Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವದಲ್ಲೇ ಐಪಿಎಲ್ ಬೆಸ್ಟ್ ಟೂರ್ನಮೆಂಟ್: ಸೌರವ್ ಗಂಗೂಲಿ

IPL 2020: ‘Best tournament in the world,’ says Sourav Ganguly

ದುಬೈ: ಸದ್ಯ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ 13ನೇ ಆವೃತ್ತಿ ಆರಂಭದಲ್ಲಿ ಅನೇಕ ಸವಾಲುಗಳನ್ನು ಎದುರುಗೊಂಡಿತ್ತು. ಒಂದು ಸಾರಿ ಮುಂದೂಡಲ್ಪಟ್ಟಿತ್ತು ಕೂಡ. ಕೊರೊನಾ ವೈರಸ್ ಕಾರಣ ಎಲ್ಲಿ ಟೂರ್ನಿ ನಡೆಸೋದು ಅನ್ನೋ ಇಕ್ಕಟ್ಟಿನಲ್ಲಿ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಇತ್ತು.

ಮಾರ್ಚ್‌ನಲ್ಲಿ ಆರಂಭಗೊಳ್ಳಬೇಕಿದ್ದ ಐಪಿಎಲ್ ಟೂರ್ನಿ ಕೊರೊನಾ ಭೀತಿಯಿಂದಾಗಿ ಸೆಪ್ಟೆಂಬರ್ 19ರಂದು ಯುಎಇಯಲ್ಲಿ ಆರಂಭಗೊಂಡಿತು. ಟೂರ್ನಿ ಈಗ ಯಶಸ್ವಿಯಾಗಿ ನಡೆಯುತ್ತಿದೆ. ದಾಖಲೆಯ ವೀಕ್ಷಣೆಗೆ ಕಾರಣವಾಗಿದೆ. ಹೀಗಾಗಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಖುಷಿ ವ್ಯಕ್ತಪಡಿಸಿದ್ದಾರೆ.

ಐಪಿಎಲ್ ಆಯೋಜಿಸುವಾಗಿನ ಸವಾಲುಗಳನ್ನು ಸ್ಮರಿಸಿದ ಗಂಗೂಲಿ, 'ನಂಬಲು ಸಾಧ್ಯವಿಲ್ಲ. ನಾನು ಅಚ್ಚರಿಗೊಂಡಿದ್ದೇನೆ. ಟೂರ್ನಿಗೆ ಸಂಬಂಧಿಸಿ ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡುವಾಗ ಈ ವರ್ಷ ಟೂರ್ನಿ ನಡೆಸಲಾಗುತ್ತೋ ಇಲ್ಲವೋ ಎಂದು ಗೊಂದಲಗೊಂಡಿದ್ದೆ. ಬಯೋ ಬಬಲ್ ಬಗ್ಗೆಯೂ ನೂರಾರು ಪ್ರಶ್ನೆಗಳಿತ್ತು. ಆದರೆ ಅವುಗಳನ್ನೆಲ್ಲಾ ಮೀರಿ ಟೂರ್ನಿ ಯಶಸ್ವಿಯಾಗುತ್ತಿದೆ,' ಎಂದಿದ್ದಾರೆ.

ಸ್ಟಾರ್ ಸ್ಪೋರ್ಟ್ಸ್‌ನ ಸ್ಟಾರ್ ಲೈವ್ ಶೋನಲ್ಲಿ ಮಾತನಾಡಿದ ದಾದಾ, 'ನಮ್ಮ ಆಯೋಚನೆಗಳೊಂದಿಗೆ ನಾವು ಟೂರ್ನಿಯತ್ತ ಮುನ್ನಡೆಯಲು ಯೋಚಿಸಿದೆವು. ಯಾಕೆಂದರೆ ಪ್ರತಿಬೊಬ್ಬರೂ ಪಂದ್ಯ ವೀಕ್ಷಿಸುವ ಗೇಮ್ ಮತ್ತೆ ಬರಬೇಕು ಅಂತ ನಾವು ಯೋಚಿಸಿದ್ದೆವು,' ಎಂದು ವಿವರಿಸಿದ್ದಾರೆ.

Story first published: Thursday, October 29, 2020, 9:44 [IST]
Other articles published on Oct 29, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+