For Quick Alerts
ALLOW NOTIFICATIONS  
For Daily Alerts
 

ಜೋಸ್ ಬಟ್ಲರ್ ಬ್ಯಾಟಿಂಗ್‌ಗೆ ಶರಣೆಂದ ಚೆನ್ನೈ ಸೂಪರ್ ಕಿಂಗ್ಸ್

IPL 2020: CSK vs RR Match 37 highlights in kannada

ಅಬುಧಾಬಿ: ಅಬುಧಾಬಿಯ ಶೈಕ್ ಝಾಯೆದ್ ಸ್ಟೇಡಿಯಂನಲ್ಲಿ ಸೋಮವಾರ (ಅಕ್ಟೋಬರ್ 19) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 37 ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ 7 ವಿಕೆಟ್ ಸುಲಭ ಗೆಲುವು ಕಂಡಿದೆ. ಜೋಸ್ ಬಟ್ಲರ್ ಚತುರ ಬ್ಯಾಟಿಂಗ್‌ನಿಂದ ಆರ್ಆರ್ ಗೆಲುವಿನ ನಗು ಬೀರಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಚೆನ್ನೈ ಸೂಪರ್ ಕಿಂಗ್ಸ್, ಸ್ಯಾಮ್ ಕರನ್ 22, ಫಾಫ್ ಡು ಪ್ಲೆಸಿಸ್ 10, ಅಂಬಾಟಿ ರಾಯುಡು 13, ಎಂಎಸ್ ಧೋನಿ 28, ರವೀಂದ್ರ ಜಡೇಜಾ 35 ರನ್ ಸೇರ್ಪಡೆಯೊಂದಿಗೆ 20 ಓವರ್‌ಗೆ 5 ವಿಕೆಟ್ ನಷ್ಟದಲ್ಲಿ ಕೇವಲ 125 ರನ್ ಗಳಿಸಿತು.

ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ಕೂಡ ಬೇಗನೆ ವಿಕೆಟ್‌ ಕಳೆದುಕೊಳ್ಳಲಾರಂಭಿಸಿತು. ಆದರೆ ನಾಯಕ ಸ್ಟೀವ್ ಸ್ಮಿತ್ ಮತ್ತು ಜೋಸ್ ಬಟ್ಲರ್ ಜವಾಬ್ದಾರಿಯುತ ಆಟ ಆಡಿದರು. ಬೆನ್ ಸ್ಟೋಕ್ಸ್ 19, ಸ್ಮಿತ್ 26, ಜೋಸ್ ಬಟ್ಲರ್ 70 (48) ರನ್ ಕೊಡುಗೆಯೊಂದಿಗೆ ಆರ್‌ಆರ್ 17.3 ಓವರ್‌ಗೆ 3 ವಿಕೆಟ್ ನಷ್ಟದಲ್ಲಿ 126 ರನ್ ಮಾಡಿತು.

ಚೆನ್ನೈ ಸೂಪರ್ ಕಿಂಗ್ಸ್ ಇನ್ನಿಂಗ್ಸ್‌ನಲ್ಲಿ ರಾಜಸ್ಥಾನ್ ರಾಯಲ್ಸ್‌ನ ಜೋಫ್ರಾ ಆರ್ಚರ್, ಕಾರ್ತಿಕ್ ತ್ಯಾಗಿ, ಶ್ರೇಯಸ್ ಗೋಪಾಲ್ ಮತ್ತು ರಾಹುಲ್ ತೆವಾಟಿಯಾ ತಲಾ 1 ವಿಕೆಟ್ ಪಡೆದರೆ, ರಾಜಸ್ಥಾನ್ ಇನ್ನಿಂಗ್ಸ್‌ನಲ್ಲಿ ಚೆನ್ನೈಯ ದೀಪಕ್ ಚಹಾರ್ 2, ಜೋಶ್ ಹ್ಯಾಝಲ್ವುಡ್ 1 ವಿಕೆಟ್‌ಗಾಗಿ ಗಮನ ಸೆಳೆದರು.

Story first published: Tuesday, October 20, 2020, 10:30 [IST]
Other articles published on Oct 20, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+