Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2020: ವಿಮೆನ್ಸ್ ಟಿ20 ಚಾಲೆಂಜ್‌ಗೆ ಮೂರು ತಂಡಗಳನ್ನು ಪ್ರಕಟಿಸಿದ ಬಿಸಿಸಿಐ

IPL 2020: BCCI announces squads for Women’s T20 Challenge

ಕಳೆದ ಬಾರಿಯಂತೆಯೇ ಈ ಬಾರಿಯೂ ಐಪಿಎಲ್‌ನಲ್ಲಿ ವಿಮೆನ್ಸ್ ಚಾಲೆಂಜರ್ಸ್ ಟೂರ್ನಿಯನ್ನು ಆಯೋಜಿಸಲಾಗುತ್ತದೆ. ನವೆಂಬರ್ 4ರಿಂದ 9ರ ಮಧ್ಯೆ ಯುಎಇನಲ್ಲಿ ಟೂರ್ನಿಯಲ್ಲಿ ಆಯೋಜಿಸಲು ಸಿದ್ಧತೆಗಳು ನಡೆದಿದೆ. ಈಗ ಈ ಟೂರ್ನಿಯಲ್ಲಿ ಪಾಲ್ಗೊಳ್ಳುವ ಹರ್ಮನ್ ಪ್ರೀತ್ ಕೌರ್, ಸ್ಮೃತಿ ಮಂಧಾನ ಹಾಗೂ ಮಿಥಾಲಿ ರಾಜ್ ನೇತೃತ್ವದ ಮೂರು ತಂಡಗಳು ಹಾಗೂ ಸದಸ್ಯರನ್ನು ಬಿಸಿಸಿಐ ಹೆಸರಿಸಿದೆ.

ಭಾರತ ಮಹಿಳಾ ತಂಡದ ಆಟಗಾರರ ಜೊತೆಗೆ ಈ ಟೂರ್ನಿಯಲ್ಲಿ ವಿದೇಶಿ ಕ್ರಿಕೆಟ್ ತಂಡದ ಪ್ರಮುಖ ಆಟಗಾರ್ತಿಯರು ಕೂಡ ಕಾಣಿಸಿಕೊಳ್ಳಲಿದ್ದಾರೆ. ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ವೆಸ್ಟ್ ಇಂಡೀಸ್, ಬಾಂಗ್ಲಾದೇಶ ಹಾಗೂ ನ್ಯೂಜಿಲೆಂಡ್ ತಂಡದ ಆಟಗಾರ್ತಿಯರು ನಾಲ್ಕು ಪಂದ್ಯಗಳ ಟೂರ್ನಿಯಲ್ಲಿ ಭಾಗಿಯಾಗಲಿದ್ದಾರೆ. ಜೊತೆಗೆ ಥಾಯ್‌ಲ್ಯಾಂಡ್‌ನ ಆಟಗಾರ್ತಿ ನತ್ಥಾಕನ್ ಚಂತಮ್ ಟೂರ್ನಿಯಲ್ಲಿ ಪಾಲ್ಗೊಳ್ಲುವ ಮೂಲಕ ಮೊದಲ ಥಾಯ್‌ಂಲ್ಯಾಂಡ್ ಕ್ರಿಕೆಟರ್ ಕೂಡ ಟೂರ್ನಿಯಲ್ಲಿ ಪಾಳ್ಗೊಳ್ಳುವಂತಾಗಲಿದೆ.

ಆರಂಭಿಕ ಪಂದ್ಯದಲ್ಲಿ ಕಳೆದ ಬಾರಿಯ ಫೈನಲಿಸ್ಟ್ ಆಗಿರುವ ಸೂಪರ್‌ನೋವಾಸ್ ತಂಡ ವೆಲೋಸಿಟ ತಂಡವನ್ನು ಎದುರಿಸಲಿದೆ. ನವೆಂಬರ್ 4, 5 ಹಾಗೂ 7ರಂದು ಲೀಗ್ ಪಂದ್ಯ ನಡೆಯಲಿದ್ದು 9ರಂದು ಫೈನಲ್ ಪಂದ್ಯ ನಡೆಯಲಿದೆ.

ಸೂಪರ್‌ನೋವಾಸ್: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಜೆಮಿಮಾ ರೊಡ್ರಿಗಸ್ (ವಿಕೆಟ್ ಕೀಪರ್), ಚಮರಿ ಅಟಪಟ್ಟು, ಪ್ರಿಯಾ ಪುನಿಯಾ, ಅನುಜಾ ಪಾಟೀಲ್, ರಾಧಾ ಯಾದವ್, ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ಶಶಿಕಲಾ ಸಿರಿವರ್ಧನೆ, ಪೂನಮ್ ಯಾದವ್, ಶಕೇರಾ ಸೆಲ್ಮನ್, ಅರುಂಧತಿ ರೆಡ್ಡಿ, ಪೂಜಾ ಅಯಬೊಂಗಾ ಖಕಾ, ಮುಸ್ಕನ್ ಮಲಿಕ್

ಟ್ರೈಲ್‌ಬ್ಲೇಜರ್ಸ್: ಸ್ಮೃತಿ ಮಂದಾನಾ (ನಾಯಕಿ), ದೀಪ್ತಿ ಶರ್ಮಾ (ವಿಕೆಟ್ ಕೀಪರ್), ಪೂನಮ್ ರಾವತ್, ರಿಚಾ ಘೋಷ್, ಡಿ.ಹೇಮಲತಾ, ನುಝತ್ ಪರ್ವೀನ್ (ವಿಕೆಟ್ ಕೀಪರ್), ರಾಜೇಶ್ವರಿ ಗಾಯಕ್ವಾಡ್, ಹರ್ಲೀನ್ ಡಿಯೋಲ್, ಜುಲಾನ್ ಗೋಸ್ವಾಮಿ, ಸಿಮರನ್ ದಿಲ್ ಬಹದ್ದೂರ್, ಸಲ್ಮಾ ಖತುನ್, ಸೋಫಿ ಎಕ್ಲೆಸ್ಟೋನ್, ನಥಕನ್ ಚಾಂಥಮ್, ದಿಯಾಂಡ್ರಾ ಡೊಟಿನ್, ಕಾಶ್ವೀ ಗೌತಮ್

ವೆಲೋಸಿಟಿ: ಮಿಥಾಲಿ ರಾಜ್ (ನಾಯಕಿ), ವೇದಾ ಕೃಷ್ಣಮೂರ್ತಿ (ವಿಕೆಟ್ ಕೀಪರ್), ಶಫಾಲಿ ವರ್ಮಾ, ಸುಷ್ಮಾ ವರ್ಮಾ (ವಿಕೆಟ್ ಕೀಪರ್), ಏಕ್ತಾ ಬಿಶ್ತ್, ಮಾನ್ಸಿ ಜೋಶಿ, ಶಿಖಾ ಪಾಂಡೆ, ದೇವಿಕಾ ವೈದ್ಯ, ಸುಶ್ರೀ ದಿಬ್ಯಾದರ್ಶಿನಿ, ಮನಾಲಿ ದಕ್ಷಿಣಪೀ, ಡೇನಿಯಲ್ ಲುಕ್ವಾಟ್ ಜಹನಾರಾ ಆಲಂ, ಎಂ.ಅನಘಾ.

Story first published: Monday, October 12, 2020, 10:15 [IST]
Other articles published on Oct 12, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+