
ಐಪಿಎಲ್‌ನ 55ನೇ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿದೆ. ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ನಡೆಸಿದ ಆರ್‌ಸಿಬಿ 152 ರನ್‌ಗಳನ್ನು ಗಳಿಸಿದೆ. ಈ ಮೂಲಕ ಎದುರಾಳಿ ಡೆಲ್ಲಿಗೆ ಸಾಧಾರಣ ಗುರಿಯನ್ನು ನಿಗದಿ ಮಾಡಿದೆ.
ಡೆಲ್ಲಿ ಹಾಗೂ ಬೆಂಗಳೂತು ಎರಡು ತಂಡಗಳಿಗೂ ಇಂದಿನ ಪಂದ್ಯದ ಗೆಲುವು ನಿರ್ಣಾಯಕವಾಗಿದೆ. ಗೆದ್ದ ತಂಡ ಸುಲಭವಾಗಿ ಪ್ಲೇಆಫ್‌ಗೆ ಟಿಕೆಟ್ ಪಡೆಯುವುದು ಮಾತ್ರವಲ್ಲದೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಳ್ಳಲಿದೆ. ಆದರೆ ಈ ಪಂದ್ಯದಲ್ಲಿ ಆರ್‌ಸಿಬಿ ಕಠಿಣ ಗುರಿಯನ್ನು ಎದುರಾಳಿ ಡೆಲ್ಲಿ ತಂಡಕ್ಕೆ ನೀಡುವಲ್ಲಿ ವಿಫಲವಾಗಿದೆ.
ಆರ್‌ಸಿಬಿ ಬ್ಯಾಟ್ಸ್‌ಮನ್‌ಗಳು ಮೊದಲಿಗೆ ವಿಕೆಟ್ ಕಾಪಾಡಿಕೊಂಡು ನಿಧಾನಗತಿಯ ಬ್ಯಾಟಿಂಗ್‌ಗೆ ಮುಂದಾದರು. ಆದರೆ ಆರಂಭ ಉತ್ತಮ ಆರಂಭ ಆರ್‌ಸಿಬಿಗೆ ದೊರೆಯಲಿಲ್ಲ. ಜೋಶ್ ಫಿಲಿಪ್ಪೆ ಕೇವಲ 12 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆದರೆ ದೇವದತ್ ಪಡಿಕ್ಕಲ್ ಟೂರ್ನಿಯಲ್ಲಿ 5ನೇ ಅರ್ಧ ಶತಕವನ್ನು ಬಾರಿಸಿ ಬಾರಿಸಿ ಮಿಂಚಿದರು.
ಆರ್‌ಸಿಬ ನಾಯಕ ವಿರಾಟ್ ಕೊಹ್ಲಿ 29 ರನ್‌ಗಳಿಸಲಷ್ಟೇ ಶಕ್ತರಾದರೆ, ಎಬಿ ಡಿವಿಲಿಯರ್ಸ್ 35 ರನ್‌ಗಳಿಸಿ ವಿಕೆಟ್ ಒಪ್ಪಿಸಿದರು. ಶಿವಂ ದುಬೆ 17 ರನ್‌ಗಳ ಕಾಣಿಕೆಯನ್ನು ಸಲ್ಲಿಸಿ ಔಟಾದರು. ಅಂತಿಮವಾಗಿ ನಿಗದಿತ 20 ಓವರ್‌ಗಳಲ್ಲಿ ಆರ್‌ಸಿಬಿ 152 ರನ್ ಗಳಿಸಲು ಶಕ್ತವಾಯಿತು.
ಡೆಲ್ಲಿ ತಂಡದ ಪರವಾಗಿ ಅನ್ರಿಕ್ ನೋರ್ಕಿಯಾ 3 ವಿಕೆಟ್ ಪಡೆದರೆ ರಬಡಾ 2 ವಿಕೆಟ್ ಉರುಳಿಸಿದರು. ಆರ್ ಅಶ್ವಿನ್ 4.50 ಸರಾಸರಿಯಲ್ಲಿ ರನ್ ನೀಡಿ 1 ವಿಕೆಟ್ ಪಡೆದರು. ಡೆತ್ ಒವರ್‌ನಲ್ಲಿ ಶ್ರೇಷ್ಠ ಪ್ರದರ್ಶನ ನೀಡುವ ಮೂಲಕ ಡೆಲ್ಲಿ ಬೌಲರ್‌ಗಳು ಹೆಚ್ಚಿನ ರನ್ ಗಳಿಸದಂತೆ ನೋಡಿಕೊಳ್ಳಲು ಯಶಸ್ವಿಯಾದರು.