ರನ್ ವೇಳೆ ದೂರದ ದಾರೀಲಿ ಓಡಿದ್ದರ ಗುಟ್ಟು ಬಿಚ್ಚಿಟ್ಟ ಕ್ರಿಸ್ ಜೋರ್ಡನ್

ದುಬೈ: ಅಕ್ಟೋಬರ್ 18ರಂದು ನಡೆದಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಕಿಂಗ್ಸ್ 11 ಪಂಜಾಬ್ ರೋಚಕ ಗೆಲುವನ್ನಾಚರಿಸಿತ್ತು. ಅದೂ ಎರಡೆರಡು ಸೂಪರ್ ಓವರ್ ಪಂದ್ಯಗಳು ನಡೆದು ಅದರಲ್ಲಿ ಪಂಜಾಬ್ ಗೆದ್ದಿತ್ತು. ಐಪಿಎಲ್ ಇತಿಹಾಸದಲ್ಲಿ ಒಂದೇ ಪಂದ್ಯದಲ್ಲಿ ಎರಡೆರಡು ಸೂಪರ್ ಓವರ್ ನಡೆದಿದ್ದು ಅದೇ ಮೊದಲು.
ಆವತ್ತಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಮುಂಬೈ ಇಂಡಿಯನ್ಸ್ 176 ರನ್ ಬಾರಿಸಿದ್ದರೆ ಕಿಂಗ್ಸ್ 11 ಪಂಜಾಬ್ ಕೂಡ 176 ರನ್ ಬಾರಿಸಿ ಪಂದ್ಯವನ್ನು ಟೈ ಮಾಡಿಕೊಂಡಿತ್ತು. ಈ ವೇಳೆ ಪಂಜಾಬ್ ಬ್ಯಾಟ್ಸ್‌ಮನ್ ಕ್ರಿಸ್ ಜೋರ್ಡನ್ ರನ್‌ಔಟ್‌ಗಾಗಿ ಗಮನ ಸೆಳೆದಿದ್ದರು.
ಪಂಜಾಬ್ ಗೆಲ್ಲಲು ಕೊನೇ ಎಸೆತಕ್ಕೆ 2 ರನ್ ಬೇಕಿತ್ತು. ಸ್ಟ್ರೈಕ್‌ನಲ್ಲಿದ್ದ ಕ್ರಿಸ್ ಜೋರ್ಡನ್ ಟ್ರೆಂಟ್ ಬೌಲ್ಟ್ ಎಸೆತಕ್ಕೆ ಹೊಡೆದವರೇ ರನ್‌ಗಾಗಿ ಓಡಿದರು. ಎರಡನೇ ರನ್ ಪೂರ್ಣಗೊಳಿಸುವಲ್ಲಿ ಎಡವಿದ ಜೋರ್ಡನ್ ರನ್ ಔಟ್ ಆಗಿದ್ದರು. ರನ್ ಓಡುವಾಗ ಸುಲಭದ ನೇರ ದಾರಿಯಲ್ಲಿ ಓಡುವ ಬದಲು ದೂರದ ದಾರಿಯಲ್ಲಿ ಓಡಿದ್ದರಿಂದ ಜೋರ್ಡನ್‌ಗೆ ರನ್ ಪೂರ್ಣಗೊಳಿಸಲಾಗಿರಲಿಲ್ಲ.
ಜೋರ್ಡನ್ ಈ ರನ್‌ಔಟ್‌ಗಾಗಿ ಟೀಕೆಗೀಡಾಗಿದ್ದರು. ಇದಕ್ಕೆ ಕಾರಣ ಏನೆಂಬುದನ್ನು ಜೋರ್ಡನ್ ಹೇಳಿಕೊಂಡಿದ್ದಾರೆ. 'ಹೊರಗಿಂದ ನೋಡುವಾಗ ಆ ದಾರಿ ದೂರವಿದ್ದಂತೆ ಕಾಣುತ್ತದೆ. ಆದರೆ ನಿಜಕ್ಕೂ ಆವತ್ತು ನಾನ್ ಸ್ಟ್ರೈಕ್ ಕೊನೆಗೆ ತಲುಪುತ್ತಲೇ ನನ್ನ ಕಾಲು ತಪ್ಪಿತ್ತು. ನಾನು ಬಂದ ದಾರಿಯಲ್ಲೇ ಓಡಿದ್ದರೆ ಆಯತಪ್ಪಿ ಬೀಳುತ್ತಿದ್ದೆ. ಹಾಗಾಗೀ ಕಾಲು ಸಾಗಿದತ್ತ ಹೆಜ್ಜೆ ಹಾಕಿ ಓಡಿದೆ,' ಎಂದು ಜೋರ್ಡನ್ ವಿವರಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications