Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2020: ಸಿಎಸ್‌ಕೆ ಬ್ಯಾಟ್ಸ್‌ಮನ್ ಫಾಫ್ ಡು ಪ್ಲೆಸಿಸ್ ವಿಶೇಷ ದಾಖಲೆ

IPL 2020: CSKs Faf du Plessis fourth-fastest foreign player to score 2000 runs

ದುಬೈ: ಚೆನ್ನೈ ಸೂಪರ್ ಕಿಂಗ್ಸ್ ಅನುಭವಿ ಬ್ಯಾಟ್ಸ್‌ಮನ್ ಫಾಫ್ ಡು ಪ್ಲೆಸಿಸ್ ವಿಶೇಷ ದಾಖಲೆ ನಿರ್ಮಿಸಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅತೀ ವೇಗದಲ್ಲಿ 2000 ರನ್ ಬಾರಿಸಿದ 4ನೇ ವಿದೇಶಿ ಬ್ಯಾಟ್ಸ್‌ಮನ್ ಆಗಿ ಡು ಪ್ಲೆಸಿಸ್ ಗಮನ ಸೆಳೆದಿದ್ದಾರೆ.

ಐಪಿಎಲ್ 7ನೇ ಪಂದ್ಯದಲ್ಲಿ ಅಂದರೆ, ಶುಕ್ರವಾರ (ಸೆಪ್ಟೆಂಬರ್ 25) ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ 35 ಎಸೆತಗಳಲ್ಲಿ 43 ರನ್ ಸೇರಿಸುವುದರೊಂದಿಗೆ ಈ ಮೈಲಿಗಲ್ಲು ಸ್ಥಾಪಿಸಿದ್ದಾರೆ.

ಡು ಪ್ಲೆಸಿಸ್‌ಗಿಂತ ಮುಂಚೆ ಈ ದಾಖಲೆ ನಿರ್ಮಿಸಿದ ವಿದೇಶಿ ಬ್ಯಾಟ್ಸ್‌ಮನ್‌ಗಳೆಂದರೆ ವೆಸ್ಟ್ ಇಂಡೀಸ್‌ನ ಕ್ರಿಸ್ ಗೇಲ್, ಆಸ್ಟ್ರೇಲಿಯಾದ ಶಾನ್ ಮಾರ್ಷ್, ಶೇನ್ ವಾಟ್ಸನ್. ಡು ಪ್ಲೆಸಿಸ್ 2000 ರನ್ ಬಾರಿಸಲು 67 ಇನ್ನಿಂಗ್ಸ್‌ ಬಳಸಿಕೊಂಡಿದ್ದರೆ, ಗೇಲ್ 48 ಇನ್ನಿಂಗ್ಸ್‌ಗಳಲ್ಲಿ, ಮಾರ್ಷ್ 52 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದರು.

ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಮತ್ತು ವೆಸ್ಟ್ ಇಂಡೀಸ್‌ನ ಡ್ವೇನ್ ಸ್ಮಿತ್ ಹೆಸರಿನಲ್ಲೂ ಕೂಡ ಈ ದಾಖಲೆಯಿದೆ. ಆದರೆ ಸ್ಮಿತ್ ಮತ್ತು ವಾರ್ನರ್ ಈ ಸಾಧನೆಗಾಗಿ 70 ಇನ್ನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದಾರೆ. ಅಂದ್ಹಾಗೆ ಶುಕ್ರವಾರದ ಪಂದ್ಯದಲ್ಲಿ ಡೆಲ್ಲಿ ತಂಡ 44 ರನ್‌ಗಳ ಜಯ ಗಳಿಸಿದೆ. ಪೃಥ್ವಿ ಶಾ ಅವರ ಅರ್ಧ ಶತಕ (64 ರನ್) ಕೊಡುಗೆಯಿಂದ ಡೆಲ್ಲಿ ಸತತ ಎರಡನೇ ಗೆಲುವು ದಾಖಲಿಸಿದೆ.

Story first published: Saturday, September 26, 2020, 10:04 [IST]
Other articles published on Sep 26, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+