Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪೃಥ್ವಿ-ಶ್ರೇಯಸ್ ಬ್ಯಾಟಿಂಗ್ ಅಬ್ಬರ, ಕೆಕೆಆರ್ ವಿರುದ್ಧ ಡಿಸಿಗೆ ರೋಚಕ ಜಯ

IPL 2020: DC vs KKR Match 16 highlights in kannada

ಶಾರ್ಜಾ: ಪೃಥ್ವಿ ಶಾ, ಶ್ರೇಯಸ್ ಐಯ್ಯರ್ ಮತ್ತು ರಿಷಭ್ ಪಂತ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 16ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಡೆಲ್ಲಿ ಕ್ಯಾಪಿಟಲ್ಸ್ ರೋಚಕ 18 ರನ್ ಜಯ ಗಳಿಸಿದೆ. ಕೆಕೆಆರ್ ಪರ ನಿತೀಶ್ ರಾಣಾ, ಇಯಾನ್ ಮಾರ್ಗನ್ ಮತ್ತು ರಾಹುಲ್ ತ್ರಿಪಾಠಿ ಮಾಡಿದ ಯತ್ನ ವ್ಯರ್ಥಗೊಂಡಿತು.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಡೆಲ್ಲಿ ಕ್ಯಾಪಿಟಲ್ಸ್ ತಂಡ, ಪೃಥ್ವಿ ಶಾ 66 (41 ಎಸೆತ), ಶಿಖರ್ ಧವನ್ 26, ಶ್ರೇಯಸ್ ಐಯ್ಯರ್ 88 (38 ಎಸೆತ), ರಿಷಭ್ ಪಂತ್ 38 (17 ಎಸೆತ) ರನ್‌ನೊಂದಿಗೆ 20 ಓವರ್‌ಗೆ 4 ವಿಕೆಟ್ ಕಳೆದು 228 ರನ್ ಗಳಿಸಿತು.

ಗುರಿ ಬೆನ್ನಟ್ಟಿದ ಕೋಲ್ಕತ್ತಾ ನೈಟ್ ರೈಡರ್ಸ್, ಶುಬ್ಮನ್ ಗಿಲ್ 28, ನಿತೀಶ್ ರಾಣಾ 58 (35 ಎಸೆತ), ಆ್ಯಂಡ್ರೆ ರಸೆಲ್ 13, ಇಯಾನ್ ಮಾರ್ಗನ್ 44 (18 ಎಸೆತ), ರಾಹುಲ್ ತ್ರಿಪಾಠಿ 36 (16 ಎಸೆತ), ದಿನೇಶ್ ಕಾರ್ತಿಕ್ 6 ರನ್‌ನೊಂದಿಗೆ 20 ಓವರ್‌ ಮುಕ್ತಾಯಕ್ಕೆ 8 ವಿಕೆಟ್ ಕಳೆದು 210 ರನ್ ಬಾರಿಸಿ ಶರಣಾಯಿತು.

ಡೆಲ್ಲಿ ಕ್ಯಾಪಿಟಲ್ಸ್ ಇನ್ನಿಂಗ್ಸ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್‌ನ ಆ್ಯಂಡ್ರೆ ರಸೆಲ್ 2, ವರುಣ್ ಚಕ್ರವರ್ತಿ ಮತ್ತು ಕೆ ನಗರ್ಕೋಟಿ ತಲಾ 1 ವಿಕೆಟ್ ಪಡೆದರೆ, ಕೋಲ್ಕತ್ತಾ ಇನ್ನಿಂಗ್ಸ್‌ನಲ್ಲಿ ಡೆಲ್ಲಿಯ ಅನ್ರಿಚ್ ನಾರ್ಟ್ಜೆ 3, ಹರ್ಷಲ್ ಪಟೇಲ್ 2, ಕಾಗಿಸೊ ರಬಾಡ, ಮಾರ್ಕಸ್ ಸ್ಟೋಯ್ನಿಸ್ ಮತ್ತು ಅಮಿತ್ ಮಿಶ್ರಾ ತಲಾ 1 ವಿಕೆಟ್‌ ಪಡೆದು ಗಮನ ಸೆಳೆದರು.

Story first published: Sunday, October 4, 2020, 0:26 [IST]
Other articles published on Oct 4, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+