ಮುಂಬೈ ಇಂಡಿಯನ್ಸ್ ತಂಡದ ಯಶಸ್ಸಿಗೆ ಕಾರಣ ಹೇಳಿದ ಕೋಚ್ ಜಯವರ್ಧನೆ

ಈ ಬಾರಿಯ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಆರಂಭದ ಪಂದ್ಯದಲ್ಲಿ ಮುಗ್ಗರಿಸುವ ಮೂಲಕ ಅಭಿಮಾನಿಗಳಲ್ಲಿ ಆತಂಕವನ್ನು ಮೂಡಿಸಿತ್ತು. ಯುಎಇನಲ್ಲಿನ ಕೆಟ್ಟ ಇತಿಹಾಸ ಈ ಭಯಕ್ಕೆ ಪೂರಕವಾಗಿತ್ತು. ಆದರೆ ಈ ಸೋಲಿನ ಸುಳಿಯಿಂದ ಶೀಘ್ರವಾಗಿ ಮರಳಲು ಮುಂಬೈ ಇಂಡಿಯನ್ಸ್ ಯಶಸ್ವಿಯಾಗಿದೆ. ಮುಂಬೈ ಇಂಡಿಯನ್ಸ್ ತಂಡದ ಯಶಸ್ಸಿಗೆ ಕೋಚ್ ಜಯವರ್ಧನೆ ಕಾರಣವನ್ನು ನೀಡಿದ್ದಾರೆ.
ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಶುಕ್ರವಾರ ಮುಂದಿನ ಪಂದ್ಯ ನಡೆಯಲಿದ್ದು ಆ ಪಂದ್ಯಕ್ಕೂ ಮುನ್ನ ಜಯವರ್ಧನೆ ತಂಡದ ಯಶಸ್ಸಿನ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ತಂಡದ ಎಲ್ಲಾ ಆಟಗಾರರು ಉತ್ತಮ ಫಾರ್ಮ್‌ನಲ್ಲಿದ್ದು ತಮಗೆ ನೀಡಿದ ಜವಾಬ್ಧಾರಿಯನ್ನು ಅದ್ಭುತವಾಗಿ ನಿರ್ವಹಿಸುತ್ತಿದ್ದಾರೆ ಎಂದು ಜಯವರ್ಧನೆ ಹೇಳಿದ್ದಾರೆ.
ಓರ್ವ ಕೋಚ್ ಆಗಿ ಈ ರೀತಿಯ ಟೂರ್ನಿಯನ್ನು ಸುಲಭವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಪ್ರತಿ ಭಾರಿಯೂ ನಾವು ನಿಧಾನವಾಗಿ ಆರಂಭಿಸುವ ಕಾರಣ ಆರಂಭದಲ್ಲಿ ಸ್ವಲ್ಪ ಹಿನ್ನೆಡೆ ಕಂಡೆವು. ಆದರೆ ಬಳಿಕ ನಮ್ಮ ಹಿಡತವನ್ನು ಬಿಗಿಗೊಳಿಸಲು ಆರಂಭಿಸಿದೆವು. ಆಟಗಾರರು ಉತ್ತಮ ಫಾರ್ಮ್‌ನಲ್ಲಿರುವುದು ತಿಳಿಯಿತು. ಅವರು ಉತ್ತಮ ರೀತಿಯ ತರಬೇತಿಯನ್ನು ಪಡೆದು ಸಿದ್ಧರಾದರು ಎಂದು ಜಯವರ್ಧನೆ ತಿಳಿಸಿದ್ದಾರೆ.
ಪರಿಸ್ಥಿತಿಯಲ್ಲಿ ಶೀಘ್ರವಾಗಿ ಅರಿತುಕೊಂಡು ವಿವರಿಸಿದರೆ ಆಟಗಾರರು ಅದನ್ನು ಚೆನ್ನಾಗಿ ಸ್ವೀಕರಿಸುತ್ತಿದ್ದಾರೆ. ಅದೇ ಕಾರಣದಿಂದಾಗಿ ನಾವು ಶೀಘ್ರವಾಗಿ ಗೆಲುವಿನ ಲಯಕ್ಕೆ ಮರಳಲು ಸಾಧ್ಯವಾಯಿತು. ನಮ್ಮ ಮುಖ್ಯ ಆಟದ ತಾಣವಾಗಿರುವ ಅಬುಧಾಬಿಯಲ್ಲಿ ಆರಂಭದಲ್ಲಿ ಕೆಲ ಪಂದ್ಯಗಳನ್ನು ಆಡಿದ ಬಳಿಕ ಇಲ್ಲಿ ಹೇಗೆ ಆಡಬಹುದೆಂದು ಅರಿತುಕೊಂಡೆವು. ಇದೇ ತಂಡದ ಯಶಸ್ಸಿಗೆ ಮುಖ್ಯವಾಯಿತು ಎಂದು ಜಯವರ್ಧೆ ಹೇಳಿದ್ದಾರೆ.
ಆಟಗಾರರಿಗೆ ನೀಡುವ ಯಾವುದೇ ಸಂದರ್ಭದಲ್ಲೂ ಪ್ರದರ್ಶನ ನೀಡಲು ಸಿದ್ಧರಿದ್ದಾರೆ. ಗುಂಪಿನ ಒಳಗೆ ಆರೋಗ್ಯಕರ ಪ್ರತಿಸ್ಪರ್ಧಿಗಳನ್ನು ರೂಪಿಸಿದೆ. ಆರೊಗ್ಯಕರ ಸ್ಪರ್ಧೆಯಿರುವುದು ಉತ್ತಮ ಸಂಗತಿ. ಪ್ರತಿಯೊಬ್ಬರ ಬಗ್ಗೆಯೂ ಗಮನಹರಿಸುತ್ತಾ ಅವರ ಅಗತ್ಯಗಳಿಗೆ ಪೂರಕವಾದ ತರಬೇತಿಗಳು ನಡೆಯುತ್ತಿದೆ ಎಂದು ಜಯವರ್ಧನೆ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications