Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅತ್ಯಧಿಕ ರನ್ ಪಟ್ಟಿಯಲ್ಲಿ ಕೆಎಲ್ ರಾಹುಲ್ ಕೆಳಗಿಳಿಸ್ತಾರ ವಾರ್ನರ್?

IPL 2020: Can David Warner surpass KL Rahul in most runs list

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್‌ ಅಂತಿಮ ಹಂತಕ್ಕೆ ಬರುತ್ತಿದೆ. ನವೆಂಬರ್ 10ಕ್ಕೆ ಫೈನಲ್‌ನೊಂದಿಗೆ 13ನೇ ಆವೃತ್ತಿಯ ಐಪಿಎಲ್‌ಗೆ ತೆರೆ ಬೀಳಲಿದೆ. ಫೈನಲ್‌ಗೂ ಮುನ್ನ ಭಾನುವಾರ (ನವೆಂಬರ್ 8) ನಡೆಯುವ ಕ್ವಾಲಿಫೈಯರ್-2 ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಕಾದಾಡಲಿವೆ.

2020ರ ಐಪಿಎಲ್‌ನ ಅಂಕಿ-ಅಂಶಗಳನ್ನು ಗಮನಿಸಿದರೆ, ಅತ್ಯಧಿಕ ರನ್ ಪಟ್ಟಿಯಲ್ಲಿ ಕಿಂಗ್ಸ್ 11 ಪಂಜಾಬ್‌ನ ಕೆಎಲ್ ರಾಹುಲ್ ಮೊದಲ ಸ್ಥಾನದಲ್ಲಿದ್ದಾರೆ. 14 ಇನ್ನಿಂಗ್ಸ್‌ಗಳನ್ನಾಡಿದ್ದ ರಾಹುಲ್ 55.83ರ ಸರಾಸರಿಯಲ್ಲಿ 670 ರನ್ ಗಳಿಸಿದ್ದರು. ಆದರೆ ಪಂಜಾಬ್ ತಂಡ ಲೀಗ್‌ ಹಂತದಲ್ಲಿ ಹೊರ ಬಿದ್ದಿರುವುದರಿಂದ ರಾಹುಲ್ ಅಗ್ರ ಸ್ಥಾನದಿಂದ ಕೆಳಗಿಳಿಯುವ ಸಾಧ್ಯತೆಯಿದೆ.

ಅತ್ಯಧಿಕ ರನ್ ಪಟ್ಟಿಯಲ್ಲಿ ಸದ್ಯ ದ್ವಿತೀಯ ಸ್ಥಾನದಲ್ಲಿರುವ ಸನ್ ರೈಸರ್ಸ್ ಹೈದರಾಬಾದ್‌ನ ಡೇವಿಡ್ ವಾರ್ನರ್ 15 ಇನ್ನಿಂಗ್ಸ್‌ಗಳಲ್ಲಿ 546 ರನ್ ಗಳಿಸಿದ್ದಾರೆ. ತೃತೀಯ ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್‌ನ ಶಿಖರ್ ಧವನ್ 15 ಇನ್ನಿಂಗ್ಸ್‌ನಲ್ಲಿ 525 ರನ್ ಗಳಿಸಿದ್ದಾರೆ. ಇಬ್ಬರಿಗೂ ಕೆಎಲ್ ರಾಹುಲ್ ಕೆಳಗಿಳಿಸಲು ಅವಕಾಶವಿದೆ.

ಇನ್ನುಳಿದ ಒಂದೇ ಪಂದ್ಯದಲ್ಲಿ ವಾರ್ನರ್ ಮತ್ತು ಧವನ್‌ಗೆ ರಾಹುಲ್ ಕೆಳಗಿಳಿಸಲು ಸಾಧ್ಯವಿಲ್ಲ. ಆದರೆ ಕ್ವಾಲಿಫೈಯರ್‌-2ನಲ್ಲಿ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿ ಫೈನಲ್‌ಗೆ ಪ್ರವೇಶಿಸುವ ತಂಡದಿಂದ ಯಾರಾದರೂ ರಾಹುಲ್ ರನ್ ಮೀರಿಸಲು ಅವಕಾಶವಿದೆ. ಅಂತೂ ಫೈನಲ್‌ ಮುಗಿಯುವ ವೇಳೆ ಒಂದೇ ಧವನ್ ಅಥವಾ ವಾರ್ನರ್ ರನ್ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರಬಹುದು. ಅಥವಾ ರಾಹುಲ್ ಅವರೇ ಇರಲೂಬಹುದು.

Story first published: Sunday, November 8, 2020, 11:08 [IST]
Other articles published on Nov 8, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+