
ಅಬುಧಾಬಿ, ಅ. 6: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ನ ಜನಪ್ರಿಯ ಆಟಗಾರ ಇಂಗ್ಲೆಂಡಿನ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಸದ್ಯ ಯುಎಇಗೆ ಬಂದಿಳಿದಿದ್ದು, ಸದ್ಯ ಕ್ವಾರಂಟೈನ್ ಅವಧಿಯಲ್ಲಿದ್ದಾರೆ. ಈ ನಡುವೆ ಹೋಟೆಲ್ ರೂಮಿನಲ್ಲಿದ್ದುಕೊಂಡೂ ತಮ್ಮ ತಂಡವನ್ನು ಬೆಂಬಲಿಸುತ್ತಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಇದೇ ಮೊದಲ ಬಾರಿಗೆ ಕಣಕ್ಕಿಳಿದ ಅಂಡರ್ 19 ಕ್ರಿಕೆಟರ್ ಕಾರ್ತಿಕ್ ತ್ಯಾಗಿ ಬಗ್ಗೆ ತಮಗನಿಸಿದ್ದನ್ನು ಬೆನ್ ಸ್ಟೋಕ್ಸ್ ಟ್ವೀಟ್ ಮಾಡಿ ತಿಳಿಸಿದ್ದಾರೆ.
ಶೇಖ್ ಜಾಯೇದ್ ಸ್ಟೇಡಿಯಂನಲ್ಲಿ ಕಾರ್ತಿಕ್ ತ್ಯಾಗಿ ಬೌಲಿಂಗ್ ಶೈಲಿ ಬಗ್ಗೆ ಕಾಮೆಂಟೆಟರ್ಸ್ ಕೂಡಾ ಚರ್ಚಿಸುತ್ತಿದ್ದರು. ಇದೇ ವೇಳೆ ಸ್ಟೋಕ್ಸ್ ಟ್ವೀಟ್ ಮಾಡಿ ಬ್ರೆಟ್ ಲೀಯಂತೆ ಬ್ರೆಟ್ ಲೀಯಂತೆ ರನ್ ಅಪ್, ಇಶಾಂತ್ ರೀತಿ ಎಸೆತ ತ್ಯಾಗಿ ಬಗ್ಗೆ ಸ್ಟೋಕ್ಸ್ ಟ್ವೀಟ್ ಮಾಡಿ, ತ್ಯಾಗಿ ಅವರು ಬ್ರೆಟ್ ಲೀಯಂತೆ ರನ್ ಅಪ್ ಹಾಗೂ ಇಶಾಂತ್ ಶರ್ಮರಂತೆ ಬೌಲಿಂಗ್ ಡೆಲಿವರಿ ಹೊಂದಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
ಕೆಲವರು ಇದೇನು ಈ ರೀತಿ ಒಗಟಿನಲ್ಲಿ ಟ್ವೀಟ್ ಮಾಡಿದ್ದೀರಾ. ಇವೇನು ತ್ಯಾಗಿಯನ್ನು ಹೊಗಳುತ್ತಿದ್ದೀರಾ? ಅಥವಾ..? ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ಉತ್ತರಿಸಿರುವ ಸ್ಟೋಕ್ಸ್, ನಾನು ನನ್ನ ಗಮನಕ್ಕೆ ಬಂದಿದ್ದನ್ನು ತಿಳಿಸಿದ್ದೇನೆ ಅಷ್ಟೇ ಎಂದಿದ್ದಾರೆ.
ಆಸ್ಟ್ರೇಲಿಯಾದ ಬೌಲಿಂಗ್ ದಿಗ್ಗಜ ಬ್ರೆಟ್ ಲೀ ಅವರನ್ನು ಮಾನಸಿಕ ಗುರುವಾಗಿ ಪರಿಗಣಿಸಿರುವ ತ್ಯಾಗಿ ಮೊದಲ ಪಂದ್ಯದಲ್ಲೇ 4 ಓವರ್ ಗಳಲ್ಲಿ 36ರನ್ ನೀಡಿ ಒಂದು ವಿಕೆಟ್ ಗಳಿಸಿದ್ದಾರೆ. ಬೌನ್ಸರ್ ಮೂಲಕ ಉತ್ತಮವಾಗಿ ಆಡುತ್ತಿದ್ದ ಮುಂಬೈನ ಆರಂಭಿಕ ಆಟಗಾರ ಡಿ ಕಾಕ್ ಅವರು ವಿಕೆಟ್ ಕೀಪರ್ ಜೋಸ್ ಬಟ್ಲರ್ ಗೆ ಕ್ಯಾಚಿತ್ತು ನಿರ್ಗಮಿಸುವಂತೆ ಮಾಡಿದ್ದಾರೆ.
ಉತ್ತರ ಪ್ರದೇಶ ಮೂಲದ 19 ವರ್ಷ ವಯಸ್ಸಿನ ಕಾರ್ತಿಕ್ ತ್ಯಾಗಿ ವಿಶ್ವಕಪ್ 2020ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಕ್ವಾರ್ಟರ್ ಫೈನಲ್ ನಲ್ಲಿ 4/24 ಗಳಿಸಿ ಮಿಂಚಿದ್ದರು. ಐಪಿಎಲ್ 2020ರಲ್ಲಿ 1.30 ಕೋಟಿ ನೀಡಿ ರಾಜಸ್ಥಾನ ರಾಯಲ್ಸ್ ಖರೀದಿಸಿತ್ತು.
ಐಪಿಎಲ್ 2020: ಸಮಗ್ರ ಸುದ್ದಿ, ವಿಶ್ಲೇಷಣೆ, ಅಂಕಿ ಅಂಶಗಳ್ಳುಳ್ಳ ವಿಶೇಷ ಪುಟ