Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆರ್‌ಸಿಬಿ ಸೋಲಿಗೆ ಇಂಗ್ಲೆಂಡ್ ಆಟಗಾರ್ತಿ ಅಲೆಕ್ಸಾಂಡ್ರಾ ಹಾರ್ಟ್ಲಿ ಬೇಸರ

IPL 2020: Alexandra Hartley feels sad for Royal Challengers Bangalore loss

ಅಬುಧಾಬಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿಯೂ ಕಪ್ ಗೆಲ್ಲುವ ಅವಕಾಶ ಕೈ ತಪ್ಪಿಕೊಂಡಿದೆ. ಶುಕ್ರವಾರ (ನವೆಂಬರ್ 7) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಎಲಿಮಿನೇಟರ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಬೆಂಗಳೂರು ತಂಡ 6 ವಿಕೆಟ್‌ ಸೋಲನುಭವಿಸಿ ಈ ಸೀಸನ್‌ನಲ್ಲಿ ಸ್ಪರ್ಧೆ ಮುಗಿಸಿದೆ.

ವಿರಾಟ್ ಕೊಹ್ಲಿ ಪಡೆಯ ಸೋಲು ಅಪಾರ ಸಂಖ್ಯೆಯ ಅಭಿಮಾನಿಗಳಿಗೆ ಬೇಸರ ತಂದಿದೆ. ಭಾರತದಲ್ಲಷ್ಟೇ ಅಲ್ಲ, ವಿದೇಶದಲ್ಲೂ ಆರ್‌ಸಿಬಿ ಅಭಿಮಾನಿಗಳು ಹೆಚ್ಚಿದ್ದಾರೆ. ಇಂಗ್ಲೆಂಡ್‌ ಆಟಗಾರ್ತಿ ಅಲೆಕ್ಸಾಂಡ್ರಾ ಹಾರ್ಟ್ಲಿ ಕೂಡ ಆರ್‌ಸಿಬಿಯ ದೊಡ್ಡ ಅಭಿಮಾನಿ. ಆರ್‌ಸಿಬಿ ಸೋಲಿಗೆ ಬೇಸರ ವ್ಯಕ್ತಪಡಿಸಿ ಹಾರ್ಟ್ಲಿ ಟ್ವೀಟ್ ಮಾಡಿದ್ದಾರೆ.

IPL 2020: Alexandra Hartley feels sad for Royal Challengers Bangalore loss

'ನಾವು ಮತ್ತೊಂದು ಗೇಮನ್ನು ನರಕ ಮಾಡಿಕೊಂಡು ಟೂರ್ನಿಯಿಂದ ಹೊರ ಬಿದ್ದಿದ್ದೇವೆ. ಮತ್ತೆ ನಾವು ಯಾವತ್ತಾದರೂ ಕಪ್ ಗೆಲ್ಲುತ್ತೀವಾ?' ಎಂದು ಟ್ವೀಟ್‌ನಲ್ಲಿ ಬರೆದುಕೊಂಡಿರುವ ಹಾರ್ಟ್ಲಿ ಜೊತೆಗೆ ಅಳುವ ಇಮೋಜಿಯನ್ನೂ ಸೇರಿಸಿಕೊಂಡಿದ್ದಾರೆ. ಕೊಹ್ಲಿ ಹುಟ್ಟುಹಬ್ಬದಂದೂ ಹಾರ್ಟ್ಲಿ, 'ಆರ್ಸಿಬಿ ಅಭಿಮಾನಿಗಳಾದ ನಮಗೆಲ್ಲರಿಗೂ ಇದು ತುಂಬಾ ವಿಶೇಷ ದಿನ,' ಎಂದು ಕೊಹ್ಲಿಗೆ ಶುಭ ಕೋರಿದ್ದರು.

ಇಂಗ್ಲೆಂಡ್‌ ರಾಷ್ಟ್ರೀಯ ತಂಡಕ್ಕೆ ಆಡುವ ಎಡಗೈ ಆರ್ಥೊಡಾಕ್ಸ್ ಬೌಲರ್ ಆಗಿರುವ ಹಾರ್ಟ್ಲಿ, 28 ಏಕದಿನ ಪಂದ್ಯಗಳಲ್ಲಿ 39 ವಿಕೆಟ್, 4 ಟಿ20ಐ ಪಂದ್ಯಗಳಲ್ಲಿ 3 ವಿಕೆಟ್ ಪಡೆದಿದ್ದಾರೆ. ಲ್ಯಾನ್ಸೆಶೈರ್ ಮತ್ತು ಮಿಡ್ಲ್‌ಸೆಕ್ಸ್ ಮಹಿಳಾ ತಂಡಗಳಲ್ಲೂ ಹಾರ್ಟ್ಲಿ ಆಡುತ್ತಾರೆ. (ಆರ್‌ಸಿಬಿ vs ಎಸ್‌ಆರ್‌ಎಚ್, ಸಂಕ್ಷಿಪ್ತ ಸ್ಕೋರ್: ಆರ್‌ಸಿಬಿ 131-7 (20 Ov), ಎಸ್‌ಆರ್‌ಎಚ್ 132-4 (19.4 Ov).

Story first published: Saturday, November 7, 2020, 8:56 [IST]
Other articles published on Nov 7, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+