ನಿತೀಶ್ ರಾಣಾಗೆ ಹೃದಯಸ್ಪರ್ಶಿ ಟ್ವೀಟ್ ಸಂದೇಶ ನೀಡಿದ ಆಕಾಶ್ ಚೊಪ್ರ

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದದ ಪಂದ್ಯದಲ್ಲಿ ಕೊಲ್ಕತಾ ನೈಟ್ ರೈಡರ್ಸ್ ತಂಡದ ಆರಂಭಿಕ ಆಟಗಾರ ನಿತೀಶ್ ರಾಣಾ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದರು. ಕುಸಿಯುತ್ತಿದ್ದ ತಂಡಕ್ಕೆ ಆಸರೆಯಾಗೊದ್ದು ಮಾತ್ರವಲ್ಲ ಸ್ಪೋಟಕ ಪ್ರದರ್ಶನದ ಮೂಲಕ ನರೈನ್ ಜೊತೆಗೂಡಿ ಬೃಹತ್ ಮೊತ್ತಕ್ಕೆ ಕಾರಣರಾದರು. ಆದರೆ ಈ ಪಂದ್ಯಕ್ಕೆ ನಿತೀಶ್ ರಾಣಾ ನೋವಿನಿಂದಲೇ ಕಣಕ್ಕಿಳಿದಿದ್ದರು.
ಹೌದು, ನಿತೀಶ್ ರಾಣಾ ಅವರ ಮಾವ ಶುಕ್ರವಾರವಷ್ಟೇ ಮೃತಪಟ್ಟಿದ್ದರು. ಕುಟುಂಬದಲ್ಲಾದ ಈ ಆಘಾತಕಾರಿ ಘಟನೆಯ ಮರು ದಿನವೇ ನಿತೀಶ್ ರಾಣಾ ಪಂದ್ಯದ ಗತಿಯನ್ನೇ ಬದಲಿಸುವಂತಾ ಪ್ರದರ್ಶನ ನೀಡಿದ್ದಾರೆ. ನಿತೀಶ್ ರಾಣಾ ಅವರ ಈ ಬದ್ಧತೆಗೆ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರ ಟ್ವೀಟ್ ಮೂಲಕ ಶಬ್ಬಾಷ್‌ಗಿರಿ ನೀಡಿದ್ದಾರೆ.
ನಿತೀಶ್ ರಾಣಾ ಡೆಲ್ಲಿ ವಿರುದ್ದದ ಪಂದ್ಯದಲ್ಲಿ ಅರ್ದ ಶತಕವನ್ನು ಗಳಿಸದ ಸಂದರ್ಭದಲ್ಲಿ ತಂಡದ ಸದಸ್ಯ ತಂದುಕೊಟ್ಟ ಕೆಕೆಆರ್ ತಂಡದ ಜರ್ಸಿಯೊಂದನ್ನು ಪ್ರದರ್ಶಿಸಿದರು. ಈ ಜರ್ಸಿಯಲ್ಲಿ "ಸುರಿಂದರ್" ಎಂದು ಬರೆಯಲಾಗಿತ್ತು. ಈ ಸಂದರ್ಭದಲ್ಲಿ ಐಪಿಎಲ್‌ನ ಅಧಿಕೃತ ವೀಕ್ಷಕ ವಿವರಣೆಕಾರರಾದ ಜತಿನ್ ಸಪ್ರು ನಿತೀಶ್ ರಾಣಾ ಅವರ ಮಾವನ ಅಗಲಿಕೆಗೆ ಈ ರಿತಿಯ ಗೌರವ ಸಲ್ಲಿಸುತ್ತಿದ್ದಾರೆ ಎಂದು ವಿವರಿಸಿದರು.
ಇನ್ನು ಬಳಿಕ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರ ಈ ಬಗ್ಗೆ ಟ್ವೀಟ್ ಮಾಡಿದ್ದು ರಾಣಾ ಅವರನ್ನು ಪ್ರಶಂಸಿಸಿದ್ದಾರೆ. "ನಿತೀಶ್ ರಾಣಾ ಬಗ್ಗೆ ಆಲೋಚನೆಗಳು.. ವೈಯಕ್ತಿಕ ನಷ್ಟವನ್ನು ಬದಿಗೊತ್ತಿ ಹೊಸ ಜವಾಬ್ಧಾರಿಯೊಂದಿಗೆ ಪಂದ್ಯದ ಗತಿ ಬದಲಿಸುವಂತಾ ಪ್ರದರ್ಶನ ನೀಡುವುದು ಸುಲಭವಲ್ಲ. ವೆನ್ ಡನ್ ಬಡಿ." ಎಂದು ಆಕಾಶ್ ಚೋಪ್ರ ಟ್ವಿಟ್ ಮಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications