ಐಪಿಎಲ್‌ನಲ್ಲಿ ದಿಗ್ಗಜ ಬ್ರಿಯಾನ್ ಲಾರಾ ಮನಗೆದ್ದ 6 ಭಾರತೀಯ ಯುವ ಆಟಗಾರರು

ಐಪಿಎಲ್ ಭಾರತೀಯ ಕ್ರಿಕೆಟ್‌ಗೆ ಸಾಕಷ್ಟು ಅದ್ಭುತ ಪ್ರತಿಭೆಗಳನ್ನು ನೀಡಿದೆ. ಈ ಬಾರಿಯ ಐಪಿಎಲ್ ಕುಡ ಇದಕ್ಕೆ ಹೊರತಾಗಿಲ್ಲ. ಅಂತಾರಾಷ್ಟ್ರೀಯ ಆಟಗಾರರ ಮೇಲಿನ ಹೊರೆಯನ್ನು ನಿಭಾಯಿಸುವಲ್ಲಿ ಕೆಲ ಆಟಗಾರರು ಯಶಸ್ವಿಯಾಗಿದ್ದರೆ ಇನ್ನೂ ಕೆಲವರು ಅವರನ್ನೂ ಮೀರಿಸುವ ಪ್ರದರ್ಶನ ನೀಡಿದ್ದಾರೆ.
ವೆಸ್ಟ್ ಇಂಡೀಸ್‌ನ ಕ್ರಿಕೆಟ್ ದಿಗ್ಗಜ ಬ್ರಿಯಾನ್ ಲಾರಾ ಹಿಂದೂಸ್ಥಾನ್ ಟೈಮ್ಸ್‌ಗೆ ಸಂದರ್ಶನವನ್ನು ನೀಡಿದ್ದಾರೆ. ಈ ಸಂದರ್ಶನದಲ್ಲಿ ಲಾರಾ ಈ ಬಾರಿಯ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನವನ್ನು ನೀಡಿದ ಆರು ಭಾರತೀಯ ಆಟಗಾರರ ಪ್ರದರ್ಶನವನ್ನು ಕೊಂಡಾಡಿದ್ದಾರೆ. ಜೊತೆಗೆ ತನಗೆ ಇಷ್ಟವಾದ ಆರು ಭಾರತೀಯ ಯುವ ಆಟಗಾರರನ್ನು ಹೆಸರಿಸಿದ್ದಾರೆ.
ಹಾಗಾದರೆ ಲಾರಾ ಹೃದಯಗೆದ್ದ ಆ ಆರು ಆಟಗಾರರು ಯಾರು? ಅವರ ಪ್ರದರ್ಶನದ ಬಗ್ಗೆ ಲಾರಾ ಹೇಳಿದ್ದೇನು ಮುಂದೆ ಓದಿ..

ಸಂಜು ಸ್ಯಾಮ್ಸನ್
ಲಾರಾ ತೆಗೆದುಕೊಂಡ ಮೊದಲ ಹೆಸರು ಸಂಜು ಸ್ಯಾಮ್ಸನ್. ಆರಂಭಿಕ ಎರಡು ಪಂದ್ಯಗಳಲ್ಲಿ ಸಂಜು 16 ಸಿಕ್ಸರ್ ಸಿಡಿಸಿ ಮಿಂಚಿದ್ದರು. ಆದರೆ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನಿಡಲು ಸಂಜುಗೆ ಸಾಧ್ಯವಾಗಲಿಲ್ಲ. "ಸಂಜು ಅವರ ಸಾಮರ್ಥ್ಯ ನನಗೆ ಇಷ್ಟವಾಗುತ್ತದೆ. ಆದರೆ ಅವರು ಎಲ್ಲಾ ಸಂದರ್ಭದಲ್ಲೂ ಬ್ಯಾಟಿಂಗ್ ಮಾಡುವ ರೀತಿ ಇಷ್ಟವಾಗುತ್ತದೆ ಎಮದು ಹೇಳಲು ಸಾಧ್ಯವಿಲ್ಲ. ಆತನ ಸಾಮರ್ಥ್ಯವನ್ನು ಗಮನಿಸಿದರೆ ಆತ ನಂಬಲಸಾದ್ಯವಾದ ಆಟಗಾರ ಎಂಬುದು ಅರಿವಾಗುತ್ತದೆ" ಎಂದಿದ್ದಾರೆ ಲಾರಾ.

ಸೂರ್ಯಕುಮಾರ್ ಯಾದವ್
ಲಾರಾ ಮನ ಗೆದ್ದ ಇನ್ನೋರ್ವ ಆಟಗಾರ ಸೂರ್ಯಕುಮಾರ್ ಯಾದವ್. 15 ಪಂದ್ಯಗಳಿಂದ ಯಾದವ್ 461 ರನ್ ಗಳಿಸಿ ಮಿಂಚಿದ್ದಾರೆ. "ಸೂರ್ಯಕುಮಾರ್ ಯಾದವ್ ನನ್ನ ಫೇವರೀಟ್ ಆಟಗಾರರಲ್ಲಿ ಓರ್ವ. ನಿಮ್ಮ ನೆಚ್ಚಿನ ಆಟಗಾರ ಆರಂಭಿಕ ಆಟಗಾರನಲ್ಲದಿದ್ದರೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯುತ್ತಾನೆ. ಈತ ಮುಂಬೈ ಆರಂಭಿಕ ಆಘಾತವನ್ನು ಅನುಭವಿಸಿದರೆ ಅದನ್ನು ಸರಿದಾರಿಗೆ ತರುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಐಪಿಎಲ್‌ನಲ್ಲಿ ಈತನ ಬ್ಯಾಟಿಂಗ್‌ಅನ್ನು ನಾನು ಚೆನ್ನಾಗಿ ಅನುಭವಿಸಿದ್ದೇನೆ" ಎಂದು ಲಾರಾ ಹೇಳಿದ್ದಾರೆ.

ದೇವದತ್ ಪಡಿಕ್ಕಲ್
ಆರ್‌ಸಿಬಿಯ ಯುವ ಆಟಗಾರ ದೇವದತ್ ಪಡಿಕ್ಕಲ್ ಬ್ರಿಯಾನ್ ಲಾರಾ ಲಿಸ್ಟ್‌ನಲ್ಲಿರುವ ಇನ್ನೋರ್ವ ಆಟಗಾರ. "ಪಡಿಕ್ಕಲ್ ಬಳಿ ಸಾಕಷ್ಟು ಸಾಮರ್ಥ್ಯವಿದೆ. ಆದರೆ ಆತನಲ್ಲಿ ಕೆಲ ಸಂಗತಿಗಳ ಬದಲಾವಣೆಯನ್ನು ನಾನು ಬಯಸುತ್ತೇನೆ. ಆತನನ್ನು ಕೇವಲ ಟಿ20 ಬ್ಯಾಟ್ಸ್‌ಮನ್ ಆಗಿ ಮಾತ್ರವೇ ನಡಲು ಬಯಸುವುದಿಲ್ಲ. ಆತ ಟೆಸ್ಟ್ ಆಟಗಾರನಾಗಿಯೀ ನಾನು ನೋಡಲು ಬಯಸುತ್ತೇನೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಉಳಿದುಕೊಳ್ಲಬೇಕಾದರೆ ತಾಂತ್ರಿಕವಾಗಿ ಹಲವು ಬದಲಾವಣೆಗಳು ಮಾಡಿಕೊಲ್ಳಬೇಕಾಗುತ್ತದೆ" ಎಂದಿದ್ದಾರೆ ಲಾರಾ.

ಕೆಎಲ್ ರಾಹುಲ್
ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಮತ್ತು ಆರೆಂಜ್ ಕ್ಯಾಪ್‌ಅನ್ನು ತನ್ನ ಬಳಿ ಇರಿಸಿಕೊಂಡಿರುವ ಕೆಎಲ್ ರಾಹುಲ್ ಅವರನ್ನು ಕೂಡ ಲಾರಾ ಆಯ್ಕೆ ಮಾಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ರಾಹುಲ್ ಈಗಾಗಲೇ ಸಾಕಷ್ಟು ಖ್ಯಾತರಾಗಿದ್ದು ತಮ್ಮದೇ ಆದ ಛಾಪು ಮೂಡಿಸಿದ್ದಾರೆ. "ಖಂಡಿತವಾಗಿಯೂ ಕೆಎಲ್ ರಾಹುಲ್. ನಾನು ಯಾವಾಗಲೂ ಈತನನ್ನು ಅದ್ಭುತವಾದ ಆಟಗಾರ ಎಂದು ಹೇಳುತ್ತೇನೆ. ಇದಕ್ಕಿಂತ ಹೆಚ್ಚಿನದನ್ನು ಹೇಳಲು ಸಾಧ್ಯವಿಲ್ಲ" ಎಂದು ಬ್ರಿಯಾನ್ ಲಾರಾ ಹೇಳಿದ್ದಾರೆ.

ಪ್ರಿಯಮ್ ಗರ್ಗ್
ಮಾಜಿ ಅಂಡರ್19 ನಾಯಕ ಪ್ರಿಯಮ್ ಗರ್ಗ್ ಈ ಬಾರಿಯ ಐಪಿಎಲ್‌ಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರವಾಗಿ ಕಣಕ್ಕಿಳಿದು ತಮ್ಮ ಚೊಚ್ಚಲ ಟೂರ್ನಿಯಲ್ಲಿ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದಾರೆ. ಈತ ಕೂಡ ದಿಗ್ಗಜ ಲಾರಾ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. "ನನಗನಿಸುತ್ತದೆ ಪ್ರಿಯಮ್ ಗರ್ಗ್ ಸಾಕಷ್ಟು ಸಾಮರ್ಥ್ಯವನ್ನು ಹೊಂದಿದ ಆಟಗಾರ " ಎಂದು ಲಾರಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಬ್ದುಲ್ ಸಮದ್
ಜಮ್ಮು ಕಾಶ್ಮೀರ ಮೂಲದ ಅಬ್ದುಲ್ ಸಮದ್ ಈ ಬಾರಿಯ ಐಪಿಎಲ್‌ನಲ್ಲಿ ಹೈದರಾಬಾದ್ ತಂಡದ ಮೂಲಕ ಪದಾರ್ಪಣೆ ಮಾಡಿದ್ದಾರೆ. ಈತ ಕೂಡ ಅಚ್ಚರಿಯೆಂಬಂತೆ ಬ್ರಿಯನ್ ಲಾರಾ ಅವರ ನೆಚ್ಚಿನ ಭಾರತೀಯ ಆಟಗಾರರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications