ಐಪಿಎಲ್ 2020: ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯಿಂದ ಶಾಕಿಂಗ್ ನ್ಯೂಸ್
ಕೊರೊನಾ ಮಹಾಮಾರಿ ಇನ್ನೇನೇನು ಆತಂಕವನ್ನು ಸೃಷ್ಟಿಸಲಿದೆಯೋ ದೇವರೇ ಬಲ್ಲ. ಈಗಾಗಲೇ, ಮಾರ್ಚ್ 29ರಿಂದ ಆರಂಭವಾಗಬೇಕಿದ್ದ ಐಪಿಎಲ್ - 13ನೇ ಆವೃತ್ತಿ, ಏಪ್ರಿಲ್ 15ರವರೆಗೆ ಮುಂದೂಡಲ್ಪಟ್ಟಿದೆ.
ವಿಶ್ವದ ಬಹುತೇಕ ಎಲ್ಲಾ ಮಹತ್ವದ ಕ್ರೀಡಾಕೂಟವು ಮುಂದಕ್ಕೆ ಹೋಗಿದೆ. ಪ್ರತಿಷ್ಠಿಯ ಯುರೋ ಮತ್ತು ಕೋಪಾ ಅಮೆರಿಕ ಫುಟ್ಬಾಲ್ ಟೂರ್ನಿಯನ್ನು ಮುಂದಕ್ಕೆ ಹಾಕಲಾಗಿದೆ.
ವರ್ಷದಲ್ಲಿ ನಡೆಯುವ ನಾಲ್ಕು ಗ್ರಾಂಡ್ ಸ್ಲ್ಯಾಂ ಟೆನಿಸ್ ಕ್ರೀಡಾಕೂಟದಲ್ಲಿ ಎರಡನೆಯ ಫ್ರೆಂಚ್ ಓಪನ್ ಟೆನಿಸ್ ಪಂದ್ಯಾವಳಿ ಕೂಡಾ ಮುಂದಕ್ಕೆ ಹೋಗಿದೆ.
ಐಪಿಎಲ್ ಯಾವಾಗ ಆರಂಭವಾಗಬಹುದು ಎನ್ನುವ ವಿಚಾರವೇ ಖಾತ್ರಿಯಾಗದೇ ಇರುವಾಗ, ಕ್ರಿಕೆಟ್ ಆಸ್ಟ್ರೇಲಿಯಾ ಮಹತ್ವದ ತೀರ್ಮಾನವನ್ನು ತೆಗೆದುಕೊಳ್ಳುವ ಸಾಧ್ಯತೆಯಿದ್ದು, ಐಪಿಎಲ್ ಮೆರುಗು ಕಮ್ಮಿಯಾಗುವ ಸಾಧ್ಯತೆಯಿದೆ.

ಕೊರೊನಾ ವೈರಸ್ ಹಾವಳಿ
ಕೊರೊನಾ ವೈರಸ್ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ, ಅಳೆದುತೂಗಿ ನಿರ್ಧಾರ ತೆಗೆದುಕೊಳ್ಲಲು ನಿರ್ಧರಿಸಿದೆ. ಐಪಿಎಲ್ ನಲ್ಲಿ ತನ್ನ ದೇಶದ ಕ್ರಿಕೆಟಿಗರು ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವುದರಿಂದ, ಕ್ರಿಕೆಟ್ ಆಸ್ಟ್ರೇಲಿಯಾ ಸದ್ಯದಲ್ಲೇ ಮಹತ್ವದ ತೀರ್ಮಾನ ಪ್ರಕಟಿಸುವ ಸಾಧ್ಯತೆಯಿದೆ.

ಪ್ಯಾಟ್ ಕಮ್ಮಿನ್ಸ್ 15.5 ಕೋಟಿಗೆ ಬಿಕರಿಯಾಗಿದ್ದರು
ಐಪಿಎಲ್ ನಲ್ಲಿ ಆಡಲು ಒಟ್ಟು ಹದಿನಾರು ಆಸ್ಟ್ರೇಲಿಯಾದ ಕ್ರಿಕೆಟ್ ಆಟಗಾರರು ಆಯ್ಕೆಯಾಗಿದ್ದಾರೆ. ಎಲ್ಲಾ ಎಂಟು ತಂಡಗಳಲ್ಲಿ ಆಸೀಸ್ ಆಟಗಾರರು ಇದ್ದು, ಅವರಲ್ಲಿ ಪ್ರಮುಖರು ಶೇನ್ ವಾಟ್ಸನ್, ಸ್ಟೀವನ್ ಸ್ಮಿತ್ ಮುಂತಾದವರು. ಇನ್ನು ಪ್ಯಾಟ್ ಕಮ್ಮಿನ್ಸ್ ಅಂತೂ 15.5 ಕೋಟಿಗೆ ಕೋಲ್ಕತ್ತಾ ತಂಡಕ್ಕೆ ಬಿಕರಿಯಾಗಿದ್ದರು.
ಟಿ20ಯಲ್ಲಿ ಡಬಲ್ ಸೆಂಚುರಿ ಹೊಡೆಯಬಲ್ಲ ವಿಶ್ವದ ಏಕೈಕ ಕ್ರಿಕೆಟಿಗ

ಐಪಿಎಲ್ 2020: ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯಿಂದ ಶಾಕಿಂಗ್ ನ್ಯೂಸ್
ತನ್ನ ಆಟಗಾರರ ಸುರಕ್ಷತೆಯ ದೃಷ್ಟಿಯಿಂದ, ಕ್ರಿಕೆಟ್ ಆಸ್ಟ್ರೇಲಿಯಾ, ತನ್ನ ಯಾವ ಆಟಗಾರರಿಗೂ ಐಪಿಎಲ್ ನಲ್ಲಿ ಆಡಲು ಎನ್ಓಸಿ (NOC, ನಿರೀಕ್ಷಣಾ ಪತ್ರ) ನೀಡದಿರುವ ತೀರ್ಮಾನಕ್ಕೆ ಬರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಜೊತೆಗೆ, ಐಪಿಎಲ್ ತಂಡದ ಜೊತೆಗಿನ ಗುತ್ತಿಗೆಯನ್ನು ಮುರಿದುಕೊಳ್ಳಲು ಆಟಗಾರರಿಗೆ ಅಧಿಕಾರ ನೀಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಕ್ರಿಕೆಟ್ ಆಸ್ಟ್ರೇಲಿಯಾ ಸಿಇಒ ಕೆವಿನ್ ರಾಬರ್ಟ್ಸ್
"ಭಾರತದಲ್ಲಿ ಕೊರೊನಾ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಮ್ಮ ಆಟಗಾರರು ಸುರಕ್ಷತೆಯನ್ನು ನಾವು ನೋಡಿಕೊಳ್ಲಬೇಕಿದೆ. ಇದುವರೆಗೆ, ಯಾವುದೇ ನಿರ್ಧಾರವನ್ನು ನಾವು ತೆಗೆದುಕೊಂಡಿಲ್ಲ. ಮುಂದಿನ ದಿನಗಳಲ್ಲಿ ಪರಿಸ್ಥಿತಿಯನ್ನು ಅವಲೋಕಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಲಲಾಗುವುದು" ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಸಿಇಒ ಕೆವಿನ್ ರಾಬರ್ಟ್ಸ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications