ಐಪಿಎಲ್ 2020: ಸಿಎಸ್‌ಕೆ vs ಡಿಸಿ, ಸಂಭಾವ್ಯ ತಂಡಗಳು, ಪಿಚ್ ರಿಪೋರ್ಟ್

ದುಬೈ: ಆಡಿದ ಎರಡನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋಲು ಕಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿಗಾಗಿ ಎದುರು ನೋಡುತ್ತಿದೆ. ಶುಕ್ರವಾರ (ಸೆಪ್ಟೆಂಬರ್ 25) ದುಬೈ ಇಂಟರ್‌ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಐಪಿಎಲ್ 7ನೇ ಪಂದ್ಯದಲ್ಲಿ ಚೆನ್ನೈ ತಂಡ ಡೆಲ್ಲಿ ಕ್ಯಾಪಿಟಲ್ಸ್ ಸವಾಲು ಸ್ವೀಕರಿಸಲಿದೆ. ಅತ್ತ, ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಗೆಲುವು ಕಂಡಿರುವ ಡಿಸಿ ಮತ್ತೊಂದು ವಿಜಯದತ್ತ ಚಿತ್ತ ಹರಿಸಿದೆ.
ಐಪಿಎಲ್ 2ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕಿಂಗ್ಸ್ ಇಲೆವೆನ್ ವಿರುದ್ಧ ಸಮಬಲ ಸಾಧಿಸಿ ಪಂದ್ಯವನ್ನು ಸೂಪರ್ ಓವರ್‌ನತ್ತ ಕೊಂಡೊಯ್ದು ಗೆದ್ದಿತ್ತು. ಇಂದಿನ ಪಂದ್ಯ ಸಿಎಸ್‌ಕೆ ಪಾಲಿಗೆ ಮೂರನೆಯದ್ದಾಗಿದ್ದರೆ, ಡಿಸಿಗೆ ಎರಡನೆಯದು.
ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯಕ್ಕೆ ಸಂಬಂಧಿಸಿ ಪ್ರಮುಖ ಮಾಹಿತಿಗಳು ಇಲ್ಲಿವೆ.

ಹವಾಮಾನ ವರದಿ
ಡೆಲ್ಲಿ ಮತ್ತು ಚೆನ್ನೈ ಆಡುವ ಸೆಪ್ಟೆಂಬರ್ 25ರಂದು ದುಬೈನಲ್ಲಿ ತಾಪಮಾನ 39 ಡಿಗ್ರೀ ಸೆಲ್ಶಿಯಸ್ ಇರಲಿದೆ. ಇನ್ನು ರಾತ್ರಿಯ ಹೊತ್ತು 27 ಡಿಗ್ರೀ ಸೆಲ್ಶಿಯನ್ ತಾಪಮಾನ ಇರಲಿದೆ. ಮಳೆಯ ಸಾದ್ಯತೆಯಂತೂ ಖಂಡಿತಾ ಇಲ್ಲ. ಪಂದ್ಯ ಸಂಜೆ 7.30 pmಗೆ ಆರಂಭವಾಗಲಿದೆ.

ದುಬೈ ಪಿಚ್ ವರದಿ
ಈಗಾಗಲೇ 6 ಪಂದ್ಯಗಳನ್ನು ನಾವು ನೋಡಿದ್ದೇವೆ. ಟಾಸ್ ಗೆದ್ದ ಹೆಚ್ಚಿನ ತಂಡಗಳು ಚೇಸಿಂಗ್ ಆರಿಸಿದ್ದನ್ನು ಗಮನಿಸಿದ್ದೇವೆ. ಅಂದರೆ ಇಲ್ಲಿ ಇಬ್ಬಿನಿಯ ಅಂಶ ಪ್ರಮುಖ ಪಾತ್ರ ವಹಿಸುತ್ತಿದೆ. ಅಂದರೆ ಹೊತ್ತು ಕಳೆದಂತೆ ದುಬೈ ಪಿಚ್ ಬ್ಯಾಟಿಂಗ್‌ಗೆ ಹೆಚ್ಚು ಅನುಕೂಲ ನೀಡಲಿದೆ.

ಸಿಎಸ್‌ಕೆ ಪ್ಲೇಯಿಂಗ್ XI
ಶೇನ್ ವ್ಯಾಟ್ಸನ್, ಮುರಳಿ ವಿಜಯ್, ಫಾಫ್ ಡು ಪ್ಲೆಸಿಸ್, ಋತುರಾಜ್ ಗಾಯಕವಾಡ್, ಎಂ.ಎಸ್. ಧೋನಿ (ಸಿ & ವಿಕೆ), ಸ್ಯಾಮ್ ಕರನ್, ಕೇದಾರ್ ಜಾಧವ್, ರವೀಂದ್ರ ಜಡೇಜಾ, ಪಿಯೂಷ್ ಚಾವ್ಲಾ, ದೀಪಕ್ ಚಹಾರ್, ಲುಂಗಿ ಎನ್‌ಗಿಡಿ.

ಡಿಸಿ ಪ್ಲೇಯಿಂಗ್ XI
ಶಿಖರ್ ಧವನ್, ಪೃಥ್ವಿ ಶಾ, ಶಿಮ್ರಾನ್ ಹೆಟ್ಮೈಯರ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಮಾರ್ಕಸ್ ಸ್ಟೊಯಿನಿಸ್, ಅಕ್ಸಾರ್ ಪಟೇಲ್, ರವಿಚಂದ್ರನ್ ಅಶ್ವಿನ್/ಅಮಿತ್ ಮಿಶ್ರಾ, ಕಾಗಿಸೊ ರಬಾಡ, ಅನ್ರಿಚ್ ನಾರ್ಟ್ಜೆ, ಮೋಹಿತ್ ಶರ್ಮಾ/ಆವೇಶ್ ಖಾನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications