ಚೆನ್ನೈ vs ಹೈದರಾಬಾದ್ ಮುಖಾಮುಖಿಯ ಕುತೂಹಲಕಾರಿ ಅಂಕಿ-ಅಂಶಗಳು

ದುಬೈ: ಶುಕ್ರವಾರ (ಅಕ್ಟೋಬರ್ 2) ನಡೆಯುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 14ನೇ ಪಂದ್ಯದಲ್ಲಿ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೇವಿಡ್ ವಾರ್ನರ್ ನಾಯಕತ್ವದ ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಸೆಣಸಾಡಲಿವೆ. ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯುವ ಈ ಪಂದ್ಯ 7.30 pmಗೆ ಆರಂಭವಾಗಲಿದೆ. ಸದ್ಯದ ಪಾಯಿಂಟ್ಸ್ ಟೇಬಲ್‌ನಲ್ಲಿ ಕೊನೇ ಸ್ಥಾನದಲ್ಲಿರುವ ಸಿಎಸ್‌ಕೆ ಗೆಲುವಿನತ್ತ ಚಿತ್ತ ಹರಿಸಿದೆ.
ಈ ಸೀಸನ್‌ನಲ್ಲಿ ಆಡಿರುವ ಮೂರು ಪಂದ್ಯಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ಎರಡೂ ತಂಡಗಳೂ ಎರಡು ಪಂದ್ಯಗಳನ್ನು ಸೋತು ಒಂದು ಪಂದ್ಯವನ್ನಷ್ಟೇ ಗೆದ್ದಿದೆ. ಎರಡೂ ತಂಡಗಳ ಖಾತೆಯಲ್ಲೂ ತಲಾ 2 ಅಂಕಗಳಿವೆ.
ಸಿಎಸ್‌ಕೆ ಮತ್ತು ಎಸ್‌ಆರ್‌ಎಚ್ ತಂಡಗಳು ಹಿಂದೆಯೂ ಕುತೂಹಲಕಾರಿ ಕದನಗಳಿಗೆ ಸಾಕ್ಷಿಯಾಗಿವೆ. ಇತ್ತಂಡಗಳ ಕದನದ ಅಂಕಿ-ಅಂಶಗಳು ಇಲ್ಲಿವೆ.

ಚೆನ್ನೈ ಹೆಚ್ಚು ಬಲಶಾಲಿ
ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಈ ಹಿಂದೆ ಒಟ್ಟಿಗೆ 13 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಸಿಎಸ್‌ಕೆ 10 ಪಂದ್ಯಗಳನ್ನು ಗೆದ್ದಿದ್ದರೆ, ಎಸ್‌ಆರ್‌ಎಚ್ ಕೇವಲ 3 ಪಂದ್ಯಗಳನ್ನು ಜಯಿಸಿದೆ. ಈ ಲೆಕ್ಕಾಚರಾರದಲ್ಲಿ ನೋಡಿದರೆ ಚೆನ್ನೈ ಕೊಂಚ ಬಲಶಾಲಿಯಾಗಿ ಕಾಣಿಸಿದೆ.

ಸಿಎಸ್‌ಕೆ vs ಎಸ್‌ಆರ್‌ಎಚ್ ಮುಖಾಮುಖಿ
* ಆಡಿದ ಒಟ್ಟು ಪಂದ್ಯಗಳ ಸಂಖ್ಯೆ: 13
* ಸಿಎಸ್ಕೆ ಗೆದ್ದ ಪಂದ್ಯಗಳು: 10
* ಎಸ್‌ಆರ್‌ಹೆಚ್ ಗೆದ್ದ ಪಂದ್ಯಗಳು: 3
* ಭಾರತದಲ್ಲಿ ಆಡಿದ ಪಂದ್ಯ: 12 (ಸಿಎಸ್‌ಕೆ 9, ಎಸ್‌ಆರ್‌ಹೆಚ್ 3)

ಯುಎಇಯಲ್ಲಿ ಆಡಿದ ಪಂದ್ಯಗಳು
* ಯುಎಇಯಲ್ಲಿ ಆಡಿದ ಪಂದ್ಯಗಳು: 1 (ಸಿಎಸ್‌ಕೆ 1, ಎಸ್‌ಆರ್‌ಹೆಚ್ 0)
* ಎಸ್‌ಆರ್‌ಹೆಚ್ ವಿರುದ್ಧ ಸಿಎಸ್‌ಕೆ ಸರಾಸರಿ ಸ್ಕೋರ್: 176
* ಸಿಎಸ್‌ಕೆ ವಿರುದ್ಧ ಎಸ್‌ಆರ್‌ಹೆಚ್ ಸರಾಸರಿ ಸ್ಕೋರ್: 167
* ಸಿಎಸ್‌ಕೆಗೆ ಹೆಚ್ಚಿನ ರನ್: 331 (ಎಂಎಸ್ ಧೋನಿ)
* ಎಸ್‌ಆರ್‌ಎಚ್‌ಗೆ ಹೆಚ್ಚಿನ ರನ್: 311 (ಡೇವಿಡ್ ವಾರ್ನರ್)

ಸಿಎಸ್‌ಕೆಗೆ ಹೆಚ್ಚಿನ ವಿಕೆಟ್‌ಗಳು
* ಸಿಎಸ್‌ಕೆಗೆ ಹೆಚ್ಚಿನ ವಿಕೆಟ್‌ಗಳು: 15 (ಡ್ವೇನ್ ಬ್ರಾವೋ)
* ಎಸ್‌ಆರ್‌ಎಚ್‌ಗೆ ಹೆಚ್ಚಿನ ವಿಕೆಟ್‌ಗಳು: 7 (ಭುವನೇಶ್ವರ್ ಕುಮಾರ್)
* ಸಿಎಸ್‌ಕೆಗಾಗಿ ಹೆಚ್ಚಿನ ಕ್ಯಾಚ್‌ಗಳು: 7 (ಎಂಎಸ್ ಧೋನಿ)
* ಎಸ್‌ಆರ್‌ಹೆಚ್ ಗಾಗಿ ಹೆಚ್ಚಿನ ಕ್ಯಾಚ್‌ಗಳು: 2 (ಜಾನಿ ಬೈರ್‌ಸ್ಟೋವ್, ಶ್ರೀವತ್ಸ ಗೋಸ್ವಾಮಿ ಮತ್ತು ಡೇವಿಡ್ ವಾರ್ನರ್)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications