ಕೊಹ್ಲಿ ಕಳಪೆ ಪ್ರದರ್ಶನದಲ್ಲೂ ಆರ್‌ಸಿಬಿ ಖುಷಿ ಪಡುವ ಸಂಗತಿ ಹೇಳಿದ ಆಕಾಶ್ ಚೋಪ್ರ

ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯವನ್ನು ಸೂಪರ್ ಓವರ್‌ನಲ್ಲಿ ಗೆದ್ದ ವಿರಾಟ್ ಕೊಹ್ಲಿ ಬಳಗ ಟೂರ್ನಿಯಲ್ಲಿ ಎರಡನೇ ಗೆಲುವು ಸಾಧಿಸಿದ ಸಂತಸದಲ್ಲಿದೆ. ಅಂಕಪಟ್ಟಿಯಲ್ಲೂ ಕೊಹ್ಲಿ ಪಡೆ ಈಗ ಮೂರನೇ ಸ್ಥಾನದಲ್ಲಿರುವುದು ತಂಡಕ್ಕೂ ಸ್ವಲ್ಪ ನಿರಾಳತೆಯನ್ನು ತಂದಿದೆ. ಆದರೆ ನಾಯಕನ ಪ್ರದರ್ಶನ ಮಾತ್ರ ಇಡೀ ತಂಡಕ್ಕೆ ಆತಂಕವನ್ನು ಮೂಡಿಸಿದೆ.
ಪ್ರತೀ ಐಪಿಎಲ್ ಟೂರ್ನಿಯಲ್ಲೂ ವಿರಾಟ್ ಕೊಹ್ಲಿ ಬ್ಯಾಟ್‌ನಿಂದ ಸರಾಗವಾಗಿ ರನ್ ಹರಿದುಬರುತ್ತಿತ್ತು. ಆದರೆ ಈ ಬಾರಿ ಹಾಗಿಲ್ಲ. ರನ್ ಗಳಿಸಲು ಕೊಹ್ಲಿ ತಿಣುಕಾಡಿದಂತೆ ಭಾಸವಾಗುತ್ತಿದೆ. ಆದರೂ ಶ್ರೇಷ್ಠ ಕ್ರಿಕೆಟಿಗ ಎನಿಸಿದ ಕೊಹ್ಲಿಗೆ ಈ ಸ್ಥಿತಿಯಿಂದ ಆಚೆಗೆ ಬರಲು ಒಂದು ಉತ್ತಮ ಇನ್ನಿಂಗ್ಸ್ ಸಾಕು ಎಂಬುದು ಕ್ರಿಕೆಟ್ ಪಂಡಿತರ ಅಭಿಪ್ರಾಯ.
ಆದರೆ ವಿರಾಟ್ ಕೊಹ್ಲಿ ಪ್ರದರ್ಶನ ಕಳಪೆಯಾಗಿದ್ದರೂ ಆರ್‌ಸಿಬಿ ಖುಷಿಪಡಬೇಕಾದ ಸಂಗತಿಯೊಂದನ್ನು ಕಾಮೆಂಟೇಟರ್ ಆಕಾಶ್ ಚೋಪ್ರಾ ಹೇಳಿದ್ದಾರೆ. ಏನದು ಮುಂದೆ ಓದಿ

ಮುಂಬೈ ವಿರುದ್ಧ ಆರ್‌ಸಿಬಿ 201 ರನ್
ಐಪಿಎಲ್‌ನ ಈ ಬಾರಿಯ ಆವೃತ್ತಿಯ 10ನೇ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ 201 ರನ್‌ಗಳಿಸಿ ಎದುರಾಳಿ ಮುಂಬೈ ಇಂಡಿಯನ್ಸ್ ತಂಡಕ್ಕೆ ದೊಡ್ಡ ಗುರಿಯನ್ನು ನೀಡಿತ್ತು. ಈ ಬೃಹತ್ ಮೊತ್ತ ಮುಂಬೈ ಇಂಡಿಯನ್ಸ್ ತಂಡಕ್ಕೆ ಆರಂಭದಿಂದ ಒತ್ತಡ ಹೆಚ್ಚುವಂತೆ ಮಾಡಿತ್ತು. ಅಂತಿಮವಾಗಿ ಪಂದ್ಯವನ್ನು ಟೈಮಾಡಿಕೊಳ್ಳಲು ಮುಂಬೈ ಯಶಸ್ವಿಯಾಯಿತಾದರೂ ಸೂಪರ್ ಓವರ್ ಆರ್‌ಸಿಬಿ ಕೈ ಹಿಡಿಯಿತು.

ಆರ್‌ಸಿಬಿ ಖುಷಿ ಪಡಬೇಕು
ಮಾಜಿ ಕ್ರಿಕೆಟಿಗ ಕಾಮೆಂಟೇಟರ್ ಆಕಾಶ್ ಚೋಪ್ರಾ ಆರ್‌ಸಿಬಿ ಪ್ರದರ್ಶನದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಅದರಲ್ಲೂ ವಿರಾಟ್ ಕೊಹ್ಲಿ ನಿನ್ನೆಯ ಪಂದ್ಯದಲ್ಲಿ ಕಡಿಮೆ ರನ್‌ಗೆ ವಿಕೆಟ್ ಒಪ್ಪಿಸಿದರಾದರೂ ಅದು ತಂಡದ ರನ್ ಮೇಲೆ ಯಾವುದೇ ಪರಿಣಾಮವನ್ನು ಬೀರದಂತೆ ಉಳಿದ ಬ್ಯಾಟ್ಸ್‌ಮನ್‌ಗಳು ನೋಡಿಕೊಂಡರು. ಕೊಹ್ಲಿ ಕೊಡುಗೆ ಇಲ್ಲದೆಯೂ 200+ ರನ್ ದಾಖಲಿಸಬಹುದು ಎಂದು ಬ್ಯಾಟ್ಸ್‌ಮನ್‌ಗಳು ತೋರಿಸಿಕೊಟ್ಟಿದ್ದಾರೆ. ಇದು ತಂಡದ ಪಾಲಿಗೆ ಉತ್ತಮ ಸಂಗತಿ ಎಂದು ಆಕಾಶ್ ಚೋಪ್ರ ಹೇಳಿದ್ದಾರೆ.

ಮೂವರ ಅರ್ಧ ಶತಕ
ಆರ್‌ಸಿಬಿ ತಂಡದಲ್ಲಿ ವಿರಾಟ್ ಕೊಹ್ಲಿ ಹೊರತುಪಡಿಸಿ ಬ್ಯಾಟಿಂಗ್‌ಗೆ ಇಳಿದ ಎಲ್ಲರೂ ಉತ್ತಮ ಪ್ರದರ್ಶನವನ್ನು ನೀಡಿದ್ದಾರೆ. ಆರಂಭಿಕ ಆಟಗಾರರಾದ ದೇವದತ್ ಪಡಿಕ್ಕಲ್ 40 ಎಸೆತಗಳಿಂದ 54 ರನ್‌ಗಳಿಸಿದರೆ, ಫಿಂಚ್ 35 ಎಸೆತಗಳಿಂದ 52 ರನ್ ದಾಖಲಿಸಿದರು. ಡಿವಿಲಿಯರ್ಸ್ 24 ಎಸೆತಗಳನ್ನು ಎದುರಿಸಿ 55 ರನ್ ಬಾರಿಸಿ ಬೃಹತ್ ಮೊತ್ತಕ್ಕೆ ಕಾರಣರಾದರು. ಅಂತಿಮವಾಗಿ ಬಂದ ಶಿವಮ್ ದುಬೆ ಕೂಡ ಸ್ಪೋಟಕ ಆಟ ಪ್ರದರ್ಶಿಸಿ 10 ಎಸೆತಗಳಿಂದ 27 ರನ್‌ಗಳ ಕೊಡುಗೆಯನ್ನು ನೀಡಿದರು.

ಕೊಹ್ಲಿ ಸತತ ವೈಫಲ್ಯ
ವಿರಾಟ್ ಕೊಹ್ಲಿ ಈ ಬಾರಿಯ ಐಪಿಎಲ್‌ನಲ್ಲಿ ಆಡಿದ ಮೂರನೇ ಪಂದ್ಯದಲ್ಲೂ ಕೆಟ್ಟ ಪ್ರದರ್ಶನವನ್ನು ನೀಡಿದ್ದಾರೆ. ಇದು ವಿರಾಟ್ ಕೊಹ್ಲಿ ಐಪಿಎಲ್ ಇತಿಹಾಸದಲ್ಲಿ ಮೊದಲ ಮೂರು ಪಂದ್ಯಗಳಲ್ಲಿ ಗಳಿಸಿದ ಅತಿ ಕನಿಷ್ಠ ಸ್ಕೋರ್ ಕೂಡ ಹೌದು. ಮೂರು ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಒಟ್ಟಾರೆಯಾಗಿ ಗಳಿಸಿದ ರನ್ 18. ಮುಂಬೈ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ 11 ಎಸೆತಗಳಿಂದ 3 ರನ್‌ಗಳಿಸಿ ವಿಕೆಟ್ ಒಪ್ಪಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications