ಐಪಿಎಲ್ 2020: ಮುಂಬೈ ಇಂಡಿಯನ್ಸ್‌ಗೆ ಸವಾಲಾಗಲಿರುವ ಸಂಗತಿ ಹೇಳಿದ ಬ್ರಾಡ್ ಹಾಗ್

ಆಸ್ಟ್ರೇಲಿಯಾದ ಮಾಜಿ ಸ್ಪಿನ್ನರ್ ಬ್ರಾಡ್ ಹಾಗ್ ಐಪಿಎಲ್‌ನ ಎಲ್ಲಾ ತಂಡಗಳ ಬಗ್ಗೆ ವಿಮರ್ಷೆಯನ್ನು ಮಾಡುತ್ತಾ ಸುದ್ದಿಯಾಗಿದ್ದಾರೆ. ಈಗ ಮುಂಬೈ ಇಂಡಿಯನ್ಸ್ ತಂಡದ ಬಲಾಬಲದ ಬಗ್ಗೆ ಬ್ರಾಡ್ ಹಾಗ್ ಹೇಳಿಕೆಯನ್ನು ನೀಡಿದ್ದಾರೆ. ಐದನೇ ಬಾರಿಗೆ ಐಪಿಎಲ್ ಟ್ರೋಫಿ ಎತ್ತಿ ಹಿಡಿಯಲು ರೋಹಿತ್ ಬಳಗಕ್ಕಿರುವ ಸವಾಲುಗಳು ಏನು ಎಂಬುದನ್ನು ಹಾಗ್ ಮಾತನಾಡಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡ ಗುಣಮಟ್ಟದ ಆಲ್‌ರೌಂಡರ್‌ಗಳು ಸ್ಪಿನ್ನರ್‌ಗಳು ವೇಗಿಗಳು ಹಾಗೂ ಬ್ಯಾಟ್ಸ್‌ಮನ್‌ಗಳನ್ನು ಹೊಂದಿದೆ. ಆದರೆ ಆಡುವ ಬಳಗದ ಆಯ್ಕೆ ಪ್ರಕ್ರಿಯೆ ಮುಂಬೈ ಪಾಲಿಗೆ ಅತಿ ಮುಖ್ಯವಾಗಿದೆ. ಅದರಲ್ಲೂ ವಿದೇಶಿ ಆಟಗಾರರ ಹೊಂದಾಣಿಕೆ ತಂಡದ ಪಾಲಿಗೆ ಬಹಳ ಮುಖ್ಯವಾಗಿದೆ ಎಂದು ಹಾಗ್ ಅಭಿಪ್ರಾಯ ವ್ಯಕ್ತಡಿಸಿದ್ದಾರೆ.
ಮುಂಬೈ ಇಂಡಿಯನ್ಸ್ ಬ್ಯಾಟಿಂಗ್ ಕ್ರಮಾಂಕದ ಅಗ್ರ ನಾಲ್ಕು ಬ್ಯಾಟ್ಸ್‌ಮನ್‌ಗಳು ಪ್ರಮುಖ ಪಾತ್ರವಹಿಸಲಿದ್ದಾರೆ. ಕ್ರಿಸ್ ಲಿನ್ ಅವರನ್ನು ಮುಂಬೈ ತೆಕ್ಕೆಗೆ ಹಾಕಿಕೊಂಡಿರುವುದರಿಂದ ತಂಡದ ಅಗ್ರ 4 ರಲ್ಲಿ ನಾಯಕ ರೋಹಿತ್ ಶರ್ಮಾ, ಕ್ವಿಂಟನ್ ಡಿ ಕಾಕ್, ಸೂರ್ಯಕುಮಾರ್ ಯಾದವ್ ಮತ್ತು ಲಿನ್ ಒಳಗೊಳ್ಳಬಹುದು ಎಂದು ಹಾಗ್ ಹೇಳಿದ್ದಾರೆ.
"ಮುಂಬೈ ಇಂಡಿಯನ್ಸ್‌ಗೆ ಇರುವ ಸವಾಲೆಂದರೆ ಆಡುವ ಬಳಗದ ಆಯ್ಕೆ. ಅವರು ತಮ್ಮ ಸಾಗರೋತ್ತರ ಆಟಗಾರರೊಂದಿಗೆ ಯಾವ ರೀತಿ ಹೊಂದಾಣಿಕೆ ಮಾಡಿಕೊಂಡು ಆಡುವ ಬಳಗದಲ್ಲಿ ಬಳಸಿಕೊಳ್ಳುತ್ತಾರೆ ಎಂಬಯದಯ ಸವಾಲಾಗಲಿದೆ. ಅದೇ ಅವರ ದೊಡ್ಡ ಸಮಸ್ಯೆಯಾಗಿದೆ "ಎಂದು ಬ್ರಾಡ್‌ಹಾಗ್ ಹೇಳಿದರು.
ಇದೇ ಸಂದರ್ಭದಲ್ಲಿ ಬ್ರಾಡ್ ಹಾಗ್ ಸೂರ್ಯಕುಮಾರ್ ಯಾದವ್ ಅವರನ್ನು ಅತ್ಯುತ್ತಮ ಬ್ಯಾಟ್ಸ್‌ಮನ್ ಎಂದು ಹೆಸರಿಸಿದ್ದು, ಮುಂಬೈ ಇಂಡಿಯನ್ಸ್‌ನ ಅತ್ಯುತ್ತಮ ಪ್ರದರ್ಶನಕಾರರಾಗಿ ಸೂರ್ಯಕುಮಾರ್ ಯಾದವ್ ಹೊರಹೊಮ್ಮುವ ನಿರೀಕ್ಷೆಯನ್ನು ಹೊಂದಿದ್ದಾರೆ. ಐಪಿಎಲ್ 2020 ರ ಅಗ್ರ 5 ರನ್ ಗಳಿಸಿದವರಲ್ಲಿ ಯಾದವ್ ಸ್ಥಾನ ಗಳಿಸಬಹುದೆಂಬ ನಿರೀಕ್ಷೆಯನ್ನು ಹಾಗ್ ವ್ಯಕ್ತಪಡಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications