶ ಸುಚಿತ್ ಬೌಲಿಂಗ್ ಮತ್ತು ಬ್ಯಾಟಿಂಗ್ ವಿಭಾಗದಲ್ಲಿ ಶಕ್ತಿಯಾಗಲಿದ್ದಾರೆ. ವೇಗಿ ಹರ್ಡೊಸ್ ವಿಲ್ಜೊಯಿನ್ ಇನ್ನೊಬ್ಬ ಅನುಭವಿ ವೇಗಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications