Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2020: ಆರ್‌ಸಿಬಿಯ ಹೋರಾಟದ ಬಗ್ಗೆ ಸಂತಸ ವ್ಯಕ್ತಪಡಿಸಿದ ಕ್ರಿಸ್ ಮೋರಿಸ್

IPl 2020: All rounder Chris Morris happy to see RCB fightback

ದಕ್ಷಿಣ ಆಫ್ರಿಕಾದ ಅನುಭವಿ ಆಲ್‌ರೌಂಡರ್ ಕ್ರಿಸ್ ಮೋರಿಸ್ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವ ಮೂಲಕ ಆರ್‌ಸಿಬಿ ತಂಡದ ಸಂಯೋಜನೆಯಲ್ಲಿ ಸಾಕಷ್ಟು ಸಕಾರಾತ್ಮಕ ಬದಲಾವಣೆಗಳು ಆಗಿದೆ. ಬೌಲಿಂಗ್‌ನಲ್ಲಿ ಭಾರೀ ನಿಯಂತ್ರಣ ಸಾಧಿಸುವುದರ ಜೊತೆಗೆ ಮೋರಿಸ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಅಂತಿಮ ಓವರ್‌ನಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿ ತಂಡ ಉತ್ತಮ ಮೊತ್ತವನ್ನು ಪೇರಿಸಲು ಕಾರಣರಾದರು.

ಆದರೂ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಸೋಲು ಕಂಡಿತ್ತು. ಆದರೆ ಈ ಪಂದ್ಯದಲ್ಲಿ ಆರ್‌ಸಿಬಿ ಅಂತಿಮ ಹಂತದ ವರೆಗೆ ನೀಡಿದ ಹೋರಾಟದ ರೀತಿಯ ಬಗ್ಗೆ ಕ್ರಿಸ್ ಮೋರಿಸ್ ಸಂತಸದವನ್ನು ವ್ಯಕ್ತಪಡಿಸಿದ್ದಾರೆ.

ನಾವು ಉತ್ತಮವಾಗಿ ರನ್ ಗಳಿಸಿದ್ದೆವು. ಆದರೆ ಕೆಲ ಬೌಂಡರಿಗಳನ್ನು ಅನಗತ್ಯವಾಗಿ ಬಿಟ್ಟುಕೊಟ್ಟೆವು. ಬಹುಶಃ ನಮ್ಮ ಯೋಜನೆಯಲ್ಲಿ ಒಂದಷ್ಟು ತಪ್ಪುಗಳಾಗಿರಬಹುದು. ಅದರೆ ಅಂತಿಮ ಓವರ್‌ನ ಅಂತಿಮ ಎಸೆತದ ವರೆಗೆ ಪಂದ್ಯ ಮುಂದುವರಿಸಿದ್ದು ನಿಜಕ್ಕು ನಮ್ಮ ತಂಡದ ಆಟಗಾರರ ಪ್ರದರ್ಶನದ ಬಗ್ಗೆ ಹೆಮ್ಮೆಪಡುವಂತೆ ಮಾಡಿದೆ ಎಂದು ಕ್ರಿಸ್ ಮೋರಿಸ್ ಹೇಳಿದ್ದಾರೆ.

ಇನ್ನು ಈ ಪಂದ್ಯದಲ್ಲಿ ಎಬಿ ಡಿವಿಲಿಯರ್ಸ್ ಅವರನ್ನು ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಸಿದ ನಾಯಕ ನಿರ್ಧಾರವನ್ನು ಮೋರಿಸ್ ಸಮರ್ಥಿಸಿಕೊಂಡರು. "ಬಹುಶಃ ಸ್ಪಿನ್ನರ್‌ಗಳು ಇದ್ದಾಗ ಎಡಗೈ ಬಲಗೈ ಕಾಂಬಿನೇಶನ್ ಇದ್ದರೆ ಅವರಿಗೆ ಬೌಲಿಂಗ್ ಮಾಡಲು ಕಷ್ಟವಾಗುತ್ತದೆ. ಅಂತಿಮ ಹಂತದಲ್ಲಿ ಕ್ರಿಸ್ ಗೇಲ್ ಕೆಎಲ್ ರಾಹುಲ್ ಅವರು ಕ್ರೀಸ್‌ನಲ್ಲಿದ್ದಾಗಲೂ ನೀವದನ್ನು ಗಮನಿಸಿದ್ದೇವೆ. ಅದೇ ಯೋಜನೆಯನ್ನು ತಂಡ ಮಾಡಿಕೊಂಡಿದೆ. ಆದರೆ ಕೆಲ ರಣತಂತ್ರಗಳು ಕೆಲಸ ಮಾಡುತ್ತದೆ ಕೆಲವು ಮಾಡಲ್ಲ" ಎಂದು ಕ್ರಿಸ್ ಮೋರಿಸ್ ಹೇಳಿದ್ದಾರೆ.

ಆರ್‌ಸಿಬಿ ಬ್ಯಾಟಿಂಗ್‌ನ ಅಂತಿಮ ಹಂತದಲ್ಲಿ ಕ್ರಿಸ್ ಮೋರಿಸ್ ಬ್ಯಾಟಿಂಗ್‌ನಲ್ಲಿ ಮಿಂಚುಹರಿಸಿದರು. ಕೇವಲ 8 ಎಸೆತಗಳನ್ನು ಎದುರಿಸಿದ ಮೋರಿಸ್ 25 ರನ್ ಸಿಡಿಸುವಲ್ಲಿ ಯಶಸ್ವಿಯಾದರು. ಈ ಸಾಹಸದಿಂದಾಗಿ ಆರ್‌ಸಿಬಿ 171 ರನ್‌ಗಳಿಸಲು ಸಾಧ್ಯವಾಯಿತು. ಬೌಲಿಂಗ್‌ನಲ್ಲಿ ವಿಕೆಟ್ ಪಡೆಯದಿದ್ದರೂ ಮೋರಿಸ್ ನಾಲ್ಕು ಓವರ್‌ಗಳಲ್ಲಿ ಕೇವಲ 22 ರನ್ ನೀಡಿ ಎದುರಾಳಿ ದಾಂಡಿಗರಿಗೆ ಸವಾಲಾದರು.

Story first published: Friday, October 16, 2020, 13:33 [IST]
Other articles published on Oct 16, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+