Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್: ರಾಜಸ್ಥಾನ್ ರಾಯಲ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್‌ಗೆ ಜಯ

IPL 2020: DC vs RR Match 30 highlights in kannada

ದುಬೈ: ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಬುಧವಾರ (ಅಕ್ಟೋಬರ್ 14) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 30ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ 13 ರನ್ ರೋಚಕ ಜಯ ಗಳಿಸಿದೆ. ಶಿಖರ್ ಧವನ್, ಶ್ರೇಯಸ್ ಐಯ್ಯರ್ ಅವರ ಅರ್ಧ ಶತಕದ ಕೊಡುಗೆಯೊಂದಿಗೆ ಡೆಲ್ಲಿ ಟೂರ್ನಿಯ 6ನೇ ಜಯ ಗಳಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಡೆಲ್ಲಿ ಕ್ಯಾಪಿಟಲ್ಸ್, ಶಿಖರ್ ಧವನ್ 57, ಶ್ರೇಯಸ್ ಐಯ್ಯರ್ 53, ಮಾರ್ಕಸ್ ಸ್ಟೋಯ್ನಿಸ್ 18, ಅಲೆಕ್ಸ್ ಕ್ಯಾರಿ 14 ರನ್ ಸೇರ್ಪಡೆಯೊಂದಿಗೆ 20 ಓವರ್‌ ಮುಕ್ತಾಯಕ್ಕೆ 7 ವಿಕೆಟ್ ನಷ್ಟದಲ್ಲಿ 161 ರನ್ ಬಾರಿಸಿ ಎದುರಾಳಿಗೆ 162 ರನ್ ಗುರಿ ನೀಡಿತ್ತು.

ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡ, ಬೆನ್ ಸ್ಟೋಕ್ಸ್ 41, ಜೋಸ್ ಬಟ್ಲರ್ 22, ಸಂಜು ಸ್ಯಾಮ್ಸನ್ 25, ರಾಬಿನ್ ಉತ್ತಪ್ಪ 32, ರಾಹುಲ್ ತೆವಾಟಿಯಾ 14, ಶ್ರೇಯಸ್ ಗೋಪಾಲ್ 6 ರನ್ ಸೇರ್ಪಡೆಯೊಂದಿಗೆ 20 ಓವರ್‌ನಲ್ಲಿ 8 ವಿಕೆಟ್ ಕಳೆದು 148 ರನ್ ಬಾರಿಸಿ ಶರಣಾಯಿತು.

ಡೆಲ್ಲಿ ಕ್ಯಾಪಿಟಲ್ಸ್ ಇನ್ನಿಂಗ್ಸ್‌ ರಾಜಸ್ಥಾನ್‌ನ ಜೋಫ್ರಾ ಆರ್ಚರ್ 3, ಜಯದೇವ್ ಉನಾದ್ಕತ್ 2, ಕಾರ್ತಿಕ್ ತ್ಯಾಗಿ 1, ಶ್ರೇಯಸ್ ಗೋಪಾಲ್ 1 ವಿಕೆಟ್ ಪಡೆದರೆ, ರಾಜಸ್ಥಾನ್ ರಾಯಲ್ಸ್ ಇನ್ನಿಂಗ್ಸ್‌ನಲ್ಲಿ ಡೆಲ್ಲಿಯ ಕಾಗಿಸೊ ರಬಾಡ 1, ತುಷಾರ್ ದೇಶಪಾಂಡೆ 2, ಅನ್ರಿಚ್ ನಾಟ್ಜೆ 2, ರವಿಚಂದ್ರನ್ ಅಶ್ವಿನ್ ಮತ್ತು ಅಕ್ಸರ್ ಪಟೇಲ್ ತಲಾ 1 ವಿಕೆಟ್ ಪಡೆದರು.

Story first published: Thursday, October 15, 2020, 10:08 [IST]
Other articles published on Oct 15, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+