'ಆತ ಎಬಿ ಡಿವಿಲಿಯರ್ಸ್ ಅಥವಾ ಪೋಲಾರ್ಡ್‌ಗಿಂತ ಕಡಿಮೆಯಿಲ್ಲ': ಸಹ ಆಟಗಾರನನ್ನು ಹೊಗಳಿದ ಸ್ಮಿತ್

ಸೋಮವಾರ ನಡೆದ ರಾಜಸ್ಥಾನ್ ರಾಯಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದದ ಪಂದ್ಯದಲ್ಲಿ ಜೋಸ್ ಬಟ್ಲರ್ ಅದ್ಭುತ ಪ್ರದರ್ಶನವನ್ನು ನೀಡಿ ಆರ್‌ಆರ್ ತಂಡದ ಗೆಲುವಿಗೆ ಕಾರಣರಾದರು. ಸಿಎಸ್‌ಕೆ ನೀಡಿದ್ದ 126 ರನ್‌ಗಳ ಸುಲಭ ಗುರಿಯನ್ನು ಬೆನ್ನಟ್ಟಿದ್ದ ಆರ್‌ಆರ್ 28 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆದರೆ ಬಳಿಕ ಬಟ್ಲರ್ 48 ಎಸೆತಗಳಲ್ಲಿ ಅಜೇಯ 70 ರನ್ ಗಳಿಸುವ ಮೂಲಕ 7 ವಿಕೆಟ್‌ಗಳ ಗೆಲುವಿಗೆ ಕಾರಣರಾದರು.
ಈ ಅದ್ಭುತ ಇನ್ನಿಂಗ್ಸ್‌ಗಾಗಿ ಜೋಸ್ ಬಟ್ಲರ್ ಅವರನ್ನು ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸ್ಟೀವ್ ಸ್ಮಿತ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಯಾವುದೇ ಶ್ರೇಷ್ಠ ಮ್ಯಾಚ್ ವಿನ್ನರ್ ಆಟಗಾರನಿಗಿಂತ ಜೋಸ್ ಬಟ್ಲರ್ ಕಡಿಮೆಯಿಲ್ಲ. ಆತನನ್ನು ಹೊಂದಿರುವುದು ನಮ್ಮ ತಂಡದ ಅದೃಷ್ಟ ಎಂದು ಸ್ಟೀವ್ ಸ್ಮಿತ್ ಹೇಳಿದ್ದಾರೆ.
ಜೋಸ್ ಬಟ್ಲರ್ ಸಾಮಾನ್ಯವಾಗಿ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯದಿದ್ದರೆ ಅಗ್ರ ಕ್ರಮಾಂಕದಲ್ಲೇ ಬ್ಯಾಟ್‌ಗೆ ಇಳಿಯುತ್ತಾರೆ. ಆದರೆ ಸಿಎಸ್‌ಕೆ ವಿರುದ್ದದ ಪಂದ್ಯದಲ್ಲಿ ಐದನೇ ಕ್ರಮಾಂಕದಲ್ಲಿ ಬಟ್ಲರ್ ಕಣಕ್ಕಿಳಿದಿದ್ದರು. ಈ ನಿರ್ಧಾರದ ಬಗ್ಗೆಯೂ ಪ್ರತಿಕ್ರಿಯಿಸಿದ ಸ್ಮಿತ್ ತಂಡದ ಬ್ಯಾಟಿಂಗ್ ಲೈನ್‌ಅಪ್‌ನಲ್ಲಿ ಹೊಂದಾಣಿಕೆಯನ್ನು ಮಾಡಿಕೊಳ್ಳುವ ಸಲುವಾಗಿ ಬಟ್ಲರ್‌ಅವರನ್ನು ಮಧ್ಯಮ ಕ್ರಮಾಂಕದಲ್ಲಿ ಇಳಿಸಲಾಯಿತು ಎಂದಿದ್ದಾರೆ.
'ಬ್ಯಾಟಿಂಗ್‌ನಲ್ಲಿ ಜೋಸ್ ಬಟ್ಲರ್ ಅಸಮಾನ್ಯ ಆಟಗಾರ. ಎಬಿ ಡಿವಿಲಿಯರ್ಸ್, ಪೊಲಾರ್ಡ್ ಹಾರ್ದಿಕ್ ಪಾಂಡ್ಯ ಅವರಂತೆ ಅಂತಿಮ ಹಂತದವರೆಗೆ ಹೋರಾಡಿ ಪಂದ್ಯವನ್ನು ಗೆಲ್ಲಿಸಬಲ್ಲ ಸಾಮರ್ಥ್ಯವನ್ನು ಹೊಂದಿರುವ ಆಟಗಾರ' ಎಂದು ಬಟ್ಲರ್ ಪ್ರದರ್ಶನದ ಬಗ್ಗೆ ಹೊಗಳಿಕೆಯ ಮಾತುಗಳನ್ನು ಆಡಿದ್ದಾರೆ ಸ್ಟೀವ್ ಸ್ಮಿತ್
ಅಕ್ಟೋಬರ್ 22ರ ಗುರುವಾರದಂದು ರಾಜಸ್ಥಾನ್ ರಾಯಲ್ಸ್ ತಂಡ ಸನ್‌ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ತನ್ನ ಮುಂದಿನ ಪಂದ್ಯವನ್ನು ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆಡಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications