For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಇಂದಿನಿಂದ ಆರಂಭ: ಜಾಲತಾಣದಲ್ಲಿ ಪಂದ್ಯ ವೀಕ್ಷಿಸೋದು ಹೇಗೆ?

IPL 2020 Begins from Today: How to watch Dream11 IPL 2020 Online

ಬೆಂಗಳೂರು: ಇಂದಿನಿಂದ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭವಾಗಲಿದೆ. ಆರಂಭಿಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಕಾದಾಡಲಿವೆ. ಈ ಬಾರಿಯ ಐಪಿಎಲ್ ಮಾರ್ಚ್‌ನಲ್ಲಿ ಆರಂಭವಾಗಬೇಕಾಗಿತ್ತು. ಆದರೆ ಕೊರೊನಾದಿಂದಾಗಿ ಮುಂದೂಡಲ್ಪಟ್ಟಿತ್ತು.

ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಸೆಪ್ಟೆಂಬರ್ 19ರಿಂದ ನವೆಂಬರ್ 10ರ ವರೆಗೆ ನಡೆಯಲಿರುವ 13ನೇ ಆವೃತ್ತಿಯ ಐಪಿಎಲ್‌ ಸ್ಟಾರ್ ಸ್ಪೋರ್ಟ್ಸ್‌ ಚಾನೆಲ್‌ಗಳಲ್ಲಿ ನೇರಪ್ರಸಾರಗೊಳ್ಳಲಿದೆ. ನೆಟ್ಟಿಗರೂ ಕೂಡ ಡಿಸ್ನಿ+ಹಾಟ್‌ಸ್ಟಾರ್ ಮೂಲಕ ಪಂದ್ಯ ವೀಕ್ಷಿಸಬಹುದಾಗಿದೆ.

ಜಾಲತಾಣಿಗರು ಪಂದ್ಯ ವೀಕ್ಷಿಸುವುದಾದರೆ ಡಿಸ್ನಿ+ಹಾಟ್‌ಸ್ಟಾರ್‌ನಲ್ಲಿ ವಿಐಪಿ ಅಥವಾ ಪ್ರೀಮಿಯಮ್ ಪ್ಲ್ಯಾನ್ ಹಾಕಿಸಿರಬೇಕು. 399 ರೂ.ಗಳು ಪ್ಲ್ಯಾನ್ ಹಾಕಿಸಿದರೆ ವಿಐಪಿ ಸಬ್ಸ್‌ಕ್ರಿಪ್ಶನ್ ಸಿಗುತ್ತದೆ. ಡಿಸ್ನಿ+ಹಾಟ್‌ಸ್ಟಾರ್‌ ಪ್ರೀಮಿಯಮ್ ಸಬ್ಸ್‌ಕ್ರಿಪ್ಶನ್ ತಿಂಗಳಿಗೆ 299 ರೂ., ವಾರ್ಷಿಕ 1499 ರೂ. ಇದೆ.

ಜಿಯೋ ಟಿವಿಯಲ್ಲೂ ಐಪಿಎಲ್ ವೀಕ್ಷಿಸಬಹುದಾಗಿದೆ. 499 ರೂ., 777 ರೂ. ಧನ್ ಧನಾ ಧನ್ ರೀಚಾರ್ಜ್ ಆಫರ್ ಪಡೆದುಕೊಂಡರೆ ಡಿಸ್ನಿ+ಹಾಟ್‌ಸ್ಟಾರ್‌ ವಿಐಪಿ ವಾರ್ಷಿಕ ಚಂದಾದರಿಕೆ ಉಚಿತವಾಗಿ ಸಿಗಲಿದೆ. ಜೊತೆಗೆ ಇನ್ನೊಂದಿಷ್ಟು ಅನುಕೂಲಗಳು ಸಿಗಲಿವೆ.

ನೀವು 2698 ರೂ.ಗಳ ಏರ್‌ಟೆಲ್ ರೀಚಾರ್ಜ್ ಮಾಡಿಕೊಂಡರೆ, 365 ದಿನಗಳ ಕಾಲ ಅನ್‌ಲಿಮಿಟೆಡ್ ಕಾಲ್, ದಿನಕ್ಕೆ 2 GB ಡೇಟಾ ಆಫರ್ ಜೊತೆಗೆ ಒಂದು ವರ್ಷದ ಡಿಸ್ನಿ+ಹಾಟ್‌ಸ್ಟಾರ್ ವಿಐಪಿ ಚಂದಾದಾರಿಕೆ ಸಿಗುತ್ತದೆ. 448 ರೂ.ಗಳ ಏರ್‌ಟೆಲ್ ರೀಚಾರ್ಜ್ ಮಾಡಿಕೊಂಡರೆ, 28 ದಿನಗಳವರೆಗೆ ದಿನಕ್ಕೆ 3GB ಡೇಟಾ, ಅನ್‌ಲಿಮಿಟೆಡ್ ಕಾಲ್ ಆಫರ್ ಜೊತೆಗೆ 1 ವರ್ಷದ ಡಿಸ್ನಿ+ಹಾಟ್‌ಸ್ಟಾರ್ ವಿಐಪಿ ಚಂದಾದಾರಿಕೆ ಸಿಗಲಿದೆ.

Story first published: Saturday, September 19, 2020, 18:12 [IST]
Other articles published on Sep 19, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+