Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2020: ಆಸ್ಪತ್ರೆಯಿಂದ ವಿಡಿಯೋ ಹಂಚಿಕೊಂಡ ಕ್ರಿಸ್ ಗೇಲ್!

IPL 2020: Chris Gayle posts video from hospital room

ವೆಸ್ಟ್ ಇಂಡೀಸ್‌ನ ದಿಗ್ಗಜ ಕ್ರಿಕೆಟಿಗ ಕ್ರಿಸ್ ಗೇಲ್ ಈ ಬಾರಿಯ ಐಪಿಎಲ್‌ನಲ್ಲಿ ಒಂದು ಪಂದ್ಯದಲ್ಲೂ ಕಣಕ್ಕಿಳಿಯದೆ ಸುದ್ದಿಯಾಗಿದ್ದಾರೆ. ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದೇ ಇಳಿಯುತ್ತಾರೆ ಎಂದು ಕಾದಿದ್ದ ಅಭಿಮಾನಿಗಳಿಗೂ ನಿರಾಸೆ ಉಂಟಾಗಿತ್ತು. ಗೇಲ್ ಆಡುವ ಬಳಗದಲ್ಲಿ ಕಾಣಿಸಿಕೊಳ್ಳದ ಬಗ್ಗೆ ದಿಗ್ಗಜ ಕ್ರಿಕೆಟಿಗ ಬ್ರ್ಯಾನ್ ಲಾರಾ ಕೂಡ ಸದಮಾಧಾನವನ್ನು ವ್ಯಕ್ತಪಡಿಸಿದ್ದರು. ಆದರೆ ಕ್ರಿಸ್ ಗೇಲ್ ವಿಡಿಯೋವೊಂದನ್ನು ಹಂಚಿಕೊಳ್ಳುವ ಮೂಲಕ ತಮ್ಮ ಆರೋಗ್ಯದ ಸ್ಥಿತಿಯನ್ನು ವಿವರಿಸುವ ಯತ್ನ ಮಾಡಿದ್ದಾರೆ.

ಕ್ರಿಸ್ ಗೇಲ್ ಆಸ್ಪತ್ರೆಯಲ್ಲಿರುವ ವಿಡಿಯೋವೊಂದನ್ನು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅವರು, 'ಸ್ಟ್ರಗಲ್ ಈಸ್ ರಿಯಲ್' ಎಂದು ಕೂಡ ಬರೆದುಕೊಂಡಿದ್ದಾರೆ. ಹೀಗಾಗಿ ಅನಾರೋಗ್ಯದ ಕಾರಣದಿಂದಾಗಿ ಗೇಲ್ ಕಣಕ್ಕಿಳಿದಿಲ್ಲ ಎಂಬುದು ಈ ಮೂಲಕ ಸ್ಪಷ್ಟವಾಗಿದೆ.

ಕ್ರಿಸ್‌ಗೇಲ್ ಕಣಕ್ಕಿಳಿಯುವ ಬಗ್ಗೆ ಸನ್‌ರೈಸರ್ಸ್ ಹೈದರಾಬಾದ್ ವಿರುದ್ದ ಪಂದ್ಯದ ಸಂದರ್ಭದಲ್ಲಿ ಪಂಜಾಬ್ ತಂಡದ ಕೋಚ್ ಅನಿಲ್ ಕುಂಬ್ಳೆ ವಿಚಾರವೊಂದನ್ನು ಬಹಿರಂಗಪಡಿಸಿದ್ದರು. ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಕ್ರಿಸ್ ಗೇಲ್ ಕಣಕ್ಕಿಳಿಯಲಿದ್ದರು. ಆದರೆ ಫುಡ್ ಪಾಯ್ಸನ್ ಆಗಿರುವ ಕಾರಣ ಅವರು ಹೊಟ್ಟೆ ನೋವಿನಿಂದ ಬಳಲುತ್ತಿದ್ದಾರೆ. ಹೀಗಾಗಿ ಆಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿಕೆಯನ್ನು ನೀಡಿದ್ದರು.

ಇನ್ಸ್ಟಾಗ್ರಾಮ್‌ನಲ್ಲಿ ಕ್ರಿಸ್ ಗೇಲ್ ಹಂಚಿಕೊಂಡಿರುವ ವಿಡಿಯೋದಲ್ಲಿ ಸ್ಪಷ್ಟವಾಗಿ ಏನ್ನೂ ಹೇಳಿಲ್ಲ. ಆದರೆ ಕುಂಬ್ಲೆ ನೀಡಿರುವ ಹೇಳಿಕೆಯ ಹಿನ್ನೆಲೆಯಲ್ಲಿ ಫುಡ್ ಫಾಯ್ಸನ್‌ನಿಂದ ಗೇಲ್ ಚೇತರಿಸಿಕೊಂಡಿಲ್ಲ ಎನ್ನಲಾಗುತ್ತಿದೆ. ಆದರೆ ಈ ವಿಚಾರ ಇನ್ನಷ್ಟೇ ಸ್ಪಷ್ಟವಾಗಬೇಕಿದೆ.

ಕ್ರಿಸ್ ಗೇಲ್ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ ಸೇರ್ಪಡೆಗೊಳ್ಳುವುದನ್ನು ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ. ಪಂಜಾಬ್ ತಂಡದ ಮಧ್ಯಮ ಕ್ರಮಾಂಕ ದುರ್ಬಲವಾಗಿರುವ ಕಾರಣ ಗೇಲ್ ಆಗಮನ ಒಂದಷ್ಟು ಹೊಂದಾಣಿಕೆಯನ್ನು ಉಂಟುಮಾಡಬಹುದು ಎನ್ನಲಾಗುತ್ತಿದೆ. ಆದರೆ ಗೇಲ್ ಯಾವಾಗ ಪಂಜಾಬ್ ಪರ ಕಣಕ್ಕಿಳಿಯುತ್ತಾರೆ ಎಂಬುದು ಇನ್ನೂ ಉತ್ತರ ದೊರೆಯದ ಪ್ರಶ್ನೆಯಾಗಿಯೇ ಉಳಿದುಕೊಂಡಿದೆ.

Story first published: Saturday, October 10, 2020, 21:22 [IST]
Other articles published on Oct 10, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+