ಅರ್ಧ ಶತಕಗಳ ಅರ್ಧ ಶತಕ ಬಾರಿಸಿ ಐಪಿಎಲ್‌ನಲ್ಲಿ ಇತಿಹಾಸ ಬರೆದ ಡೇವಿಡ್ ವಾರ್ನರ್

ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ಐಪಿಎಲ್ ಕಂಡ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು ಎಂದು ಈಗಾಗಲೇ ಗುರುತಿಸಲ್ಪಟ್ಟಿದ್ದಾರೆ. ತನ್ನ ಹೆಸರಿನಲ್ಲಿ ಸಾಕಷ್ಟು ದಾಖಲೆಗಳನ್ನು ನಿರ್ಮಿಸಿದ್ದಾರೆ ಆಸ್ಟ್ರೇಲಿಯಾದ ಈ ಸ್ಪೋಟಕ ಆರಂಭಿಕ ಆಟಗಾರ. ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಅರ್ಧ ಶತಕವನ್ನು ಗಳಿಸುವ ಮೂಲಕ 13 ವರ್ಷಗಳ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಮಹತ್ವದ ಮೈಲಿಗಲ್ಲೊಂದನ್ನು ನೆಟ್ಟಿದ್ದಾರೆ.
ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಡೇವಿಡ್ ವಾರ್ನರ್ ಐಪಿಎಲ್ ಇತಿಹಾಸದಲ್ಲಿ ಯಾರೂ ಮಾಡದ ದಾಖಲೆಯೊಂದನ್ನು ಮಾಡಿದ್ದಾರೆ. ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ವಾರ್ನರ್ ಅರ್ಧ ಶತಕವನ್ನು ಪೂರೈಸಿದ್ದಾರೆ. ಈ ಮೂಲಕ ಐಪಿಎಲ್‌ನಲ್ಲಿ 50 ಅರ್ಧ ಶತಕ ಬಾರಿಸಿದ ಸಾಧನೆ ಮಾಡಿದ್ದಾರೆ.

ಅತಿ ಹೆಚ್ಚು ಅರ್ಧ ಶತಕ ಗಳಿಸಿದ ಆಟಗಾರರಿವರು
ಐಪಿಎಲ್‌ನಲ್ಲಿ ಅತಿ ಹೆಚ್ಚು ಅರ್ಧ ಶತಕ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ವಾರ್ನರ್ ಮತ್ತಷ್ಟು ಮುನ್ನಡೆಯನ್ನು ಪಡೆದುಕೊಂಡಿದ್ದಾರೆ. ವಿರಾಟ್ ಕೊಹ್ಲಿ, ಎಬಿಡಿ ವಿಲಿಯರ್ಸ್, ರೋಹಿತ್ ಶರ್ಮಾ ಹಾಗೂ ಸುರೇಶ್ ರೈನಾ ಈ ಪಟ್ಟಿಯಲ್ಲಿ ವಾರ್ನರ್ ಬಳಿಕದ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಎರಡನೇ ಸ್ಥಾನದಲ್ಲಿರುವ ವಿರಾಟ್ ಕೊಹ್ಲಿ 42 ಅರ್ಧ ಶತಕ ಗಳಿಸಿದ್ದಾರೆ. ಸುರೇಶ್ ರೈನಾ ಹಾಗೂ ಎಬಿ ಡಿವಿಲಿಯರ್ಸ್ 39 ಅರ್ಧ ಶತಕವನ್ನು ಗಳಿಸಿದ್ದು ರೋಹಿತ್ ಶರ್ಮಾ ಖಾತೆಯಲ್ಲಿ 38 ಅರ್ಧಶತಕಗಳಿವೆ

ನಾಯಕನ ಆಟವಾಡಿದ ವಾರ್ನರ್
ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ದದ ಪಂದ್ಯದಲ್ಲಿ ಡೇವಿಡ್ ವಾರ್ನರ್ 14ನೇ ಓವರ್‌ನಲ್ಲಿ ಅರ್ದ ಶತಕದ ಗಡಿಯನ್ನು ತಲುಪುವಲ್ಲಿ ಯಶಸ್ವಿಯಾದರು. ಈ ಮೂಲಕ ಐಪಿಎಲ್‌ನಲ್ಲಿ ಮಹತ್ವದ ಮೈಲಿಗಲ್ಲೊಂದನ್ನು ಸ್ಥಾಪಿಸಿದ್ದಾರೆ. 37 ಎಸೆತಗಳಲ್ಲಿ ವಾರ್ನರ್ ಅರ್ಧ ಶತಕವನ್ನು ಪೂರೈಸಿದ್ದು 5 ಬೌಂಡರಿ ಹಾಗೂ ಒಂದು ಸಿಕ್ಸರ್ ಒಳಗೊಂಡಿತ್ತು.

5ನೇ ಶತಕದ ಜೊತೆಯಾಟ
ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಆರಂಭಿಕ ಜೋಡಿ ಬೈರ್‌ಸ್ಟೋವ್ ಜೊತೆಗೆ ವಾರ್ನರ್ ಮೊದಲ ವಿಕೆಟ್‌ಗೆ ಭರ್ಜರಿ 160 ರನ್‌ಗಳ ಜೊತೆಯಾಟವನ್ನು ನೀಡಿದರು. ಡೇವಿಡ್ ವಾರ್ನರ್ ಹಾಗೂ ಬೆರ್‌ಸ್ಟೋವ್ ಜೊಡಿ ಈ ಮೂಲಕ ಐಪಿಎಲ್‌ನಲ್ಲಿ 5ನೇ ಶತಕದ ಜೊತೆಯಾಟವನ್ನು ಪ್ರದರ್ಶಿಸಿದ್ದಾರೆ.

ಭರ್ಜರಿ ಮೊತ್ತ ಕಲೆ ಹಾಕಿದ ಸನ್‌ರೈಸರ್ಸ್
ಭರ್ಜರಿ ಪ್ರದರ್ಶನವನ್ನು ನೀಡಿದ ಜಾನಿ ಬೈರ್‌ಸ್ಟೋವ್ 97 ರನ್‌ಗಳಿಸಿ ರವಿ ಬಿಶ್ಣೋಯ್‌ಗೆ ವಿಕೆಟ್ ಒಪ್ಪಿಸುವ ಮೂಲಕ ಶತಕ ವಂಚಿತರಾದರು. ವಾರ್ನರ್-ಬೈರ್‌ಸ್ಟೋವ್ ಜೋಡಿಯ ಸಾಹಸದಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡ ಬರ್ಜರಿ 201 ರನ್‌ಗಳನ್ನು ಕಲೆಹಾಕುವಲ್ಲಿ ಯಶಸ್ವಿಯಾಯಿತು
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications