ಐಪಿಎಲ್ 2020: ಆರ್‌ಸಿಬಿ ನೂತನ ಅಧ್ಯಕ್ಷರಾಗಿ ಆನಂದ್ ಕೃಪಾಲು ಆಯ್ಕೆ

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ನೂತನ ಅಧ್ಯಕ್ಷರಾಗಿ ಆನಂದ್ ಕೃಪಾಲು ಆಯ್ಕೆಯಾಗಿದ್ದಾರೆ. ಡಿಯಾಗೋ ಇಂಡಿಯಾ ಈ ವಿಚಾರವನ್ನು ಶುಕ್ರವಾರ (ಸೆಪ್ಟೆಂಬರ್ 18) ತಿಳಿಸಿದೆ.
ನೂತನ ಅಧ್ಯಕ್ಷರ ಆಯ್ಕೆ 2020ರ ಅಕ್ಟೋಬರ್ 1ರಿಂದ ಜಾರಿಯಾಗಲಿದೆ. ಆನಂದ್ ಸದ್ಯ ಡಿಯಾಗೋ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಜವಾಬ್ದಾರಿಯ ಜೊತೆಗೆ ಆನಂದ್ ಹೆಗಲಿಗೆ ಮತ್ತೊಂದು ಜವಾಬ್ದಾರಿ ಬರಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಕೃಪಾಲು ಅವರು ಸದ್ಯ ಆರ್‌ಸಿಬಿ ಅಧ್ಯಕ್ಷರಾಗಿರುವ ಸಂಜೀವ್ ಚೂರಿವಾಲ ಅವರ ಸ್ಥಾನ ಆವರಿಸಿಕೊಳ್ಳಲಿದ್ದಾರೆ. ಚೂರಿವಾಲ ಅವರ ಹೆಗಲಮೇಲೆ ಡಿಯಾಗೋ ಇಂಡಿಯಾದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮತ್ತು ಮುಖ್ಯ ಹಣಕಾಸಿನ ಅಧಿಕಾರಿ ಜವಾಬ್ದಾರಿಯಿದೆ.
'ರಾಯಲ್ ಚಾಲೆಂಜರ್ಸ್ ಬೆಂಗಳೂರು ಡಿಯಾಗೋ ಇಂಡಿಯಾದ ಅವಿಭಾಜ್ಯ ಅಂಗವಾಗಿದೆ. ಹೀಗಾಗಿ ನಾನು ಕಳೆದ 6 ವರ್ಷಗಳಿಂದ ತಂಡದ ಪ್ರಯಾಣದಲ್ಲಿ ಪಾಲುದಾರನಾಗಿದ್ದೇನೆ. ಹೊಸ ಸೀಸನ್‌ನ ಹೊಸ್ತಿಲಲ್ಲಿ ವಿರಾಟ್ ಕೊಹ್ಲಿ, ಮೈಕ್ ಹೆಸನ್ ಮತ್ತು ಸಿಮನ್ ಕಟಿಚ್ ಮುಂದಾಳತ್ವದ ತಂಡದೊಂದಿಗೆ ಹೊಸ ಅಧ್ಯಾಯ ಶುರುವಾಗಲಿದೆ. ಆರ್‌ಸಿಬಿಗೆ ಅಪೂರ್ವ ಕೊಡುಗೆಗಳನ್ನು ನೀಡಿದ್ದಕ್ಕಾಗಿ ನಾನು ಸಂಜೀವ್‌ಗೆ ಧನ್ಯವಾದಗಳನ್ನು ಸಲ್ಲಿಸುತ್ತಿದ್ದೇನೆ. ಹೊಸ ಜವಾಬ್ದಾರಿಗಾಗಿ ಅವರಿಗೆ ಶುಭ ಹಾರೈಕೆಯೂ ಕೋರುತ್ತಿದ್ದೇನೆ,' ಎಂದು ಆನಂದ್ ಕೃಪಾಲು ತಿಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications