ಐಪಿಎಲ್ 2020: ಆರ್‌ಸಿಬಿಗೆ ಪದಾರ್ಪಣೆ ಮಾಡಿದ ಪಂದ್ಯದಲ್ಲೇ ಮೋಡಿ ಮಾಡಿದ ಮೋರಿಸ್

ಆರ್‌ಸಿಬಿ ಬ್ಯಾಟಿಂಗ್ ವಿಚಾರದಲ್ಲಿ ಪ್ರತಿ ಆವೃತ್ತಿಯಲ್ಲಿ ಅದ್ಭುತ ಪ್ರದರ್ಶನ ನೀಡಿದರೂ ಬೌಲಿಂಗ್ ವಿಚಾರದಲ್ಲಿ ಎಡವುತ್ತಿತ್ತು. ಅದರಲ್ಲೂ ಡೆತ್ ಓವರ್‌ಗಳಲ್ಲಿ ಭಾರೀ ಪ್ರಮಾಣದಲ್ಲಿ ರನ್ ಬಿಟ್ಟುಕೊಡುವುದು ಆರ್‌ಸಿಗೆ ಅಭ್ಯಾಸವೇ ಆಗಿತ್ತು. ಕೆಲ ಪಂದ್ಯಗಳ ಪ್ರದರ್ಶನವನ್ನು ಕಂಡ ಬಳಿಕ ಅದು ಈ ಬಾರಿಯ ಆವೃತ್ತಿಯಲ್ಲೂ ಮುಂದುವರಿದಂತೆ ಭಾಸವಾಗಿತ್ತು. ಆದರೆ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಅನುಭವಿ ಆಟಗಾರ ಎಂಟ್ರಿ ಈ ಸಮಸ್ಯೆಗೆ ಹೊರ ಭರವಸೆಯನ್ನು ಉಂಟು ಮಾಡಿದೆ.
ಆರ್‌ಸಿಬಿ ತಂಡದಲ್ಲಿ ಇಂದು ದಕ್ಷಿಣ ಆಫ್ರಿಕಾದ ಅನುಭವಿ ಆಲ್‌ರೌಂಡರ್ ಕಣಕ್ಕಿಳಿಯುವ ಮೂಲಕ ಪದಾರ್ಪಣೆಯನ್ನು ಮಾಡಿದ್ದರು. ಕ್ರಿಸ್ ಮೋರಿಸ್ ಆರ್‌ಸಿಬಿ ಆಡುವ ಬಳಗದಲ್ಲಿ ಕಾಣಿಸಿಕೊಂಡರೆ ತಂಡದಲ್ಲಿ ಅದ್ಭುತ ಸಮತೋಲನ ಕಂಡುಬರಲಿದೆ ಎಂಬ ಮಾತುಗಳು ಕೇಳಿ ಬಂದಿತ್ತು. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಮೋರಿಸ್ ಆ ನಿರೀಕ್ಷೆಯನ್ನು ನಿಜ ಮಾಡುವಲ್ಲಿ ಯಶಸ್ವಿಯಾದರು.

ಆರ್‌ಸಿಬಿಗೆ ಮೋರಿಸ್ ಶಕ್ತಿ
ಚೆನ್ನೈ ವಿರುದ್ಧದ ಪಂದ್ಯದಲ್ಲಿ ಕ್ರಿಸ್ ಮೋರಿಸ್ ಆರ್‌ಸಿಬಿಯ ಹಲವು ವರ್ಷಗಳ ಡೆತ್ ಬೌಲಿಂಗ್ ಸಮಸ್ಯೆಗೆ ಪರಿಹಾರದಂತೆ ಕಂಡುಬಂದರು. ರನ್ ನಿಯಂತ್ರಣ ಮಾಡುವಲ್ಲಿ ದೊಡ್ಡ ಯಶಸ್ಸು ಕಂಡ ಮೋರಿಸ್ ನಿರ್ಣಾಯಕ ಘಟ್ಟದಲ್ಲಿ ವಿಕೆಟ್ ಪಡೆಯುವಲ್ಲಿಯೂ ಯಶಸ್ವಿಯಾದರು. ಹೀಗಾಗಿ ಮೋರಿಸ್ ಆರ್‌ಸಿಬಿಗೆ ಮತ್ತಷ್ಟು ಶಕ್ತಿ ತುಂಬುವಲ್ಲಿ ಯಶಸ್ವಿಯಾಗಿದ್ದಾರೆ.

ಅದ್ಭುತ ಬೌಲಿಂಗ್ ಪ್ರದರ್ಶನ
ಚೆನ್ನೈ ವಿರುದ್ಧದ ಪಂದ್ಯದಲ್ಲಿ ನಾಲ್ಕು ಓವರ್‌ಗಳನ್ನು ಎಸೆದ ಕ್ರಿಸ್ ಮೋರಿಸ್ 4.80ಎಕಾನಮಿಯಲ್ಲಿ 19 ರನ್ ನೀಡಿ 3 ವಿಕೆಟ್ ಕಬಳಿಸಿದ್ದಾರೆ. ಕ್ರಿಸ್ ಮೋರಿಸ್ ಅವರ ಈ ಬೌಲಿಂಗ್ ದಾಳಿ ಆರ್‌ಸಿಬಿ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿತು. ನವ್‌ದೀಪ್ ಸೈನಿ ಮೋರಿಸ್‌ಗೆ ಉತ್ತಮ ಸಾಥ್ ನೀಡಿದರು.

ಭರ್ಜರಿ ಮೊತ್ತಕ್ಕೆ ಆರ್‌ಸಿಬಿ ತೆಕ್ಕೆಗೆ
ಕಳೆದ ವರ್ಷಾಂತ್ಯದಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಆರ್‌ಸಿಬಿ 10.2 ಕೋಟಿ ನೀಡಿ ಕ್ರಿಸ್ ಮೋರಿಸ್ ಅವರನ್ನು ತೆಕ್ಕೆಗೆ ಹಾಕಿಕೊಂಡಿತ್ತು. ಆದರೆ ಗಾಯಗೊಂಡಿದ್ದ ಕಾರಣ ಮೋರಿಸ್ ಆರಂಭದ 5 ಪಂದ್ಯಗಳಲ್ಲಿ ಆಡಲು ಇಳಿದಿರಲಿಲ್ಲ. ಚೆನ್ನೈ ವಿರುದ್ಧ ಮೊದಲ ಬಾರಿಗೆ ಆರ್‌ಸಿಬಿ ಪರವಾಗಿ ಕಣಕ್ಕಿಳಿದು ಭರ್ಜರಿ ಪ್ರದರ್ಶನ ನೀಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications