Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅಂಬಾಟಿ ರಾಯುಡು ಮತ್ತೊಂದು ಪಂದ್ಯಕ್ಕೆ ಅಲಭ್ಯ: ಸಿಎಸ್‌ಕೆ ಸಿಇಒ

IPL 2020: Ambati rayudu Might miss one more game : CSK CEO

ದುಬೈ: ಚೆನ್ನೈ ಸೂಪರ್ ಕಿಂಗ್ಸ್‌ ತಂಡ ಸ್ಟಾರ್ ಆಟಗಾರ ಅಂಬಾಟಿ ರಾಯುಡು ಅವರನ್ನು ಇನ್ನೊಂದು ಪಂದ್ಯದಲ್ಲೂ ಮಿಸ್ ಮಾಡಿಕೊಳ್ಳಲಿದೆ. ಗಾಯಕ್ಕೀಡಾಗಿರುವ ರಾಯುಡು ಮುಂದಿನ ಪಂದ್ಯದಲ್ಲಿ ಆಡುತ್ತಿಲ್ಲ ಎಂದು ಸಿಎಸ್‌ಕೆ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕಾಸಿ ವಿಸ್ವನಾಥನ್ ಹೇಳಿದ್ದಾರೆ.

ಐಪಿಎಲ್ 2020: ಸಮಗ್ರ ಸುದ್ದಿ, ವಿಶ್ಲೇಷಣೆ, ಅಂಕಿ ಅಂಶಗಳ್ಳುಳ್ಳ ವಿಶೇಷ ಪುಟ

ಇಂಡಿಯನ್ ಪ್ರೀಮಿಯರ್ ಲೀಗ್ ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ರಾಯುಡು ಆಡಿದ್ದರು. ಆ ಪಂದ್ಯದಲ್ಲಿ 48 ಎಸೆತಗಳಿಗೆ 71 ರನ್ ಸಿಡಿಸಿದ್ದ ರಾಯುಡು ತಂಡದ ಗೆಲುವಿಗೆ ಕಾರಣರಾಗಿದ್ದರಲ್ಲದೆ ಪಂದ್ಯಶ್ರೇಷ್ಠ ಪ್ರಶಸ್ತಿಯೂ ತನ್ನದಾಗಿಸಿಕೊಂಡಿದ್ದರು.

ಅದಾಗಿ ಮುಂದಿನ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ರಾಯುಡು ಆಡಿರಲಿಲ್ಲ. ಆ ಪಂದ್ಯದಲ್ಲಿ ಸಿಎಸ್‌ಕೆ 16 ರನ್‌ಗಳಿಂದ ಸೋತಿತ್ತು. ಸೆಪ್ಟೆಂಬರ್ 25ರ ಶುಕ್ರವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಚೆನ್ನೈ ಸೂಪರ್ ಕಿಂಗ್ಸ್ ಟೂರ್ನಿಯ ಮೂರನೇ ಪಂದ್ಯ ಆಡಲಿದೆ.

ರಾಯುಡು ಬಗ್ಗೆ ಎಎನ್‌ಐ ಜೊತೆ ಮಾತನಾಡಿರುವ ಕಾಸಿ ವಿಸ್ವನಾಥನ್, 'ರಾಯುಡು ಹ್ಯಾಮ್‌ಸ್ಟ್ರಿಂಗ್ ಗಾಯಕ್ಕೆ ಒಳಗಾಗಿದ್ದಾರೆ. ಅದರ ಬಗ್ಗೆ ಹೆಚ್ಚಿನ ಚಿಂತೆಯಿಲ್ಲ. ಆದರೆ ಅವರು ಮುಂದಿನ ಮತ್ತೊಂದು ಪಂದ್ಯದಲ್ಲಿ ಆಡುತ್ತಿಲ್ಲ ಅನ್ನೋದೆ ಚಿಂತೆಯ ಸಂಗತಿ. ಬಹುಶಃ ಅವರು ಅದರ ಮುಂದಿನ ಪಂದ್ಯಕ್ಕೆ ಬರಲೂಬಹುದು,' ಎಂದಿದ್ದಾರೆ.

Story first published: Thursday, September 24, 2020, 15:12 [IST]
Other articles published on Sep 24, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+