ಬೆಂಗಳೂರು vs ಡೆಲ್ಲಿ: ಸಂಭಾವ್ಯ ತಂಡಗಳು, ಹವಾಮಾನ, ಪಿಚ್ ರಿಪೋರ್ಟ್

ದುಬೈ: ದುಬೈ ಇಂಟರ್ ನ್ಯಾಷನಲ್ ಸ್ಟೇಟಿಯಂನಲ್ಲಿ ಸೋಮವಾರ (ಅಕ್ಟೋಬರ್ 5) ನಡೆಯುವ ಇಂಡಿಯನ್ ಪ್ರೀಮಿಯರ್ ಲೀಗ್ 19ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಕಾದಾಡಲಿವೆ. ಪಂದ್ಯ 7.30 pmಗೆ ಆರಂಭಗೊಳ್ಳಲಿದೆ.
ಈವರೆಗೆ ಆಡಿರುವ 4 ಪಂದ್ಯಗಳಲ್ಲಿ ಎರಡೂ ತಂಡಗಳೂ ತಲಾ 3 ಪಂದ್ಯಗಳನ್ನು ಜಯಿಸಿ 6 ಅಂಕಗಳನ್ನು ಕಲೆ ಹಾಕಿವೆ. ಸದ್ಯದ ಅಂಕಪಟ್ಟಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (+0.588 ನೆಟ್ ರನ್‌ರೇಟ್) 2ನೇ ಸ್ಥಾನದಲ್ಲಿದ್ದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು (-0.954 ನೆಟ್ ರನ್‌ರೇಟ್) 3ನೇ ಸ್ಥಾನದಲ್ಲಿದೆ.
ಹವಾಮಾನ ವರದಿ
ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ತಂಡಗಳು ಮುಖಾಮುಖಿಯಾಗುತ್ತಿರುವ ಅಕ್ಟೋಬರ್ 5ರಂದು ದುಬೈನಲ್ಲಿ 35-40 ಡಿಗ್ರೀ ಸೆಲ್ಶಿಯನ್ ತಾಪಮಾನ ಇರಲಿದೆ. ಅಂದರೆ ಅತಿಯಾದ ಶೆಕೆ ಇರಲಿದೆ. ಆಟಗಾರರು ಮೈದಾನದಲ್ಲಿ ಬಳಲುವ ಸಾಧ್ಯತೆ ಹೆಚ್ಚಿರುತ್ತದೆ.
ಪಿಚ್ ರಿಪೋರ್ಟ್, ಟಾಸ್ ಆಯ್ಕೆ ಸಾಧ್ಯತೆ
ಇಲ್ಲಿವರೆಗಿನ ಬಹುತೇಕ ಪಂದ್ಯಗಳಲ್ಲಿ ಟಾಸ್ ಗೆದ್ದ ಕ್ಯಾಪ್ಟನ್‌ಗಳು ಬೌಲಿಂಗ್ ಆಯ್ದುಕೊಂಡಿದ್ದನ್ನು ನಾವು ನೋಡಿದ್ದೇವೆ. ಹಾಗೆ ಮೊದಲು ಫೀಲ್ಡಿಂಗ್ ಆರಿಸಿದ ಹೆಚ್ಚಿನ ತಂಡಗಳು ಸೋತಿದ್ದನ್ನೂ ನೋಡಿದ್ದೇವೆ. ಇಂದಿನ ಪಂದ್ಯದಲ್ಲಿ ದುಬೈ ಮೈದಾನ ಪಂದ್ಯ ಮುಂದೆ ಸಾಗಿದಂತೆ ಸ್ಲೋ ಎನಿಸಲಿದೆ. ಅಂದರೆ ಸ್ಪಿನ್ನರ್‌ಗಳಿಗೆ ಈ ಪಿಚ್ ಹೆಚ್ಚು ಅನುಕೂಲಕರವಾಗಿದೆ.
ಡೆಲ್ಲಿ ಸಂಭಾವ್ಯ ತಂಡ: ಶಿಖರ್ ಧವನ್, ಪೃಥ್ವಿ ಶಾ/ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್ (ಸಿ), ರಿಷಭ್ ಪಂತ್ (ವಿಕೆ), ಶಿಮ್ರಾನ್ ಹೆಟ್ಮೈಯರ್, ಮಾರ್ಕಸ್ ಸ್ಟೊಯಿನಿಸ್, ರವಿಚಂದ್ರನ್ ಅಶ್ವಿನ್, ಅಕ್ಸರ್ ಪಟೇಲ್/ಅಮಿತ್ ಮಿಶ್ರಾ, ಹರ್ಷಲ್ ಪಟೇಲ್, ಕಾಗಿಸೊ ರಬಡಾ, ಅನ್ರಿಚ್ ನಾರ್ಟ್ಜೆ.
ಬೆಂಗಳೂರು ಸಂಭಾವ್ಯ ತಂಡ: ದೇವದತ್ ಪಡಿಕ್ಕಲ್, ಆ್ಯರನ್ ಫಿಂಚ್, ವಿರಾಟ್ ಕೊಹ್ಲಿ (ಸಿ), ಎಬಿ ಡಿವಿಲಿಯರ್ಸ್ (ವಿಕೆ), ಶಿವಮ್ ದೂಬೆ, ಗುರ್ಕೀರತ್ ಸಿಂಗ್ ಮನ್, ಇಸುರು ಉದಾನ, ವಾಷಿಂಗ್ಟನ್ ಸುಂದರ್, ಆ್ಯಡಮ್ ಜಂಪಾ/ಡೇಲ್ ಸ್ಟೇನ್, ನವದೀಪ್ ಸೈನಿ, ಯುಜ್ವೇಂದ್ರ ಚಾಹಲ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications