For Quick Alerts
ALLOW NOTIFICATIONS  
For Daily Alerts
 

ಕೆಕೆಆರ್‌ನಲ್ಲಿ ಪಾಕ್‌ ಮೂಲದ ಆಟಗಾರ: ಅಲಿ ಬಗ್ಗೆ ಕುತೂಹಲಕಾರಿ ಮಾಹಿತಿ

IPL 2020: Ali Khan, the first US cricketer to play in IPL in KKR

ಅಬುಧಾಬಿ: ಅಬುಧಾಬಿಯ ಶೈಕ್ ಝಾಯೆದ್ ಸ್ಟೇಡಿಯಂನಲ್ಲಿ ಸೆಪ್ಟೆಂಬರ್ 23ರ ಬುಧವಾರ ಇಂಡಿಯನ್ ಪ್ರೀಮಿಯರ್ ಲೀಗ್ 5ನೇ ಪಂದ್ಯದಲ್ಲಿ ಚಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಸೆಣಸಾಡುತ್ತಿವೆ. ಐಪಿಎಲ್‌ನಲ್ಲಿ ಆಡುತ್ತಿರುವ ಅಮೆರಿಕಾದ ಮೊದಲ ಆಟಗಾರನಾಗಿರುವುದರಿಂದ ಕೆಕೆಆರ್‌ ತಂಡದಲ್ಲಿ ಖಾನ್ ಗಮನ ಸೆಳೆಯಲಿದ್ದಾರೆ.

ಕೆಕೆಆರ್‌ ಪರ ಈ ಸೀಸನ್‌ನಲ್ಲಿ ಕಣಕ್ಕಿಳಿಯಲಿದ್ದ ಇಂಗ್ಲೆಂಡ್ ವೇಗಿ ಹ್ಯಾರಿ ಗರ್ನಿ ಗಾಯಗೊಂಡಿದ್ದಾರೆ. ಅವರ ಸ್ಥಾನಕ್ಕೆ ಕೆಕೆಆರ್‌, ಅಮೆರಿಕಾ ರಾಷ್ಟ್ರೀಯ ತಂಡದ ಪರ ಆಡುವ ಅಲಿ ಖಾನ್ ಅವರನ್ನು ಹೆಸರಿಸಿದೆ. ಸದ್ಯ ಖಾನ್ ಅಮೆರಿಕಾದಲ್ಲಿ ನೆಲಿಸಿದ್ದಾರಾದರೂ ಅವರು ಮೂಲತಃ ಪಾಕಿಸ್ತಾನದ ಪಂಜಾಬ್‌ (ಆಗ ಪಾಕ್‌ ಭಾಗವಾಗಿತ್ತು)ನವರು.

ಅಲಿ ಖಾನ್ 18ನೇ ವಯಸ್ಸಿನಲ್ಲಿದ್ದಾಗ ತನ್ನ ಹೆತ್ತವರ ಜೊತೆಗೆ ಯುಎಸ್ ಸ್ಟೇಟ್‌ನ ಒಹಿಯೋಗೆ ಹೋದರು. ಅಲ್ಲಿಂದ ಖಾನ್ ಬೇರೆ ಬೇರೆ ಟಿ20 ಲೀಗ್‌ಗಳಲ್ಲಿ ಪಾಲ್ಗೊಳ್ಳತೊಡಗಿದರು. ಟಿ20 ಲೀಗ್‌ಗಳಾದ ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್), ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‌ಎಲ್) ಗ್ಲೋಬಲ್ ಟಿ20, ಬಿಗ್‌ ಬ್ಯಾಷ್ ಲೀಗ್ ಇಂಥ ಜಾಗತಿಕ ಲೀಗ್‌ಗಳಲ್ಲಿ ಅಲಿ ಭಾಗವಹಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಮುಕ್ತಾಯಗೊಂಡ 2020ರ ಸಿಪಿಎಲ್‌ನಲ್ಲಿ ಖಾನ್ ಟ್ರಿನ್‌ಬಾಗೊ ನೈಟ್ ರೈಡರ್ಸ್ ಪ್ರತಿನಿಧಿಸಿದ್ದರು.

2016ರಿಂದ ಅಮೆರಿಕಾದ ಪೌರತ್ವ ಪಡೆದಿರುವ ಅಲಿ ಖಾನ್ ಅದೇ ವರ್ಷ ಆಟಿ ಕಪ್‌ನಲ್ಲಿ ಪಾದಾರ್ಪಣೆ ಪಂದ್ಯ ಆಡಿದ್ದರು. ಕಳೆದ ವರ್ಷ ಪಾಪುವಾ ನ್ಯೂಗಿಯಾ ವಿರುದ್ಧ ಖಾನ್ ಯುಎಸ್‌ಎ ಪರ ಏಕದಿನದಲ್ಲಿ ಪಾದಾರ್ಪಣೆ ಮಾಡಿದ್ದರು. ಅಲಿ ಖಾನ್ 9 ಲಿಸ್ಟ್ ಎ ಪಂದ್ಯಗಳಲ್ಲಿ 23 ವಿಕೆಟ್ ಪಡೆದಿದ್ದಾರೆ. 36 ಟಿ20 ಪಂದ್ಯಗಳಲ್ಲಿ 38 ವಿಕೆಟ್ ಮುರಿದಿದ್ದಾರೆ..

Story first published: Wednesday, September 23, 2020, 15:58 [IST]
Other articles published on Sep 23, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+