ವಿಶ್ವದ ಯಾವುದೇ ಫ್ರಾಂಚೈಸಿ ಮುಂಬೈಯಂತೆ ಆಡಲಾರದು: ಲಾರಾ

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್‌ನ ಬಲಿಷ್ಠ ಫ್ರಾಂಚೈಸಿ ಮುಂಬೈ ಇಂಡಿಯನ್ಸ್ ಮಂಗಳವಾರ (ನವೆಂಬರ್ 10) ಇತಿಹಾಸ ನಿರ್ಮಿಸಿದೆ. 13ನೇ ಆವೃತ್ತಿಯ ಐಪಿಎಲ್‌ನ ಫೈನಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಅನ್ನು 5 ವಿಕೆಟ್‌ಗಳಿಂದ ಸೋಲಿಸಿರುವ ಎಂಐ, ಐದನೇ ಬಾರಿಗೆ ಐಪಿಎಲ್ ಚಾಂಪಿಯನ್ಸ್ ಎನಿಸಿದೆ.
ಐಪಿಎಲ್ ಇತಿಹಾಸದಲ್ಲಿ ಬ್ಯಾಕ್ ಟು ಬ್ಯಾಕ್ ಟ್ರೋಫಿ ಗೆದ್ದ ದಾಖಲೆ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಹೆಸರಿನಲ್ಲಿತ್ತು. 2010 ಮತ್ತು 2011ರಲ್ಲಿ ಸಿಎಸ್‌ಕೆ ಕಪ್ ಗೆದ್ದಿತ್ತು. ಈಗ ಇದೇ ದಾಖಲೆಯನ್ನು ಮುಂಬೈ ಇಂಡಿಯನ್ಸ್ ನಿರ್ಮಿಸಿದೆ. ಮುಂಬೈ ತಂಡ 2019 ಮತ್ತು 2020ರಲ್ಲಿ ಚಾಂಪಿಯನ್ಸ್ ಆಗಿ ಹೊರಹೊಮ್ಮಿದೆ.
ಐಪಿಎಲ್‌ನಲ್ಲಿ ಪಾರಮ್ಯ ಮೆರೆಯುತ್ತಿರುವ ಮುಂಬೈ ಇಂಡಿಯನ್ಸ್ ಅನ್ನು ವೆಸ್ಟ್ ಇಂಡೀಸ್ ಕ್ರಿಕೆಟ್ ದಂತಕತೆ ಬ್ರಿಯಾನ್ ಲಾರಾ ಶ್ಲಾಘಿಸಿದ್ದಾರೆ. ವಿಶ್ವದಲ್ಲಿನ ಯಾವುದೇ ಫ್ರಾಂಚೈಸಿ ಮುಂಬೈ ಇಂಡಿಯನ್ಸ್‌ನಂತೆ ಆಡಲಾರದು ಎಂದು ಲಾರಾ ಹೇಳಿದ್ದಾರೆ.
'ಅವರದ್ದು ಅದ್ಭುತ ತಂಡ. ಅವರು ಒಂದು ವೇಳೆ ಟಾಪ್ ಆಗಿಲ್ಲದಿದ್ದರೆ ಟಾಪ್‌ಗೆ ತುಂಬಾ ಹತ್ತಿರವಾದರೂ ಇರುತ್ತಾರೆ. ನನಗನ್ನಿಸುತ್ತಿದೆ; ವಿಶ್ವದ ಯಾವುದೇ ತಂಡ ಮುಂಬೈ ಇಂಡಿಯನ್ಸ್‌ನಂತೆ ಕ್ರಿಕೆಟ್ ಆಡಲಾರದು,' ಎಂದು ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡಿದ ಲಾರಾ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications