ಐಪಿಎಲ್ 2020: ಈ ಆವೃತ್ತಿಯಲ್ಲಿ ತನ್ನ ನೆಚ್ಚಿನ ಕ್ಷಣವನ್ನು ಬಹಿರಂಗಪಡಿಸಿದ ಲಾರಾ

ಐಪಿಎಲ್ 13ನೇ ಆವೃತ್ತಿಗೆ ತೆರೆ ಬಿದ್ದಿದೆ. ಅದೆಷ್ಟೋ ಅದ್ಭುತ ಕ್ಷಣಗಳನ್ನು ಅಭಿಮಾನಿಗಳು ಈ ಬಾರಿಯ ಆವರತ್ತಿಯಲ್ಲಿ ಆನಂದಿಸಿದ್ದಾರೆ. ಸಾಕಷ್ಟು ರೋಚಕ ಕ್ಷಣಗಳು, ರೋಚಕ ಫಲಿತಾಂಶಗಳು ಟೂರ್ನಿಯುದ್ದಕ್ಕೂ ಕ್ರಿಕೆಟ್ ಪ್ರೇಮಿಗಳನ್ನು ರಂಜಿಸಿದೆ. ಮುಂಬೈ ಟ್ರೋಫಿಗೆ ಮುತ್ತಿಕ್ಕುವ ಮೂಲಕ ಈ ಬಾರಿಯ ಆವೃತ್ತಿ ಮುಕ್ತಾಯಗೊಂಡಿದೆ.
ಈ ಐಪಿಎಲ್‌ನ ಅದೆಷ್ಟೋ ಕ್ಷಣಗಳು ಅಭಿಮಾನಿಗಳ ನೆನಪಿನಲ್ಲಿ ಉಳಿಯಲಿದೆ. ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಗೂ ತನ್ನದೇ ಆದ ಕಾರಣಕ್ಕೆ ಕೆಲ ಕ್ಷಣಗಳು ಹೆಚ್ಚು ಇಷ್ಟವಾಗಲಿದೆ. ಇದೇ ರೀತಿಯಲ್ಲಿ ದಿಗ್ಗಜ ಕ್ರಿಕೆಟಿಗ ಬ್ರಿಯಾನ್ ಲಾರಾ ಕೂಡ ತಮ್ಮ ನೆಚ್ಚಿನ ಐಪಿಎಲ್ ಕ್ಷಣವನ್ನು ಬಹಿರಂಗಪಡಿಸಿದ್ದಾರೆ.
ಬ್ರಿಯಾನ್ ಲಾರಾಗೆ ಅತಿ ಹೆಚ್ಚು ಆಪ್ತವಾದ ಸಂದರ್ಭ ಯಾವುದು ಎಂದರೆ ಕ್ರಿಸ್ ಗೇಲ್ ತಂಡಕ್ಕೆ ಮರಳಿದ ಕ್ಷಣ ಎಂದು ಲಾರಾ ತಿಳಿಸಿದ್ದಾರೆ. ಮೊದಲಾರ್ಧದಲ್ಲಿ ಆಡುವ ಬಳಗದಲ್ಲಿ ಕಾಣಿಸಿಕೊಳ್ಳದೆ ಬಳಿಕ ತಂಡಕ್ಕೆ ಸೇರಿಕೊಂಡ ಕ್ಷಣ ತನ್ನ ಫೇವರೀಟ್ ಸಂದರ್ಭ ಎಂಬುದನ್ನು ಲಾರಾ ವಿವರಿಸಿದ್ದಾರೆ.
ಗೇಲ್ ಮೊದಲಾರ್ಧವನ್ನು ತಪ್ಪಿಸಿಕೊಂಡ ನಂತರ ದ್ವಿತಿಯಾರ್ಧದಲ್ಲಿ ಪಂಜಾಬ್ ತಂಡದ ಪರವಾಗಿ ಕಣಕ್ಕಿಳಿದಾಗ ತುಂಬಿದ ಕ್ರೀಡಾಂಗಣದಲ್ಲಿ ಆಡಿದ್ದರೆ ಮತ್ತಷ್ಟು ವಿದ್ಯುತ್ ಪ್ರಸಾರವಾದಂತಾಗಲಿತ್ತು ಎಂದು ಲಾರಾ ಅಭಿಪ್ರಾಯಪಟ್ಟಿದ್ದಾರೆ. ಕೊರೊನಾ ವೈರಸ್‌ನ ಕಾರಣದಿಂದಾಗಿ ಈ ಬಾರಿಯ ಐಪಿಎಲ್ ಖಾಲಿ ಕ್ರೀಡಾಂಗಣದಲ್ಲಿ ನಡೆದಿತ್ತು.
ಕ್ರಿಸ್ ಗೇಲ್ ಟೂರ್ನಿಯಲ್ಲಿ ಕೇವಲ 7 ಪಂದ್ಯಗಳಲ್ಲಿ ಕಣಕ್ಕಿಳಿದು 288 ರನ್ ಗಳಿಸಿ ಮಿಂಚಿದ್ದರು. ಇದರಲ್ಲಿ 3 ಅರ್ಧ ಶತಕ ಸೇರಿತ್ತು. ಆರಂಭಿಕನಾಗಿ ಕಣಕ್ಕಿಳಿಯದೇ ಗೇಲ್ 3ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲಿಳಿದು ಮಧ್ಯಮ ಕ್ರಮಾಂಕಕ್ಕೆ ಮತ್ತಷ್ಟು ಬಲವನ್ನು ತುಂಬಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications