ಆತ ವಿಶ್ವದಲ್ಲೇ ಬೆಸ್ಟ್ ಟಿ20 ಬೌಲರ್: ಐಪಿಎಲ್ ಬೌಲರ್ ಹೆಸರಿಸಿದ ಹಸ್ಸಿ

ನವದೆಹಲಿ: ಈ ಬಾರಿಯ ಕೆರಿಬಿಯನ್ ಪ್ರೀಮಿಯರ್ ಲೀಗ್ ಟ್ರೋಫಿ ಗೆದ್ದ ಟ್ರಿನ್‌ಬಾಗೊ ನೈಟ್ ರೈಡರ್ಸ್‌ನ ಪ್ಲೇಯಿಂಗ್ XIನಲ್ಲಿ ವೆಸ್ಟ್ ಇಂಡೀಸ್ ಆಲ್ ರೌಂಡರ್ ಸುನಿಲ್ ನರೈನ್ ಕಾಣಿಸಿಕೊಂಡಿರಲಿಲ್ಲ. ಆದರೆ ಮುಂಬರಲಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ನರೈನ್ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಮೈದಾನಕ್ಕಿಳಿಯಲಿದ್ದಾರೆ.
ಆಸ್ಟ್ರೇಲಿಯಾ ಮಾಜಿ ಬ್ಯಾಟ್ಸ್‌ಮನ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಮಾರ್ಗದರ್ಶಿ ಡೇವಿಡ್ ಹಸ್ಸಿ, ಸ್ಪಿನ್ನರ್ ಸುನಿಲ್ ನರೈನ್ ಅವರನ್ನು ಶ್ಲಾಘಿಸಿದ್ದಾರೆ. ನರೈನ್ ವಿಶ್ವದಲ್ಲಿ ಬೆಸ್ಟ್ ಟಿ20 ಕ್ರಿಕೆಟ್ ಬೌಲರ್ ಎಂದು ಹಸ್ಸಿ ಹೇಳಿದ್ದಾರೆ. ನರೈನ್ ವಿಂಡೀಸ್ ಪರ 23 ಟಿ20ಐ ಇನ್ನಿಂಗ್ಸ್‌ಗಳಲ್ಲಿ 155 ವಿಕೆಟ್ ದಾಖಲೆ ಹೊಂದಿದ್ದಾರೆ.
ಪಿಟಿಐ ಜೊತೆ ಮಾತನಾಡಿದ ಆಸೀಸ್ ಮಾಜಿ ಆಲ್ ರೌಂಡರ್ ಹಸ್ಸಿ, 'ವಾದಯೋಗ್ಯವಾಗಿ ನರೈನ್ ಒಬ್ಬರು ವಿಶ್ವದ ಬೆಸ್ಟ್ ಟಿ20 ಬೌಲರ್. ಯಾವುದೇ ಸಂದರ್ಭಕ್ಕೂ ಅವರು ಅತ್ಯುತ್ತಮ ಆಟಗಾರ. ಅದೃಷ್ಟವಶಾತ್ ಅವರು ಕೆಕೆಆರ್‌ನಲ್ಲಿದ್ದಾರೆ,' ಎಂದಿದ್ದಾರೆ.
ಕೆಕೆಆರ್‌ನಲ್ಲಿ ಸುನಿಲ್ ನರೈನ್ ಅತ್ಯಧಿಕ ವಿಕೆಟ್ ಪಡೆದ ಮುಂಚೂಣಿ ಬೌಲರ್ ಆಗಿ ಗುರುತಿಸಿಕೊಂಡಿದ್ದಾರೆ. ಕೆಕೆಆರ್ ಪರ ನರೈನ್ 110 ಪಂದ್ಯಗಳಲ್ಲಿ 122 ವಿಕೆಟ್ ಪಡೆದಿದ್ದಾರೆ. ಕೆಕೆಆರ್‌ಗೆ ನರೈನ್ 2012ರಲ್ಲಿ ಪಾದಾರ್ಪಣೆ ಮಾಡಿದ್ದರು.
ಸ್ಪಿನ್ ಮಾಂತ್ರಿಕ ನರೈನ್ ಕೆಕೆಆರ್‌ನಲ್ಲಿ ಆಲ್ ರೌಂಡರ್ ಆಗಿ ಗುರುತಿಸಿಕೊಂಡಿದ್ದಾರೆ. ಆದರೆ ಹಸ್ಸಿ, ನರೈನ್ ಅವರ ಮುಖ್ಯ ಶಕ್ತಿ ಬೌಲಿಂಗ್ ಎಂದಿದ್ದಾರೆ. 'ಸುನಿಲ್ ನರೈನ್ ಕೆಕೆಆರ್‌ನಲ್ಲಿದ್ದು ಪ್ರಮುಖ ಪಂದ್ಯಗಳನ್ನು ಗೆಲ್ಲುತ್ತಾರೆ ಎಂದು ನನಗೆ ಖಾತ್ರಿಯಿದೆ,' ಎಂದು ಹಸ್ಸಿ ಭರವಸೆ ವ್ಯಕ್ತಪಡಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications