ಟಿ20: 1000 ಸಿಕ್ಸರ್ ಸರದಾರ ಎನಿಸಿಕೊಂಡ ಯೂನಿವರ್ಸಲ್ ಬಾಸ್

ಐಪಿಎಲ್ 2020ರ ಮತ್ತೊಮ್ಮೆ ಕ್ರಿಸ್ಟೋಫರ್ ಹೆನ್ರಿ ಗೇಲ್ ಅಬ್ಬರಿಸಿದ್ದಾರೆ. ಗೇಲ್ ಕಣಕ್ಕಿಳಿದರೆ ಸಾಕು ದಾಖಲೆಗಳು ನುಚ್ಚುನೂರಾಗುವುದು ನಿಶ್ಚಿತ ಎಂಬ ಮಾತು ಸುಳ್ಳಲ್ಲ. ಟಿ20 ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ 1000 ಸಿಕ್ಸರ್ ಸಿಡಿಸಿದ ಏಕೈಕ ಆಟಗಾರ ಎಂಬ ದಾಖಲೆಯನ್ನು ತಮ್ಮ ಹೆಸರಿಗೆ ಯೂನಿವರ್ಸಲ್ ಬಾಸ್ ಬರೆದುಕೊಂಡಿದ್ದಾರೆ.
ಕಿಂಗ್ಸ್ ಎಲೆವನ್ ಪಂಜಾಬ್ ಪರ ಎರಡನೇ ಕ್ರಮಾಂಕದಲ್ಲಿ ಆಡುತ್ತಿರುವ ಗೇಲ್ ಅವರು ಈ ಕ್ರಮಾಂಕದಲ್ಲಿ ಚೊಚ್ಚಲ ಶತಕ ಸಿಡಿಸುವ ದಾಖಲೆಯನ್ನು 1 ರನ್ ನಿಂದ ಮಿಸ್ ಮಾಡಿಕೊಂಡರು. ಇನ್ನೊಂದು ರನ್ ಗಳಿಸಿದ್ದರೆ 7 ನೇ ಐಪಿಎಲ್ ಶತಕ ಪೂರೈಸುತ್ತಿದ್ದರು.
ಐಪಿಎಲ್ 2020ರಲ್ಲಿ ಎಂಟು ಪಂದ್ಯಗಳ ನಂತರ ಮೈದಾನಕ್ಕಿಳಿದ ಯೂನಿವರ್ಸಲ್ ಬಾಸ್ 99(63 ಎಸೆತ, 6ಬೌಂಡರಿ, 8 ಸಿಕ್ಸರ್) ರನ್ ಗಳಿಸಿ ಜೋಫ್ರಾ ಆರ್ಚರ್ ಎಸೆತದಲ್ಲಿ ಬೋಲ್ಡ್ ಆದರು.
ಆದರೆ, ಅಬುದಾಭಿಯಲ್ಲಿ ಇಂದು 8 ಸಿಕ್ಸರ್ ಸಿಡಿಸಿದ್ದು, ಟಿ20ಯಲ್ಲಿ ಒಟ್ಟಾರೆ 1001 ಸಿಕ್ಸರ್ ಸರದಾರ ಎನಿಸಿಕೊಂಡಿದ್ದಾರೆ. ಗೇಲ್ ಹತ್ತಿರಕ್ಕೆ ಯಾವೊಬ್ಬ ಆಟಗಾರನೂ ಇಲ್ಲ, ಪೊಲ್ಲಾರ್ಡ್ 690 ಸಿಕ್ಸ್ ಸಿಡಿಸಿದ್ದಾರೆ.
ಟಿ20 ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದವರು:
ಆಟಗಾರ-ಪಂದ್ಯ-ಸಿಕ್ಸರ್ ಸಂಖ್ಯೆ
* ಕ್ರಿಸ್ ಗೇಲ್- 410- 10001
* ಕಿರಾನ್ ಪೊಲ್ಲಾರ್- 524-690
* ಬ್ರೆಂಡನ್ ಮೆಕಲಮ್-370-485
* ಶೇನ್ ವಾಟ್ಸನ್-343-467
* ಆಂಡ್ರೆ ರಸೆಲ್-339- 447
* ಎಬಿ ಡಿವಿಲಿಯರ್ಸ್-417
ಐಪಿಎಲ್ ನಲ್ಲಿ 131ಪಂದ್ಯಗಳಲ್ಲಿ 41.39ರನ್ ಸರಾಸರಿಯಂತೆ 150.63 ಸ್ಟ್ರೈಕ್ ರೇಟ್ ನಂತೆ 3160 ಪ್ಲಸ್ ರನ್ ಗಳಿಸಿದ್ದಾರೆ. 6 ಶತಕ,31ಅರ್ಧಶತಕ ಗಳಿಸಿದ್ದು, 175 ವೈಯಕ್ತಿಕ ಗರಿಷ್ಠ ಮೊತ್ತ. 384 ಬೌಂಡರಿ ಹಾಗೂ 349 ಸಿಕ್ಸರ್ ಸಿಡಿಸಿದ್ದಾರೆ.
ಗೇಲ್ ಟಿ20 ಕ್ರಿಕೆಟ್ ನ ಬ್ರಾಡ್ಮನ್ ಎಂದು ಮಾಜಿ ಕ್ರಿಕೆಟರ್ ವೀರೇಂದ್ರ ಸೆಹ್ವಾಗ್ ಕರೆದಿದ್ದಾರೆ.
ನನ್ನ ಪ್ರಕಾರ ಇದು ಶತಕವೇ, 1000 ಸಿಕ್ಸ್ ಗಳಿಸಿದ್ದೀನಾ, ಇನ್ನೊಂದು ದಾಖಲೆಯೇ ನನಗೆ ಗೊತ್ತಿರಲಿಲ್ಲ ಎಂದ ಗೇಲ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications