IPL 2020 Auction: ಆರ್‌ಸಿಬಿಗೆ ಮಾರಕ ವೇಗಿ ಡೇಲ್ ಸ್ಟೇನ್ ಬಲ!

ಕೋಲ್ಕತ್ತಾ, ಡಿಸೆಂಬರ್ 19: ಭಾರತದ ಅದ್ದೂರಿ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 2020ರ ಸೀಸನ್‌ಗಾಗಿ ಗುರುವಾರ (ಡಿಸೆಂಬರ್ 19) ಆಟಗಾರರ ಹರಾಜು ಪ್ರಕ್ರಿಯೆ ಕೋಲ್ಕತ್ತಾದಲ್ಲಿ ನಡೆಯುತ್ತಿದೆ. ಪ್ರತಿಭಾನ್ವಿತ ಆಟಗಾರರನ್ನು ತಂಡಕ್ಕೆ ಸೆಳೆದುಕೊಂಡು ತಂಡ ಬಲ ಪಡಿಸಿಕೊಳ್ಳಲು ಫ್ರಾಂಚೈಸಿಗಳು ಸಜ್ಜಾಗಿವೆ.
ಪಂಜಾಬ್ ಮತ್ತು ಕೆಕೆಆರ್ ತಂಡಗಳು ಹೆಚ್ಚಿನ ಮೊತ್ತವನ್ನು ಹೊಂದಿದ್ದು, ಇಂದಿನ ಹರಾಜಿನಲ್ಲಿ ಹೆಚ್ಚು ಆಟಗಾರರನ್ನು ಖರೀದಿ ಮಾಡಲಿವೆ.
ಈ ಬಾರಿಯ ಐಪಿಎಲ್ನಲ್ಲಿ ಆಡಲು ಒಟ್ಟು 991ಆಟಗಾರರಿಂದ ಅರ್ಜಿ ಬಂದಿತ್ತು. 332 ಆಟಗಾರರನ್ನು ಫೈನಲ್ ಮಾಡಿ, 8 ಫ್ರಾಂಚೈಸಿಗಳು ಅಂತಿಮ ಪಟ್ಟಿ ನೀಡಿವೆ. 73 ಸ್ಥಾನಗಳನ್ನು ತುಂಬಬೇಕಿತ್ತು. ಇದಕ್ಕಾಗಿ 332 ಆಟಗಾರರು ಹರಾಜಿನಲ್ಲಿದ್ದಾರೆ. 29 ವಿದೇಶಿಯರಿದ್ದಾರೆ. ಚೆನ್ನೈ ಹಾಗೂ ಮುಂಬೈ ಬಜೆಟ್ ಕಡಿಮೆ ಹೊಂದಿವೆ. ಪಂಜಾಬ್, ಕೆಕೆಆರ್ ಹೆಚ್ಚು ಮೊತ್ತ ಹೊಂದಿದ್ದು, ಹೆಚ್ಚು ಮಂದಿಯನ್ನು ಖರೀದಿಸಲಿವೆ.
ಈವರೆಗೆ ಪ್ಯಾಟ್ ಕಮಿನ್ಸ್ (15.50 ಕೋ.ರೂ.-ಕೆಕೆಆರ್), ಗ್ಲೆನ್ ಮ್ಯಾಕ್ಸ್‌ವೆಲ್ (10.75 ಕೋ.ರೂ.-ಕೆXIಪಿ), ಕ್ರಿಸ್ ಮೋರಿಸ್ (10 ಕೋ.ರೂ-ಆರ್‌ಸಿಬಿ) 10 ಕೋ.ರೂ.ಗೂ ಹೆಚ್ಚಿನ ಬೆಲೆಗೆ ಮಾರಾಟವಾಗಿ ಗಮನ ಸೆಳೆದ ಆಟಗಾರರು. ವಿಂಡೀಸ್ ವೇಗಿ ಶೆಲ್ಡನ್ ಕಾಟ್ರೆಲ್ 8.50 ಕೋ.ರೂ.ಗೆ ಕೆXIಪಿ ಪಾಲಾಗಿದ್ದಾರೆ. ದಕ್ಷಿಣ ಆಫ್ರಿಕಾ ಮಾರಕ ವೇಗಿ ಡೇಲ್ ಸ್ಟೇನ್ ಅವರನ್ನು ಆರ್‌ಸಿಬಿ 2 ಕೋ.ರೂ.ಗೆ ಖರೀದಿಸಿದೆ.
ಐಪಿಎಲ್ 2020ರ ಹರಾಜಿಗೆ ಸಂಬಂಧಿಸಿ ಕುತೂಹಲಕಾರಿ ಅಂಕಿ-ಅಂಶಗಳು, ಸಂಪೂರ್ಣ ಚಾರ್ಟ್ ಇಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications