Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮುಂಬೈ vs ಡೆಲ್ಲಿ ಫೈನಲ್‌ ಹಣಾಹಣಿ: 5 ಅಚ್ಚರಿಯ ಸತ್ಯ ಸಂಗತಿಗಳು!

IPL 2020: 5 interesting facts about Mumbai Indians vs Delhi Capitals final

ದುಬೈ: 2020ರ ಇಂಡಿಯನ್ ಪ್ರೀಮಿಯರ್ ಲೀಗ್‌ನ ಲೀಗ್‌ ಹಂತದ 56 ಪಂದ್ಯಗಳು ಮುಗಿದಿವೆ. ಪ್ಲೇ ಆಫ್‌ ಹಂತದ ಪಂದ್ಯಗಳೂ ಮುಗಿದಿವೆ. ಮಂಗಳವಾರ (ನವೆಂಬರ್ 10) ಫೈನಲ್ ಪಂದ್ಯ ನಡೆದರೆ 13ನೇ ಆವೃತ್ತಿಯ ಐಪಿಎಲ್‌ಗೆ ತೆರೆ ಬೀಳಲಿದೆ. ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಲಿವೆ.

ಮುಂಬೈ ಇಂಡಿಯನ್ಸ್ ಈ ಬಾರಿ ಫೈನಲ್‌ನಲ್ಲಿ ಗೆದ್ದರೆ ಒಟ್ಟಿಗೆ 5ನೇ ಬಾರಿ ಐಪಿಎಲ್ ಟ್ರೋಫಿ ಗೆದ್ದ ದಾಖಲೆಗೆ ಪಾತ್ರವಾಗಲಿದೆ. ಇದೇ ಮೊದಲ ಬಾರಿಗೆ ಫೈನಲ್‌ಗೆ ಪ್ರವೇಶಿಸಿರುವ ಡೆಲ್ಲಿ ಪ್ರಶಸ್ತಿ ಸುತ್ತಿನಲ್ಲಿ ಗೆದ್ದರೆ ಇತಿಹಾಸವೇ ನಿರ್ಮಾಣವಾಗಲಿದೆ.

ಮುಂಬೈ-ಡೆಲ್ಲಿ ಫೈನಲ್ ಪಂದ್ಯ ಒಂದಿಷ್ಟು ಅಚ್ಚರಿಯ ಸತ್ಯ ಸಂಗತಿಗಳಿಗೂ ಕಾರಣವಾಗಲಿದೆ. ಆಯ್ದ ಕೆಲ ಕುತೂಹಲಕಾರಿ ಅಂಶಗಳು ಇಲ್ಲಿವೆ ನೋಡಿ.

1. ವಿಭಿನ್ನ ನಾಯಕತ್ವ

1. ವಿಭಿನ್ನ ನಾಯಕತ್ವ

ಐಪಿಎಲ್ ಇತಿಹಾಸದಲ್ಲಿ ಫೈನಲ್‌ನಲ್ಲಿ ಅತೀ ಯಶಸ್ವಿ ನಾಯಕ ರೋಹಿತ್ ಶರ್ಮಾ ಮತ್ತು ಯುವ ನಾಯಕ ಶ್ರೇಯಸ್ ಅಯ್ಯರ್ ಮುಖಾಮುಖಿಯಾಗುತ್ತಿರುವುದು ಇದೇ ಮೊದಲ ಬಾರಿ. ಮುಂಬೈ ನಾಲ್ಕು ಬಾರಿ ಟ್ರೋಫಿ ಗೆದ್ದಿದ್ದರೆ, ಡೆಲ್ಲಿ ಫೈನಲ್‌ಗೆ ಪ್ರವೇಶಿಸುತ್ತಿರುವುದು ಇದೇ ಚೊಚ್ಚಲಬಾರಿ.

2. ದಾಖಲೆ ಮುರಿಯುವ ಅವಕಾಶ

2. ದಾಖಲೆ ಮುರಿಯುವ ಅವಕಾಶ

ಡೆಲ್ಲಿ ನಾಯಕ ಶ್ರೇಯಸ್ ಐಯ್ಯರ್‌ಗೆ ರೋಹಿತ್ ಶರ್ಮಾ ಹೆಸರಿನಲ್ಲಿರುವ ದಾಖಲೆ ಮುರಿಯಲು ಅವಕಾಶವಿದೆ. ಐಪಿಎಲ್‌ ಫೈನಲ್‌ನಲ್ಲಿ ತಂಡ ಮುನ್ನಡೆಸಿ ಗೆದ್ದ ಅತೀ ಕಿರಿಯ ನಾಯಕ ಎಂಬ ದಾಖಲೆಯನ್ನು ರೋಹಿತ್ 2013ರಲ್ಲಿ ನಿರ್ಮಿಸಿದ್ದರು. ಈ ಬಾರಿ ಡೆಲ್ಲಿ ಗೆದ್ದರೆ ಶರ್ಮಾ ದಾಖಲೆ ಬದಿಗೆ ಸರಿಯಲಿದೆ.

3. ಫೈನಲ್‌ನಲ್ಲಿ ವಿಶೇಷ ದಾಖಲೆ

3. ಫೈನಲ್‌ನಲ್ಲಿ ವಿಶೇಷ ದಾಖಲೆ

ಮುಂಬೈಯಲ್ಲಿ ಜನಿಸಿ ಮುಂಬೈ ವಿರುದ್ಧ ಐಪಿಎಲ್‌ನಲ್ಲಿ ನಾಯಕತ್ವ ವಹಿಸುತ್ತಿರುವ ಮೊದಲ ಆಟಗಾರ ಶ್ರೇಯಸ್ ಅಯ್ಯರ್. ಇದಕ್ಕೆ ವಿರುದ್ಧ ಅಂದರೆ, ಕರ್ನಾಟಕದಲ್ಲಿ ಜನಿಸಿ ಬೆಂಗಳೂರು ತಂಡವನ್ನು ಫೈನಲ್‌ನಲ್ಲಿ ಮುನ್ನಡೆಸಿದ ದಾಖಲೆ 2009ರಲ್ಲಿ ಕುಂಬ್ಳೆ ನಿರ್ಮಿಸಿದ್ದರು. ಇನ್ನು ಮುಂಬೈಯಲ್ಲಿ ಜನಿಸಿ ಮುಂಬೈಗೆ ಫೈನಲ್‌ನಲ್ಲಿ ನಾಯಕತ್ವ ವಹಿಸಿದ್ದ ದಾಖಲೆ 2010ರಲ್ಲಿ ಸಚಿನ್ ತೆಂಡೂಲ್ಕರ್ ನಿರ್ಮಿಸಿದ್ದರು.

4. ರೋಹಿತ್-ಶ್ರೇಯಸ್

4. ರೋಹಿತ್-ಶ್ರೇಯಸ್

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಾಯಕತ್ವ ವಹಿಸದೆ ಐಪಿಎಲ್‌ ಫೈನಲ್‌ನಲ್ಲಿ ತಂಡ ಮುನ್ನಡೆಸಿದ ಭಾರತೀಯ ನಾಯಕರೆಂಬ ದಾಖಲೆ 2013ರಲ್ಲಿ ರೋಹಿತ್ ಬರೆದಿದ್ದರು. ಈಗ ಅಂದರೆ 2020ರಲ್ಲಿ ಶ್ರೇಯಸ್ ಐಯ್ಯರ್ ನಿರ್ಮಿಸಿದ್ದಾರೆ. ರೋಹಿತ್ 2013ರಲ್ಲಿ ಮತ್ತು ಶ್ರೇಯಸ್ 2020ರಲ್ಲಿ ಭಾರತವನ್ನು ಏಕದಿನ ಮತ್ತು ಟಿ20ಯಲ್ಲಿ ಪ್ರತಿನಿಧಿಸಿದ್ದರು. ಆದರೆ ಟೆಸ್ಟ್‌ನಲ್ಲಿ ಇಬ್ಬರೂ ಭಾರತ ಪ್ರತಿನಿಧಿಸಿರಲಿಲ್ಲ.

5. ಗೆದ್ದ ತಂಡದಲ್ಲಿದ್ದ ಆಟಗಾರರು

5. ಗೆದ್ದ ತಂಡದಲ್ಲಿದ್ದ ಆಟಗಾರರು

ಸದ್ಯ ಫೈನಲ್‌ಗೆ ಪ್ರವೇಶಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಮಾಜಿ ಚಾಂಪಿಯನ್ಸ್ ತಂಡಗಳ ಮೂರು ಆಟಗಾರರಿದ್ದಾರೆ. ಅವರೆಂದರೆ ಶಿಖರ್ ಧವನ್ (ಸನ್ ರೈಸರ್ಸ್ ಹೈದರಾಬಾದ್-2016), ರವಿಚಂದ್ರನ್ ಅಶ್ವಿನ್ (2010 & 2011ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್) ಮತ್ತು ಅಕ್ಸರ್ ಪಟೇಲ್ (2013ರಲ್ಲಿ ಮುಂಬೈ ಇಂಡಿಯನ್ಸ್).

Story first published: Tuesday, November 10, 2020, 1:12 [IST]
Other articles published on Nov 10, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+