For Quick Alerts
ALLOW NOTIFICATIONS  
For Daily Alerts
 

'ನಾನು ನೋಡಿರದ ಬೆಸ್ಟ್ ಬ್ಯಾಟಿಂಗ್': ಆರ್‌ಸಿಬಿ ಆಟಗಾರನ ಹೊಗಳಿದ ಹಾಗ್

IPL 2020: Brad Hogg praised Royal Challengers Bangalore youngster

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ ಮತ್ತೆ ಗೆಲುವಿನ ಲಯಕ್ಕೆ ಬಂದಿದೆ. ಆಡಿರುವ ನಾಲ್ಕು ಪಂದ್ಯಗಳಲ್ಲಿ ಆರ್‌ಸಿಬಿ 3 ಗೆಲುವುಗಳನ್ನು ಕಂಡಿದೆ. ಇದು 2013ರಿಂದಲೂ ಟೂರ್ನಿಯೊಂದರಲ್ಲಿ ಆರ್‌ಸಿಬಿ ನೀಡಿದ ಬೆಸ್ಟ್ ಪ್ರದರ್ಶನವೆನಿಸಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಆರ್‌ಸಿಬಿಯಲ್ಲಿ 20ರ ಹರೆಯದ ಬ್ಯಾಟ್ಸ್‌ಮನ್ ದೇವದತ್ ಕಡಿಕ್ಕಲ್ ಈ ಬಾರಿ ಹೆಚ್ಚು ಗಮನ ಸೆಳೆಯುತ್ತಿದ್ದಾರೆ. ಸನ್‌ ರೈಸರ್ಸ್‌ ಹೈದರಾಬಾದ್ ವಿರುದ್ಧ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದ ಪಡಿಕ್ಕಲ್ ಪಾದಾರ್ಪಣೆ ಪಂದ್ಯದಲ್ಲೇ ಅರ್ಧ ಶತಕ ಬಾರಿಸಿದ್ದರು. ಅದಾಗಿ ಉಳಿದ ಎರಡು ಪಂದ್ಯಗಳಲ್ಲೂ ಪಡಿಕ್ಕಲ್ ಅರ್ಧ ಶತಕ ಬಾರಿಸಿ ಬೆರಗು ಮೂಡಿಸಿದ್ದಾರೆ.

ಈ ಐಪಿಎಲ್‌ ಸೀಸನ್‌ನಲ್ಲಿ ಒಳ್ಳೆಯ ಪ್ರದರ್ಶನ ನೀಡುತ್ತಿರುವ ಬೆಂಗಳೂರು ಬ್ಯಾಟ್ಸ್‌ಮನ್ ದೇವದತ್ ಪಡಿಕ್ಕಲ್ ಅವರನ್ನು ಆಸ್ಟ್ರೇಲಿಯಾದ ಮಾಜಿ ಸ್ಪಿನ್ನರ್ ಬ್ರಾಡ್ ಹಾಗ್ ಹೊಗಳಿದ್ದಾರೆ. ಆತನಂತೆ ಪ್ರದರ್ಶನ ನೀಡುವ ಬ್ಯಾಟ್ಸ್‌ಮನ್‌ನನ್ನು ನಾನು ಈ ಹಿಂದೆ ಐಪಿಎಲ್‌ನಲ್ಲಿ ನೋಡೇ ಇಲ್ಲ ಎಂದು ಹಾಗ್ ಶ್ಲಾಘಿಸಿದ್ದಾರೆ.

'ದೇವದತ್ ಕಡಿಕ್ಕಲ್ ಇದು ಮೊದಲ ಐಪಿಎಲ್ ಸೀಸನ್‌ನಲ್ಲಿ ಆಡುತ್ತಿದ್ದಾರೆ. ಈಗಾಗಲೇ 4 ಇನ್ನಿಂಗ್ಸ್‌ಗಳಲ್ಲಿ ಮೂರು ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಶೆಲ್ಡನ್ ಕಾಟ್ರೆಲ್ ಅವರಂಥ ಬ್ಯಾಟ್ಸ್‌ಮ್‌ಗಳನ್ನೂ ಅವರು ಪರೀಕ್ಷೆಗೆ ಒಡ್ಡುತ್ತಾರೆ. ಅವರು ಕೆಲವು ಗುಣಮಟ್ಟದ ಪುಲ್‌ ಶಾಟ್‌ಗಳನ್ನು ಬೀಸುವುದನ್ನು ನಾನು ನೋಡಿದ್ದೇನೆ. ಈ ಹುಡುಗ ಭಾರತಕ್ಕೆ ಆಡಿದರೆ ಒಳ್ಳೆಯದು,' ಎಂದು ಎಂದು ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಹಾಗ್ ಹೇಳಿದ್ದಾರೆ.

Story first published: Tuesday, October 6, 2020, 9:42 [IST]
Other articles published on Oct 6, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+