ಐಪಿಎಲ್‌ನಿಂದ ಹೊರಬಿದ್ದ ಬಳಿಕ ಅಭಿಮಾನಿಗಳಲ್ಲಿ ಕ್ರಿಸ್ ಗೇಲ್ ವಿಶೇಷ ಮನವಿ

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಈ ಬಾರಿಯ ಐಪಿಎಲ್‌ನಿಂದ ಹೊರ ಬಿದ್ದಿದೆ. ಟೂರ್ನಿಯಲ್ಲಿ ಮೊದಲಾರ್ಧದಲ್ಲಿ ಸೋಲಿನ ಮೇಲೆ ಸೋಲು ಕಂಡ ಬಳಿಕ ತಿರುಗಿ ಬಿದ್ದ ಪಂಜಾಬ್ ಪ್ಲೇಆಫ್‌ಗೇರುವ ಹೊಸ್ತಿಲಲ್ಲಿ ಎಡವಿದೆ. ಆದರೆ ಕಿಂಗ್ಸ್ ಇಲೆವೆನ್ ಅಭಿಮಾನಿಗಳು ಪಂಜಾಬ್ ತಂಡದ ಹೋರಾಟಕ್ಕೆ ಬೆಂಬಲವನ್ನು ನೀಡಿ ಪ್ರೋತ್ಸಾಹವನ್ನು ನೀಡಿದ್ದಾರೆ.
ಈ ಮಧ್ಯೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸ್ಪೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ತನ್ನ ಅಭಿಮಾನಿಗಳಲ್ಲಿ ವಿಶೇಷ ಮನವಿಯೊಂದನ್ನು ಮಾಡಿದ್ದಾರೆ. ಟ್ವಿಟ್ಟರ್‌ನಲ್ಲಿ ತನ್ನ ಅಭಿಮಾನಿಗಳಲ್ಲಿ ಐಪಿಎಲ್ ನೋಡುವುದನ್ನು ಮುಂದುವರಿಸಿ ಎಂದು ಕೇಳಿಕೊಂಡಿದ್ದಾರೆ.
"ನನ್ನ ಆವೃತ್ತಿ ಅಂತ್ಯವಾದರು ಕೂಡ ದಯವಿಟ್ಟು ಐಪಿಎಲ್ ನೋಡುವುದನ್ನು ಮುಂದುವರಿಸಿ. ಧನ್ಯವಾದಗಳು #ಯೂನಿವರ್ಸ್‌ಬಾಸ್" ಎಂದು ಕ್ರಿಸ್ ಗೇಲ್ ಟ್ವಿಟ್ಟರ್‌ನಲ್ಲಿ ಮನವಿ ಮಾಡಿಕೊಂಡಿದ್ದಾರೆ. ಟಿ20 ಕ್ರಿಕೆಟ್‌ನ ದಿಗ್ಗಜ ಎನಿಸಿರುವ ಕ್ರಿಸ್ ಗೇಲ್ ವಿಶ್ವಾದ್ಯಂತ ತನ್ನ ಅಭಿಮಾನಿಗಳನ್ನು ಹೊಂದಿದ್ದಾರೆ.
ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಕ್ರಿಸ್ ಗೇಲ್ ಮೊದಲಾರ್ಧ ಭಾಗದಲ್ಲಿ ಆಡುವ ಬಳಗದಲ್ಲಿ ಕಾಣಿಸಿಕೊಂಡಿರಲಿಲ್ಲ. ಆದರೆ ಬಳಿಕ ಆಡುವ ಬಳಗದಲ್ಲಿ ಅವಕಾಶವನ್ನು ಪಡೆದ ಗೇಲ್ ಶ್ರೇಷ್ಠ ಪ್ರದರ್ಶನವನ್ನು ನೀಡಿದ್ದರು. ಸ್ಪೋಟಕ ಬ್ಯಾಟಿಂಗ್ ಮೂಲಕ ಪಂಜಾಬ್ ತಂಡಕ್ಕೆ ದೊಡ್ಡ ಕೊಡುಗೆಯನ್ನು ನೀಡಿದ್ದರು.
ಕ್ರಿಸ್ ಗೇಲ್ ಆಡುವ ಬಳಗದಲ್ಲಿ ಕಾಣಿಸಿಕೊಂಡ ನಂತರ ಪಂಜಾಬ್ ತಂಡದ ಅದೃಷ್ಠವೂ ಬದಲಾಗಿತ್ತು. ಗೇಲ್ ಕೂಡಿಕೊಮಡ ನಂತರ ಆಡಿದ ಮೊದಲ ಐದು ಪಂದ್ಯಗಳಲ್ಲಿ ಸತತ ಐದು ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಿಂದ ನಾಲ್ಕನೇ ಸ್ಥಾನಕ್ಕೆ ಬಂದು ಕುಳಿತಿತ್ತು. ಆದರೆ ಅಂತಿಮ ಎರಡು ಪಂದ್ಯಗಳು ಮತ್ತೆ ಪಂಜಾಬ್ ಕೈ ತಪ್ಪಿದ್ದರ ಪರಿಣಾಮ ಆಘಾತಕಾರಿಯಾಗಿ ಟೂರ್ನಿಯಿಂದ ಹೊರಬಿದ್ದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications