Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2020: ಕ್ರಿಸ್ ಗೇಲ್ ಬಗ್ಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಪ್ರಶಂಸೆ

IPL 2020: BCCI president Sourav Ganguly in awe of Chris Gayle

ಈ ಬಾರಿಯ ಐಪಿಎಲ್‌ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸ್ಫೊಟಕ ಆಟಗಾರ ಕ್ರಿಸ್ ಗೇಲ್ ಆರಂಭಿಕ ಹಲವು ಪಂದ್ಯಗಳಲ್ಲಿ ಅವಕಾಶವನ್ನು ಪಡೆದಿರಲಿಲ್ಲ. ಇನ್ನು ಕೆಲ ಪಂದ್ಯಗಳಲ್ಲಿ ಹೊಟ್ಟೆನೋವಿನಿಂದ ಬಳಲುತ್ತಿದ್ದ ಕಾರಣ ಮೈದಾನದಿಂದ ಹೊರಗುಳಿದಿದ್ದರು. ಆದರೆ ಇಂತಾ ಕಠಿಣ ಸಂದರ್ಭದಲ್ಲೂ ಕ್ರಿಸ್ ಗೇಲ್ ತಮ್ಮ ಎಂದಿನ ಹಾಸ್ಯ ಪ್ರವೃತ್ತಿಯಿಂದಲೇ ಟ್ವೀಟ್‌ಗಳನ್ನು ಮಾಡುತ್ತಾ ಅಪ್‌ಡೇಟ್‌ಗಳನ್ನು ನೀಡುತ್ತಿದ್ದರು.

ಆದರೆ ಕ್ರಿಸ್ ಗೇಲ್ ಅವರ ಈ ಸಂದರ್ಭದ ಬಗ್ಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿಕೆಯನ್ನು ನೀಡಿದ್ದಾರೆ. "ಕ್ರಿಸ್ ಗೇಲ್ ನಗಿಸಿಕೊಂಡು ಖುಷಿಯಿಂದ ಇರುವಂತೆ ನಾವೆಲ್ಲಾ ಭಾವಿಸಿರುತ್ತೇವೆ. ಆದರೆ ತಂಡದಿಂದ ಹೊರಗುಳಿದ ಕಾರಣಕ್ಕೆ ಅವರು ಯಾವಾಗಲೂ ಚುಚ್ಚಿಸಿಕೊಂಡವರಂತೆ ಇದ್ದರು. ಇದು ನಾವು ಅವರಿಂದ ನೋಡಿ ಕಲಿಯಬೇಕಾಗಿರುವ ಸಂಗತಿ. ಐಪಿಎಲ್ ಎಂಬುದು ಅತಿಯಾದ ಸ್ಪರ್ಧೆ" ಎಂದು ಸೌರವ್ ಗಂಗೂಲಿ ಹೇಳಿದ್ದಾರೆ.

ಇನ್ನು ಇದೇ ಸಂದರ್ಭದಲ್ಲಿ ಗಂಗೂಲಿ ಈ ಬಾರಿಯ ಐಪಿಎಲ್‌ನಲ್ಲಿ ತಮ್ಮ ನೆಚ್ಚಿನ ಕ್ಷಣವನ್ನು ಹೇಳಿಕೊಂಡಿದ್ದಾರೆ. ಐಪಿಎಲ್ ಹಿನ್ನೆಲೆಯಲ್ಲಿ ಯುಎಇನಲ್ಲೇ ಉಳಿದುಕೊಂಡಿರುವ ಗಂಗೂಲಿ "ಈ ಬಾರಿಯ ಐಪಿಎಲ್‌ನಲ್ಲಿ ಕೇವಲ ಒಂದು ಎರಡು ಕ್ಷಣಗಳ ಬಗ್ಗೆ ಹೇಳಲು ಸಾಧ್ಯವಿಲ್ಲ. ಅಂತಾ ಹಲವು ಸಂದರ್ಭಗಳು ನಮ್ಮ ಮುಂದಿದೆ" ಎಂದು ಪ್ರತಿಕ್ರಿಯಿಸಿದ್ದಾರೆ

ಈ ಬಾರಿಯ ಟೂರ್ನಿಯೇ ವಾವ್ ಎನಿಸುವಂತಿದೆ. ಇದರಲ್ಲಿ ಒಂದು ಕ್ಷಣವನ್ನು ಆಯ್ಕೆ ಮಾಡಿಕೊಳ್ಳಲು ನನ್ನಿಂದ ಸಾಧ್ಯವಿಲ್ಲ. ಕೆಎಲ್ ರಾಹುಲ್, ಶಿಖರ್ ಧವನ್, ಮಯಾಂಕ್ ಅಗರ್ವಾಲ್ ಬ್ಯಾಟಿಂಗ್, ಕೆಲ ಫೀಲ್ಡಿಂಗ್‌ಗಳು, ಜಸ್ಪ್ರೀತ್ ಬೂಮ್ರಾ, ಆನ್ರಿಕ್ ನೋರ್ಕಿಯಾ, ಕಗಿಸೋ ರಬಡಾ ಮೊಹಮ್ಮದ್ ಶಮಿ ಬೌಲಿಂಗ್" ಎಂದು ತಮ್ಮ ನೆಚ್ಚಿನ ಕ್ಷಣಗಳ ಬಗ್ಗೆ ವಿವರಿಸಿದರು.

Story first published: Friday, October 23, 2020, 10:24 [IST]
Other articles published on Oct 23, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+