
ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಹಲವಾರು ಯುವ ಪ್ರತಿಭೆಗಳು ತಮ್ಮ ಅದ್ಭುತ ಪ್ರದರ್ಶನದ ಮೂಲಕ ಗಮನ ಸೆಳೆಯುತ್ತಿದ್ದಾರೆ. ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ದದ ಪಂದ್ಯದಲ್ಲೂ ಪಂಜಾಬ್ ತಂಡದ ಯುವ ಬೌಲರ್ ಅರ್ಷ್‌ದೀಪ್ ಸಿಂಗ್ ತಮ್ಮ ಅದ್ಭುತ ಬೌಲಿಂಗ್ ಪ್ರದರ್ಶನದ ಮೂಲಕ ಮನಗೆದ್ದಿದ್ದಾರೆ.
ಪಂದ್ಯದ ಆರಂಭಕ್ಕೂ ಮುನ್ನ ಟಾಸ್ ಗೆದ್ದ ಕೆಕೆಆರ್ ನಾಯಕ ದಿನೇಶ್ ಕಾರ್ತಿಕ್ ಬ್ಯಾಟಿಂಗ್ ಆಯ್ದುಕೊಂಡರು. ಹೀಗಾಗಿ ಬೌಲಿಂಗ್‌ಗೆ ಇಳಿದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಬೌಲಿಂಗ್ ವಿಭಾಗದಲ್ಲಿ ಆರಂಭದಿಂದಲೇ ಅದ್ಭುತ ಪ್ರದರ್ಶನ ನಿಡಲು ಆರಂಭಿಸಿದರು. ರಾಹುಲ್ ತ್ರಿಪಾಠಿ(4) ಹಾಗೂ ನಿತೀಶ್ ರಾಣಾ ವಿಕೆಟನ್ನು ಪವರ್‌ಪ್ಲೇನಲ್ಲೇ ಕೀಳುವಲ್ಲಿ ಯಶಸ್ವಿಯಾಯಿತು.
ಬೌಲಿಂಗ್‌ನಲ್ಲಿ ಅನುಭವಿ ಮೊಹಮದ್ ಶಮಿ ಜೊತೆಗೆ ಹೊಸ ಚೆಂಡನ್ನು ಅರ್ಷ್‌ದೀಪ್ ಹಂಚಿಕೊಂಡಿದ್ದರು. ಮೊದಲ ಓವರ್‌ಅನ್ನು ಮೇಡನ್ ಮೂಲಕ ಆರಂಭಿಸಿದ ಅರ್ಷ್‌ದೀಪ್ ಸಿಂಗ್ ತಮ್ಮ ಎರಡನೇ ಓವರ್‌ನಲ್ಲಿ ರಾಹುಲ್ ತ್ರಿಪಾಠಿ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದು ಮಾತ್ರವಲ್ಲ ಕೇವಲ 2 ರನ್ ನೀಡಿ ಗಮನಸೆಳೆದರು.
16ನೇ ಓವರ್‌ನಲ್ಲಿ ಅರ್ಷ್‌ದೀಪ್ ತನ್ನ ಮೂರನೇ ಓವರ್‌ಗಾಗಿ ಮತ್ತೆ ಬೌಲಿಂಗ್ ದಾಳಿಗೆ ಇಳಿದರು. ಅ ಓವರ್‌ನಲ್ಲಿ ಮೂರು ಬೌಂಡರಿಗಳನ್ನು ಸಿಂಗ್ ಬಿಟ್ಟುಕೊಟ್ಟರು. ಆದರೆ ಶೀಘ್ರದಲ್ಲೇ ಮತ್ತೆ ಕಮ್‌ಬ್ಯಾಕ್ ಮಾಡಿದ ಅರ್ಷದೀಪ್ ದೊಡ್ಡ ಬೇಟೆಯಾಡಿದರು. ಕೆಕೆಆರ್‌ನ ಸ್ಪೋಟಕ ಆಟಗಾರ ರಸ್ಸೆಲ್ ಅವರನ್ನು 4 ರನ್‌ಗೆ ಔಟ್ ಮಾಡುವಲ್ಲಿ ಯಶಸ್ವಿಯಾದರು.
ಹೀಗೆ ಉತ್ತಮ ಬೌಲಿಂಗ್ ಪ್ರದರ್ಶನದ ಮೂಲಕ ಕಿಂಗ್ಸ್ ಇಲವೆನ್ ಪಂಜಾಬ್ ತಂಡದ ಯುವ ಆಟಗಾರ ಅರ್ಷ್‌ದೀಪ್ ಮಿಂಚುವಲ್ಲಿ ಯಶಸ್ವಿಯಾದರು. ಸಾಮಾಜಿಕ ಜಾಲತಾಣದಲ್ಲು ಅರ್ಷದೀಪ್ ಬೌಲಿಂಗ್ ಬಗ್ಗೆ ಮೆಚ್ಚುಗೆಯ ಸುರಿಮಳೆಯೇ ಸುರಿದಿದೆ. ಆರ್‌ಅಶ್ವಿನ್, ಇರ್ಫಾನ್ ಪಠಾಣ್, ಇಯಾನ್ ಬಿಷಪ್, ಸೇರಿದಂತೆ ಹಲವಾರು ಪ್ರಮುಖರು ಅರ್ಷರ್ದೀಪ್ ಬೌಲಿಂಗ್‌ಅನ್ನು ಕೊಂಡಾಡಿದ್ದಾರೆ.