Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸಿಎಸ್‌ಕೆ ಅಭಿಮಾನಿಗಳಿಗೆ ಭಾವನಾತ್ಮಕ ಸಂದೇಶ ನೀಡಿದ ಶೇನ್ ವಾಟ್ಸನ್

IPL 2020: CSK batsman Shane Watson Shares message in Twitter

ದುಬೈ: ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ಆಸ್ಟ್ರೇಲಿಯಾದ ಮಾಜಿ ಆಲ್ ರೌಂಡರ್ ಶೇನ್ ವಾಟ್ಸನ್, ಇಂಡಿಯನ್ ಪ್ರೀಮಿಯರ್ ಲೀಗ್‌ನ ಅತೀ ಯಶಸ್ವಿ ತಂಡವಾಗಿ ಗುರುತಿಸಿಕೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್‌ನ ಅಭಿಮಾನಿಗಳಿಗೆ ಭಾವನಾತ್ಮಕ ಸಂದೇಶ ನೀಡಿದ್ದಾರೆ.

ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯುತ್ತಿರುವ 13ನೇ ಆವೃತ್ತಿಯ ಐಪಿಎಲ್‌ನಲ್ಲಿ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್‌ ಈಗಾಗಲೇ ಹೊರ ಬಿದ್ದಾಗಿದೆ. ಸಿಎಸ್‌ಕೆ ಪ್ಲೇ ಆಫ್‌ಗೆ ಎಂಟ್ರಿಯಾಗದೆ ಟೂರ್ನಿಯಿಂದ ಹೊರ ಬೀಳುತ್ತಿರುವುದು ಇದೇ ಮೊದಲು. ಸಿಎಸ್‌ಕೆ ಹೊರ ನಡೆಯುತ್ತಲೇ ವಾಟ್ಸನ್ ನಿವೃತ್ತಿ ಘೋಷಿಸಿದ್ದರು.

ಮಂಗಳವಾರ (ನವೆಂಬರ್ 3) ಸಿಎಸ್‌ಕೆ ವಿಡಿಯೋ ಟ್ವೀಟ್‌ನಲ್ಲಿ ಮಾತನಾಡಿರುವ ವಾಟ್ಸನ್, 'ಯೆಲ್ಲೋ ಆರ್ಮಿಯ ಎಲ್ಲರಿಗೂ ಹಲೋ. ಕಳೆದ ಮೂರು ವರ್ಷಗಳಿಂದಲೂ ಒಳ್ಳೆಯ ಕ್ರಿಕೆಟ್ ಆಡುತ್ತಿದ್ದೆ. ಆದರೆ ಈಗಿನಿಂದಲೇ ನಾನು ನಿವೃತ್ತಿ ಘೋಷಿಸುತ್ತಿದ್ದೇನೆ. ಇದು ಭಾವನಾತ್ಮಕ ಸಂಗತಿ,' ಎಂದು ಭಾವುಕರಾಗಿ ಹೇಳಿದ್ದಾರೆ.

ಟ್ವೀಟ್‌ನ ಮುಂದುವರೆದ ಭಾಗದಲ್ಲಿ, 'ಕಳೆದ ಮೂರು ವರ್ಷಗಳಿಂದಲೂ ನಿಮ್ಮ ಪ್ರೀತಿಗೆ, ಅಭಿಮಾನಕ್ಕೆ ನಾನು ಋಣಿ. ಈಗ ಮುಂದುವರೆಯಲು ಸಮಯವಾಗಿದೆ,' ಎಂದು ಹೇಳಿದ್ದಾರೆ. ಐಪಿಎಲ್ 141 ಇನ್ನಿಂಗ್ಸ್‌ಗಳಲ್ಲಿ 3874 ರನ್, 21 ಅರ್ಧ ಶತಕ, 4 ಶತಕ, 105 ಇನ್ನಿಂಗ್ಸ್‌ಗಳಲ್ಲಿ 92 ವಿಕೆಟ್ ದಾಖಲೆ ವಾಟ್ಸನ್ ಹೆಸರಿನಲ್ಲಿದೆ.

Story first published: Tuesday, November 3, 2020, 14:34 [IST]
Other articles published on Nov 3, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+