ಬ್ರಾಡ್ ಹಾಗ್ ನೆಚ್ಚಿನ 'ಪ್ರಿ-ಐಪಿಎಲ್ 2020 XI'ನಲ್ಲಿ ಧೋನಿ, ಎಬಿಡಿ ಇಲ್ಲ!

ಸಿಡ್ನಿ: ಆಸ್ಟ್ರೇಲಿಯಾದ ಮಾಜಿ ಸ್ಪಿನ್ನರ್ ಬ್ರಾಡ್ ಹಾಗ್ ಐಪಿಎಲ್ ಆರಂಭಕ್ಕೂ ಮುನ್ನ 'ಪ್ರಿ-ಐಪಿಎಲ್ 2020 XI' ಪ್ರಕಟಿಸಿದ್ದಾರೆ. ಈ ತಂಡದಲ್ಲಿ ಬಲಿಷ್ಠ ಆಟಗಾರರೆನಿಸಿದ ದೊಡ್ಡ ದೊಡ್ಡ ಹೆಸರುಗಳೇ ಕಾಣಿಸುತ್ತಿಲ್ಲ. ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ನಿವೃತ್ತಿ ಘೋಷಿಸಿರುವ ಭಾರತದ ಮಾಜಿ ನಾಯಕ, ಚೆನ್ನೈ ಸೂಪರ್ ಕಿಂಗ್ಸ್ ಕ್ಯಾಪ್ಟನ್ ಎಂಎಸ್ ಧೋನಿ ಹೆಸರೂ ಪಟ್ಟಿಯಲ್ಲಿಲ್ಲ. ಧೋನಿ ನಾಯಕತ್ವದ ಸಿಎಸ್‌ಕೆ ತಂಡ ಒಟ್ಟು ಮೂರು ಬಾರಿ ಐಪಿಎಲ್ ಚಾಂಪಿಯನ್ಸ್ ಪಟ್ಟ ಅಲಂಕರಿಸಿದೆ. ಆದರೆ ಕೂಲ್ ಕ್ಯಾಪ್ಟನ್ ಹೆಸರನ್ನೇ ಹಾಗ್ ಕೈಬಿಟ್ಟಿದ್ದಾರೆ.
ಅಷ್ಟೇ ಅಲ್ಲ, ರಾಯಲ್ ಚಾಲೆಂಜರ್ಸ್ ಸ್ಟಾರ್ ಆಟಗಾರ, ದಕ್ಷಿಣ ಆಫ್ರಿಕಾದ ಎಬಿ ಡಿ ವಿಲಿಯರ್ಸ್ ಹೆಸರು ಕೂಡ ಹಾಗ್ ಪ್ರಕಟಿಸಿರುವ ಪಟ್ಟಿಯಲ್ಲಿ ಇಲ್ಲ. ಇನ್ನು ಕಿಂಗ್ಸ್ ಇಲೆವೆನ್ ಪಂಜಾಬ್‌ನ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಕೂಡ ಕಾಣಿಸಿಕೊಂಡಿಲ್ಲ.
ತಾನೇಕೆ ಎಂಎಸ್ ಧೋನಿ, ಎಬಿ ಡಿ ವಿಲಿಯರ್ಸ್ ಮತ್ತು ಕ್ರಿಸ್ ಗೇಲ್ ಅವರನ್ನು ನೆಚ್ಚಿನ ತಂಡದಿಂದ ಹೊರಗಿಟ್ಟಿದ್ದೇನೆ ಅನ್ನೋದಕ್ಕೆ ಹಾಗ್ ಕಾರಣ ಕೊಟ್ಟಿದ್ದಾರೆ.

ಪ್ರಮುಖರೇಕೆ ಇಲ್ಲ?
ತನ್ನ ಇತ್ತೀಚಿನ ಯೂಟ್ಯೂಬ್ ವಿಡಿಯೋದಲ್ಲಿ ಮಾತನಾಡಿದ ಬ್ರಾಡ್ ಹಾಗ್, 'ನನ್ನ ಪಟ್ಟಿಯಲ್ಲಿ ಎಂಎಸ್ ಧೋನಿ, ಎಬಿ ಡಿ ವಿಲಿಯರ್ಸ್ ಮತ್ತು ಕ್ರಿಸ್ ಗೇಲ್ ಅವರನ್ನು ಸೇರಿಸಿಲ್ಲ. ಯಾಕೆಂದರೆ ಅವರು ಕೊಂಚ ಹಳಬರಾದರು. ಅವರು ಆಟ ಬಲಿಸಲು ಶಕ್ತರಲ್ಲ,' ಎಂದಿದ್ದಾರೆ.

ಆರಂಭಿಕ ಬ್ಯಾಟ್ಸ್‌ಮನ್‌ಗಳು
ಹಾಗ್ ನೆಚ್ಚಿನ 'ಪ್ರಿ-ಐಪಿಎಲ್ 2020 XI'ನಲ್ಲಿ ಆರಂಭಿಕರಾಗಿ ಆಸ್ಟ್ರೇಲಿಯಾ ಆಟಗಾರ, ಸನ್ ರೈಸರ್ಸ್ ಹೈದರಾಬಾದ್‌ನ ಆಟಗಾರ ಡೇವಿಡ್ ವಾರ್ನರ್ ಮತ್ತು ಭಾರತದ ಲಿಮಿಟೆಡ್ ಓವರ್ ಕ್ರಿಕೆಟ್ ಉಪನಾಯಕ, ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಇದ್ದಾರೆ.

ತಂಡದ ನಾಯಕತ್ವ
ಭಾರತದ ನಾಯಕ ವಿರಾಟ್ ಕೊಹ್ಲಿ, ಹಾಗ್ ಅವರ ಈ ತಂಡದಲ್ಲಿ ಮೂರನೇ ಕ್ರಮಾಂಕದಲ್ಲಿದ್ದಾರೆ. ಇನ್ನು ತಂಡದ ನಾಯಕತ್ವ ನ್ಯೂಜಿಲೆಂಡ್ ವಿಶ್ವಕಪ್ ನಾಯಕ ಕೇನ್ ವಿಲಿಯಮ್ಸನ್ ಪಾಲಾಗಿದೆ. ಹಾಗ್ ನೆಚ್ಚಿನ ಈ ತಂಡದಲ್ಲಿ ರಿಷಭ್ ಪಂತ್, ಯುಜುವೇಂದ್ರ ಚಾಹಲ್, ರವೀಂದ್ರ ಜಡೇಜಾ ಕಾಣಸಿಕೊಂಡಿದ್ದಾರೆ.

ಹಾಗ್ ನೆಚ್ಚಿನ ಪ್ರಿ-ಐಪಿಎಲ್ 2020 XI
ಡೇವಿಡ್ ವಾರ್ನರ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೇನ್ ವಿಲಿಯಮ್ಸನ್ (ನಾಯಕ), ರಿಷಭ್ ಪಂತ್, ಆ್ಯಂಡ್ರೆ ರಸೆಲ್, ರವೀಂದ್ರ ಜಡೇಜಾ, ಸುನಿಲ್ ನರೈನ್, ಯುಜುವೇಂದ್ರ ಚಾಹಲ್, ಭುವನೇಶ್ವರ್ ಕುಮಾರ್, ಜಸ್‌ಪ್ರೀತ್ ಬೂಮ್ರಾ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications