ಐಪಿಎಲ್: ಹೈದರಾಬಾದ್ ವಿರುದ್ಧ ಮುಂಬೈ ಮಾಡಿದ 3 ಪ್ರಮುಖ ತಪ್ಪುಗಳು

ಶಾರ್ಜಾ: ಇಂಡಿಯನ್ ಪ್ರೀಮಿಯರ್ ಲೀಗ್ 2020ರ ಲೀಗ್ ಹಂತದ ಕಡೇಯ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ 10 ವಿಕೆಟ್‌ಗಳ ಗೆಲುವನ್ನಾಚರಿಸಿದೆ. ಮುಂಬೈ ಇಂಡಿಯನ್ಸ್, ಈ ಸೀಸನ್‌ನಲ್ಲಿ ನೀಡಿರುವ ಅತೀ ಕೆಟ್ಟ ಪ್ರದರ್ಶನವಿದಾಗಿ ಗುರುತಿಸಿಕೊಂಡಿದೆ. ಡೇವಿಡ್ ವಾರ್ನರ್ ನಾಯಕತ್ವದ ಸನ್ ರೈಸರ್ಸ್ ತಂಡ ಈ ಗೆಲುವಿನೊಂದಿಗೆ ಪ್ಲೇ ಆಫ್‌ಗೆ ಪ್ರವೇಶ ಗಿಟ್ಟಿಸಿಕೊಂಡಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಮುಂಬೈ ಇಂಡಿಯನ್ಸ್‌ನಿಂದ ಕ್ವಿಂಟನ್ ಡಿ ಕಾಕ್ 25, ಸೂರ್ಯಕುಮಾರ್ ಯಾದವ್ 36, ಇಶಾನ್ ಕಿಶನ್ 33, ಕೀರನ್ ಪೊಲಾರ್ಡ್ 41 (25 ಎಸೆತ) ರನ್‌ನೊಂದಿಗೆ 20 ಓವರ್‌ಗೆ 8 ವಿಕೆಟ್ ಕಳೆದು 149 ರನ್ ಗಳಿಸಿತು.
ಗುರಿ ಬೆನ್ನಟ್ಟಿದ ಸನ್ ರೈಸರ್ಸ್, ವೃದ್ಧಿಮಾನ್ ಸಹಾ 58 (45 ಎಸೆತ), ಡೇವಿಡ್ ವಾರ್ನರ್ 85 (58) ರನ್‌ನೊಂದಿಗೆ 17.1 ಓವರ್‌ಗೆ ವಿಕೆಟ್ ನಷ್ಟವಿಲ್ಲದೆ 151 ರನ್ ಗಳಿಸಿತು.

ಕೆಕೆಆರ್ ಕನಸು ಭಗ್ನ
ಮುಂಬೈ ಇಂಡಿಯನ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ಕಾಳಗದಲ್ಲಿ ಹೈದರಾಬಾದ್ ಸೋತಿದ್ದರೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಪ್ಲೇ ಆಫ್‌ಗೆ ಅರ್ಹತೆ ಪಡೆದುಕೊಳ್ಳುತ್ತಿತ್ತು. ಆದರೆ ಪಂದ್ಯವನ್ನು ಎಸ್‌ಆರ್‌ಎಚ್ ಗೆದ್ದಿರುವುದರಿಂದ ಕೆಕೆಆರ್ ಪ್ಲೇ ಆಫ್ ಕನಸು ಭಗ್ನವಾಗಿದೆ.

ಮುಂಬೈ ಸೋಲಿಗೆ ಕಾರಣ-1
ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಹೀನಾಯ ಸೋಲಿಗೆ ಪ್ರಮುಖ ಕಾರಣವೆಂದರೆ ತಂಡದ ಪ್ರಮುಖ ಆಟಗಾರರು ವಿಶ್ರಾಂತಿಯಲ್ಲಿದ್ದಿದ್ದು. ಎಂಐ ಪ್ಲೇ ಆಫ್‌ಗೆ ಪ್ರವೇಶಿಸಿದ್ದರಿಂದ ಕೊಂಚ ನಿರ್ಲಕ್ಷ್ಯ ಮಾಡಿತು. ತಂಡದ ಪ್ರಮುಖ ಬೌಲರ್‌ಗಳಾದ ಜಸ್‌ಪ್ರೀತ್ ಬೂಮ್ರಾ ಮತ್ತು ಟ್ರೆಂಟ್ ಬೌಲ್ಟ್ ವಿಶ್ರಾಂತಿಯಲ್ಲಿದ್ದರು. ಹೀಗಾಗಿ ಮುಂಬೈಗೆ ಹೈದರಾಬಾದ್‌ನ ಒಂದೂ ವಿಕೆಟ್ ಲಭಿಸಲಿಲ್ಲ.

ಎಂಐ ಸೋಲಿಗೆ ಕಾರಣ-2
ಮಂಗಳವಾರದ ಪಂದ್ಯದಲ್ಲಿ ಮುಂಬೈಯಿಂದ ಒಂದೊಳ್ಳೆ ಜೊತೆಯಾಟ ಬರಲೇಯಿಲ್ಲ. ಟಾಪ್ ಆರ್ಡರ್‌ನಲ್ಲಿ ಒಬ್ಬ ಬ್ಯಾಟ್ಸ್‌ಮನ್ ಆದರೂ ಇನ್ನೂ ಹೆಚ್ಚು ಕಾಲ ನಿಂತಿದ್ದರೆ ಕೀರನ್ ಪೊಲಾರ್ಡ್ ದೊಡ್ಡ ಹೊಡೆತಗಳ ಮೂಲಕ ಇನ್ನೂ ರನ್ ಸೇರಿಸಲು ಅವಕಾಶವಿತ್ತು. ಆರಂಭದಲ್ಲೇ ವಿಕೆಟ್‌ಗಳು ಹೋಗಿದ್ದರಿಂದ ಪೊಲಾರ್ಡ್ ದೊಡ್ಡ ಹೊಡೆತಗಳಿಗೆ ಕೊಂಚ ಸಮಯ ತೆಗೆದುಕೊಂಡರು.

ಸೋಲಿಗೆ ಕಾರಣ-3
ಮುಂಬೈ ಮೊದಲೇ ಪ್ಲೇ ಆಫ್‌ಗೆ ಪ್ರವೇಶಿಸಿದ್ದರಿಂದ ಹೈದರಾಬಾದ್ ಎದುರು ನಿರ್ಲಕ್ಷ್ಯದ ಆಟ ಆಡಿತು. ಫೀಲ್ಡಿಂಗ್ ವೇಳೆಯೂ ಉದಾಸೀನ ತೋರಿತು. ಮಿಸ್ ಫೀಲ್ಡಿಂಗ್ ಮೂಲಕ ಎದುರಾಳಿಗೆ ರನ್ ನೀಡಿತು. ರೋಹಿತ್ ಶರ್ಮಾ ಗಾಯದಿಂದ ಜಸ್ಟ್ ಚೇತರಿಸಿಕೊಂಡಿರುವುದರಿಂದ ಅವರೂ ಮೈದಾನದಲ್ಲಿ ಚುರುಕಾಗಿರಲಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications