Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್: ಯುಎಇ ಕ್ರಿಕೆಟ್ ಬೋರ್ಡ್‌ಗೆ ಸ್ವೀಕಾರ ಪತ್ರ ರವಾನಿಸಿದ ಬಿಸಿಸಿಐ

IPL 2020: BCCI sends acceptance letter to UAE Cricket Board

ನವದೆಹಲಿ, ಜುಲೈ 27: ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಗೆ ಆತಿಥ್ಯ ವಹಿಸಲು ಮುಂದಾಗಿದ್ದ ಯುನೈಟೆಡ್ ಅರಬ್ ಎಮಿರೇಟ್ಸ್ ಕ್ರಿಕೆಟ್ ಬೋರ್ಡ್‌ಗೆ ಸ್ವೀಕಾರ ಪತ್ರ ರವಾನಿಸಲಾಗಿದೆ ಎಂದು ಐಪಿಎಲ್ ಆಡಳಿತ ಮಂಡಳಿಯ ಅಧ್ಯಕ್ಷ ಬ್ರಿಜೇಶ್ ಪಟೇಲ್ ಖಾತರಿಪಡಿಸಿದ್ದಾರೆ.

'ಹೌದು, ನಾವು ಎಮಿರೇಟ್ಸ್ ಕ್ರಿಕೆಟ್ ಬೋರ್ಡ್ (ಇಸಿಬಿ)ಗೆ ಸ್ವೀಕಾರ ಪತ್ರ ರವಾನಿಸಿದ್ದೇವೆ. ಐಪಿಎಲ್ ಅನ್ನು ಆಯೋಜಿಸುವ ನಿಟ್ಟಿನಲ್ಲಿ ಬಿಸಿಸಿಐ ಮತ್ತು ಇಸಿಬಿ ಎರಡೂ ಬೋರ್ಡ್‌ಗಳೂ ಕಾರ್ಯ ನಿರ್ವಹಿಸಲಿದೆ,' ಎಂದು ಬ್ರಿಜೇಶ್ ಹೇಳಿರುವುದಾಗಿ ಖಲೀಜ್ ಟೈಮ್ಸ್ ವರದಿ ಮಾಡಿದೆ.

ವರದಿಯ ಪ್ರಕಾರ, 13ನೇ ಆವೃತ್ತಿಯ ಐಪಿಎಲ್ ಆಯೋಜಿಸಲು ಕಳೆದ ಏಪ್ರಿಲ್‌ನಲ್ಲಿ ಇಸಿಬಿ, ಬಿಸಿಸಿಐಗೆ ಪ್ರಸ್ತಾಪ ಪತ್ರ ರವಾನಿಸಿತ್ತು. ಅದಕ್ಕೆ ಬಿಸಿಸಿಐ ಔಪಚಾರಿಕವಾಗಿ ಪ್ರತಿಕ್ರಿಯಿಸಿರಲಿಲ್ಲ. ಯುಎಇಯಲ್ಲಿ ಐಪಿಎಲ್‌ ನಡೆಸಲು ಈಗ ಬಿಸಿಸಿಐ ಔಪಚಾರಿಕವಾಗಿ ಸ್ವೀಕಾರ ಪತ್ರ ಕಳುಹಿಸಿದೆ ಎನ್ನಲಾಗಿದೆ.

ಮಾರ್ಚ್ 29ರಂದೇ ಮುಂಬೈನಲ್ಲಿ ಆರಂಭವಾಗಬೇಕಿದ್ದ ಐಪಿಎಲ್, ಕೊರೊನಾವೈರಸ್‌ನಿಂದಾಗಿ ಮುಂದೂಡಲ್ಪಟ್ಟಿತ್ತು. ಭಾರತದಲ್ಲಿ ಕೊರೊನಾ ಭೀತಿ ಹೆಚ್ಚುತ್ತಲೇ ಇರುವುದರಿಂದ ಮುಂದೂಡಲಾಗಿರುವ ಐಪಿಎಲ್ ಅನ್ನು ಯುಎಇಯಲ್ಲಿ ನಡೆಸಲು ನಿರ್ಧರಿಸಲಾಗಿದೆ. ಸೆಪ್ಟೆಂಬರ್‌ 19ರಿಂದ ಯುಎಇನಲ್ಲಿ ಐಪಿಎಲ್ ಆರಂಭವಾಗಲಿದೆ ಎನ್ನಲಾಗುತ್ತಿದೆಯಾದರೂ ಬಿಸಿಸಿಐ ಅಧಿಕೃತವಾಗಿ ವೇಳಾಪಟ್ಟಿ ಪ್ರಕಟಿಸಿಲ್ಲ.

Story first published: Monday, July 27, 2020, 16:01 [IST]
Other articles published on Jul 27, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+