ಐಪಿಎಲ್ 2020: ಬೆಂಗಳೂರು-ಡೆಲ್ಲಿ ಮುಖಾಮುಖಿ, ಹೆಚ್ಚು ಬಲಿಷ್ಠರಾರು?

ದುಬೈ: ಅಕ್ಟೋಬರ್ 5ರ ಸೋಮವಾರ ರಾಯಲ್ ಚಾಲೆಂಜರ್ಸ್ ಬೆಂಗಳುರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಕುತೂಹಲಕಾರಿ ಪಂದ್ಯಕ್ಕೆ ಸಾಕ್ಷಿಯಾಗಲಿದೆ. ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯುವ ಐಪಿಎಲ್ 19ನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಆರ್‌ಸಿಬಿ ಮತ್ತು ಶ್ರೇಯಸ್ ಐಯ್ಯರ್ ನಾಯಕತ್ವದ ಡಿಸಿ ಮುಖಾಮುಖಿಯಾಗಲಿವೆ. 7.30 pmಗೆ ಪಂದ್ಯ ಆರಂಭವಾಗಲಿದೆ.
ಆಡಿರುವ 4 ಪಂದ್ಯಗಳಲ್ಲಿ ಎರಡೂ ತಂಡಗಳೂ ತಲಾ 3 ಪಂದ್ಯಗಳನ್ನು ಜಯಿಸಿ 6 ಅಂಕಗಳನ್ನು ಕಲೆ ಹಾಕಿವೆ. ಸದ್ಯದ ಅಂಕಪಟ್ಟಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (+0.588 ನೆಟ್ ರನ್‌ರೇಟ್) 2ನೇ ಸ್ಥಾನದಲ್ಲಿದ್ದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು (-0.954 ನೆಟ್ ರನ್‌ರೇಟ್) 3ನೇ ಸ್ಥಾನದಲ್ಲಿದೆ.
ಡೆಲ್ಲಿ vs ಬೆಂಗಳೂರು ತಂಡಗಳ ಮುಖಾಮುಖಿಗೆ ಸಂಬಂಧಿಸಿ ಇಲ್ಲೊಂದಿಷ್ಟು ಕುತೂಹಲಕಾರಿ ಅಂಕಿ ಅಂಶಗಳಿವೆ.

ನೋಡಲೇಬೇಕಾದ ಆಟಗಾರರು
ಡೆಲ್ಲಿ ಕ್ಯಾಪಿಟಲ್ಸ್: ಶಿಖರ್ ಧವನ್, ಶ್ರೇಯಸ್ ಅಯ್ಯರ್, ಪೃಥ್ವಿ ಶಾ, ರಿಷಭ್ ಪಂತ್, ಮಾರ್ಕಸ್ ಸ್ಟೋಯ್ನಿ, ಕಾಗಿಸೋ ರಬಾಡ ಉತ್ತಮ ಫಾರ್ಮ್‌ನಲ್ಲಿದ್ದಾರೆ.
ರಾಯಲ್ ಚಾಲೆಜರ್ಸ್ ಬೆಂಗಳೂರು: ದೇವದತ್ ಪಡಿಕ್ಕಲ್, ಆ್ಯರನ್ ಫಿಂಚ್, ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಇಸುರು ಉದಾನ, ಡೇಲ್ ಸ್ಟೇನ್, ಯುಜುವೇಂದ್ರ ಚಾಹಲ್ ಪ್ರಮುಖ ಆಟಗಾರರು.

ಇತ್ತಂಡಗಳ ಮುಖಾಮುಖಿ
* ಆಡಿದ ಒಟ್ಟು ಪಂದ್ಯಗಳ ಸಂಖ್ಯೆ: 24
* ಆರ್‌ಸಿಬಿ ಗೆದ್ದ ಪಂದ್ಯಗಳು: 15
* ಡಿಸಿ ಗೆದ್ದ ಪಂದ್ಯಗಳು: 8
* ಭಾರತದಲ್ಲಿ ಆಡಿದ ಪಂದ್ಯ: 21 (ಆರ್‌ಸಿಬಿ 13, ಡಿಸಿ 7)

ಯುಎಇಯಲ್ಲಿ ಆಡಿದ ಪಂದ್ಯಗಳು
* ಡಿಸಿ ವಿರುದ್ಧ ಆರ್‌ಸಿಬಿ ಸರಾಸರಿ ಸ್ಕೋರ್: 154
* ಆರ್‌ಸಿಬಿ ವಿರುದ್ಧ ಡಿಸಿ ಸರಾಸರಿ ಸ್ಕೋರ್: 161
* ಆರ್‌ಸಿಬಿಗೆ ಹೆಚ್ಚಿನ ರನ್: 849 (ವಿರಾಟ್ ಕೊಹ್ಲಿ)
* ಡಿಸಿಗಾಗಿ ಹೆಚ್ಚಿನ ರನ್ಗಳು: 255 (ಶ್ರೇಯಸ್ ಅಯ್ಯರ್)

ಅತ್ಯಧಿಕ ವಿಕೆಟ್‌ಗಳು
* ಆರ್‌ಸಿಬಿಗೆ ಹೆಚ್ಚಿನ ವಿಕೆಟ್‌ಗಳು: 14 (ಯುಜ್ವೇಂದ್ರ ಚಹಲ್)
* ಡಿಸಿಗೆ ಹೆಚ್ಚಿನ ವಿಕೆಟ್: 9 (ಅಮಿತ್ ಮಿಶ್ರಾ)
* ಆರ್‌ಸಿಬಿಗೆ ಹೆಚ್ಚಿನ ಕ್ಯಾಚ್‌ಗಳು: 13 (ವಿರಾಟ್ ಕೊಹ್ಲಿ)
* ಡಿಸಿಗಾಗಿ ಹೆಚ್ಚಿನ ಕ್ಯಾಚ್‌ಗಳು: 5 (ರಿಷಭ್ ಪಂತ್)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications