For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಪ್ಲೇಆಫ್ ಪಂದ್ಯಗಳ ವೇಳಾಪಟ್ಟಿ ಹಾಗೂ ಸ್ಥಳದ ಮಾಹಿತಿ ನೀಡಿದ ಬಿಸಿಸಿಐ

IPL 2020: BCCI announces schedule and venue details foR playoffs and Women’s T20 Challenge

ಭಾನುವಾರದ ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯ ಮುಕ್ತಾಯದ ಬಳಿಕ ಈ ಬಾರಿಯ ಐಪಿಎಲ್‌ನ ಲೀಗ್‌ಹಂತದಲ್ಲಿ ಕೇವಲ 10 ಪಂದ್ಯಗಳಷ್ಟೇ ಬಾಕಿಯಿದೆ. ಹಾಗಾಗಿ ಪ್ಲೇಆಫ್ ಹಂತಕ್ಕೇರುವ ಲೆಕ್ಕಾಚಾರ ಎಲ್ಲಾ ತಂಡಗಳಲ್ಲೂ ನಡೆಯುತ್ತಿದೆ. ಈ ಸಂದರ್ಭದಲ್ಲಿ ಬಿಸಿಸಿಐ ಪ್ಲೇಆಫ್ ಹಂತದ ವೇಳಾಪಟ್ಟಿ ಹಾಗೂ ಪಂದ್ಯ ನಡೆಯುವ ಸ್ಥಳದ ಮಾಹಿತಿಯನ್ನು ಬಹಿರಂಗಪಡಿಸಿದೆ.

ಪ್ಲೇಆಫ್ ಹಾಗೂ ಫೈನಲ್ ಪಂದ್ಯಗಳು ನವೆಂಬರ್ 5ನೇ ತಾರೀಕಿನಿಂದ 10ರ ಅವಧಿಯಲ್ಲಿ ನಡೆಯಲಿದೆ. ಕ್ವಾಲಿಫೈಯರ್ 1 ನವೆಂಬರ್ 5 ರಂದು ದುಬೈನಲ್ಲಿ ನಡೆಯಲಿದೆ. ಅದಾದ ಬಳಿಕ 6ನೇ ತಾರಿಕಿನಂದು ಎಲಿಮಿನೇಟರ್ ಪಮದ್ಯ ನಡೆಯಲಿದೆ. ನವೆಂಬರ್ 2ನೇ ತಾರಿಕಿನಂದು ಅಬುಧಾಬಿಯಲ್ಲಿ ಕ್ವಾಲಿಫೈಯರ್ 2 ನಡೆಯಲಿದೆ. ಫೈನಲ್ ಪಂದ್ಯ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನವೆಂಬರ್ 10 ರಂದು ನಡೆಯಲಿದೆ.

2020 ಪ್ಲೇಆಫ್‌ಗಳ ಪೂರ್ಣ ವೇಳಾಪಟ್ಟಿ ಹೀಗಿದೆ:
ಕ್ವಾಲಿಫೈಯರ್ 1: ನವೆಂಬರ್ 5, ಸ್ಥಳ: ದುಬೈ, ಸಮಯ: ಭಾರತೀಯ ಕಾಲಮಾನ ಸಂಜೆ 7: 30 ಕ್ಕೆ
ಎಲಿಮಿನೇಟರ್: ನವೆಂಬರ್ 6, ಸ್ಥಳ: ಅಬುಧಾಬಿ, ಸಮಯ: ಭಾರತೀಯ ಕಾಲಮಾನ ಸಂಜೆ 7: 30 ಕ್ಕೆ
ಕ್ವಾಲಿಪೈಯರ್ 2: ನವೆಂಬರ್ 8, ಸ್ಥಳ: ಅಬುಧಾಬಿ, ಸಮಯ: ಭಾರತೀಯ ಕಾಲಮಾನ ಸಂಜೆ 7: 30 ಕ್ಕೆ
ಫೈನಲ್ ಪಂದ್ಯ: ನವೆಂಬರ್ 10, ಸ್ಥಳ: ದುಬೈ, ಸಮಯ: ಭಾರತೀಯ ಕಾಲಮಾನ ಸಂಜೆ 7: 30 ಕ್ಕೆ

ಸದ್ಯ ಟೂರ್ನಿಯಲ್ಲಿ 45 ಪಂದ್ಯಗಳು ಸಂಪೂರ್ಣವಾಗಿದ್ದು ಯಾವುದೇ ತಂಡಗಳು ಅಧಿಕೃತವಾಗಿ ಪ್ಲೇಆಫ್ ಹಂತಕ್ಕೆ ಇನ್ನೂ ಪ್ರವೇಶ ಪಡೆದುಕೊಂಡಿಲ್ಲ. ಆದರೆ ಮೊದಲ ಮೂರು ಸ್ಥಾನದಲ್ಲಿ ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ತಂಡಗಳು ಇದ್ದು ತಮ್ಮ ಟಿಕೆಟನ್ನು ಬಹುತೇಕ ಕಾಯ್ದಿರಿಸಿಕೊಂಡಿದೆ.

ಇನ್ನು ಇದೇ ಸಂದರ್ಭದಲ್ಲಿ ಬಿಸಿಸಿಐ ವಿಮೆನ್ಸ್ ಚಾಲೆಂಜರ್ ಟೂರ್ನಿಯ ವೇಳಾಪಟ್ಟಿಯನ್ನು ಕೂಡ ಬಿಡುಗಡೆಗೊಳಿಸಿದೆ. ಅದು ಈ ಕೆಳಗಿನಂತಿದೆ.
ಪಂದ್ಯ 1, ಸೂಪರ್ನೋವಾಸ್ vs ವೆಲಾಸಿಟಿ: ನವೆಂಬರ್ 4 ರಂದು ಶಾರ್ಜಾದಲ್ಲಿ ಸಂಜೆ 7: 30 ಕ್ಕೆ
ಪಂದ್ಯ 2, ವೆಲಾಸಿಟಿ vs ಟ್ರೈಲ್‌ಬ್ಲೇಜರ್ಸ್: ನವೆಂಬರ್ 5 ರಂದು ಶಾರ್ಜಾದಲ್ಲಿ ಸಂಜೆ 7: 30 ಕ್ಕೆ
ಪಂದ್ಯ 3, ಟ್ರೈಲ್‌ಬ್ಲೇಜರ್ಸ್ vs ಸೂಪರ್ನೋವಾಸ್: ನವೆಂಬರ್ 7 ರಂದು ಶಾರ್ಜಾದಲ್ಲಿ ಸಂಜೆ 7:30
ಪಂದ್ಯ 4, ಫೈನಲ್: ನವೆಂಬರ್ 9 ರಂದು ಶಾರ್ಜಾದಲ್ಲಿ ಸಂಜೆ 7: 30 ಕ್ಕೆ

Story first published: Sunday, October 25, 2020, 22:15 [IST]
Other articles published on Oct 25, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+