For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಸೂಪರ್ ಕಿಂಗ್ಸ್‌ಗೆ ಸೋಲುಣಿಸಿದ ಸನ್ ರೈಸರ್ಸ್

IPL 2020: CSK vs SRH Match 14 highlights in kannada

ದುಬೈ: ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಶುಕ್ರವಾರ (ಅಕ್ಟೋಬರ್ 2) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 14ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ ತಂಡ 7 ರನ್ ರೋಚಕ ಜಯ ಗಳಿಸಿದೆ. ಯುವ ಬ್ಯಾಟ್ಸ್‌ಮನ್‌ಗಳಾದ ಪ್ರಿಯಂ ಗರ್ಗ್ ಮತ್ತು ಅಭಿಷೇಕ್ ಶರ್ಮಾ ಆಟದ ನೆರವಿನಿಂದ ಎಸ್‌ಆರ್‌ಎಚ್ 2ನೇ ಗೆಲುವು ದಾಖಲಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಸನ್ ರೈಸರ್ಸ್ ಹೈದರಾಬಾದ್, ಡೇವಿಡ್ ವಾರ್ನರ್ 28, ಮನೀಶ್ ಪಾಂಡೆ 29, ಪ್ರಿಯಂ ಗರ್ಗ್ 51 (26 ಎಸೆತ), ಅಭಿಷೇಕ್ ಶರ್ಮಾ 31 (24 ಎಸೆತ), ಕೇನ್ ವಿಲಿಯಮ್ಸನ್ 9 ರನ್‌ ಕೊಡುಗೆಯೊಂದಿಗೆ 20 ಓವರ್‌ಗೆ 5 ವಿಕೆಟ್ ಕಳೆದು 164 ರನ್ ಬಾರಿಸಿತು.

ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್, ಫಾಫ್ ಡು ಪ್ಲೆಸಿಸ್ 22, ಅಂಬಾಟಿ ರಾಯುಡು 8, ಎಂಎಸ್ ಧೋನಿ 47 (36 ಎಸೆತ), ರವೀಂದ್ರ ಜಡೇಜಾ 50 (35 ಎಸೆತ), ಸ್ಯಾಮ್ ಕರನ್ ಅಜೇಯ 15 ರನ್‌ ಸೇರ್ಪಡೆಯೊಂದಿಗೆ 20 ಓವರ್‌ಗೆ 5 ವಿಕೆಟ್ ನಷ್ಟದಲ್ಲಿ 157 ರನ್ ಗಳಿಸಿತು.

ಹೈದರಾಬಾದ್ ಇನ್ನಿಂಗ್ಸ್‌ನಲ್ಲಿ ಚೆನ್ನೈಯ ದೀಪಕ್ ಚಹಾರ್ 2, ಶಾರ್ದೂಲ್ ಠಾಕೂರ್ 1, ಪೀಯೂಷ್ ಚಾವ್ಲಾ 1 ವಿಕೆಟ್ ಪಡೆದರು. ಸಿಎಸ್‌ಕೆ ಇನ್ನಿಂಗ್ಸ್‌ನಲ್ಲಿ ಎಸ್‌ಆರ್‌ಎಚ್‌ನ ಭುವನೇಶ್ವರ್ ಕುಮಾರ್ 1, ಟಿ ನಟರಾಜನ್‌ 2, ಅಬ್ದುಲ್ ಸಮದ್ 1 ವಿಕೆಟ್‌ನಿಂದ ಗಮನ ಸೆಳೆದರು. ಪಂದ್ಯಶ್ರೇಷ್ಠ ಪ್ರಶಸ್ತಿ ಪ್ರಿಯಂ ಗರ್ಗ್‌ಗೆ ಒಲಿಯಿತು.

Story first published: Saturday, October 3, 2020, 9:23 [IST]
Other articles published on Oct 3, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+