Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2020: ವಾರ್ನರ್, ಸಾಹಾ ಆರ್ಭಟ: ಡೆಲ್ಲಿಗೆ ಬೃಹತ್ ಟಾರ್ಗೆಟ್

IPL 2020: DC vs SRH, hydrabad set big target for delhi

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಬೃಹತ್ ಮೊತ್ತವನ್ನು ಪೇರಿಸುವಲ್ಲಿ ಯಶಸ್ವಿಯಾಗಿದೆ. ಆರಮಭಿಕ ಆಟಗಾರರಾಗಿ ಕಣಕ್ಕಿಳಿದ ಡೇವಿಡ್ ವಾರ್ನರ್ ಹಾಗೂ ವೃದ್ಧಿಮಾನ್ ಸಾಹಾ ಸ್ಪೋಟಕ ಪ್ರದರ್ಶನದ ಕಾರಣದಿಂದಾಗಿ ಎದುರಾಳಿ ಡೆಲ್ಲಿಗೆ 220 ರನ್‌ಗಳ ಗುರಿಯನ್ನು ನಿಗದಿಪಡಿಸಿದೆ.

ಟಾಸ್‌ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಮೊದಲಿಗೆ ಎದುರಾಳಿಯನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಹೀಗಾಗಿ ಹೈದರಾಬಾದ್ ನಾಯಕ ಡೇವಿಡ್ ವಾರ್ನರ್ ಸಾಹಾ ಜೊತೆಗೆ ಇನ್ನಿಂಗ್ಸ್ ಆರಂಭಿಸಲು ಕಣಕ್ಕಿಳಿದರು. ಡೆಲ್ಲಿ ಬೌಲರ್‌ಗಳನ್ನು ಆರಂಭದಿಂದಲೇ ದಂಡಿಸಲು ಆರಂಭಿಸಿದ ಈ ಜೋಡಿ ಪವರ್‌ಪ್ಲೇನಲ್ಲಿ ಈ ಬಾರಿಯ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಖ್ಯಾತಿಯನ್ನೂ ಪಡೆದುಕೊಂಡರು.

ಮೊದಲ ವಿಕೆಟ್‌ಗೆ ಶತಕದ ಜೊತೆಯಾಟವನ್ನು ನೀಡಿದ ವಾರ್ನರ್ ಸಾಹಾ ಜೋಡಿ 9.4ಓವರ್‌ಗಳಲ್ಲಿ 107 ರನ್ ಗಳಿಸಿತು. ಈ ಸಂದರ್ಭದಲ್ಲಿ ಡೇವಿಡ್ ವಾರ್ನರ್ ತಮ್ಮ ವಿಕೆಟನ್ನು ಕಳೆದುಕೊಂಡರು. ಈ ಸಂದರ್ಭದಲ್ಲಿ ವಾರ್ನರ್ 34 ಎಸೆತಗಳನ್ನು ಎದುರಿಸಿ 66 ರನ್ ಗಳಿಸಿದ್ದರು. ಇದರಲ್ಲಿ ಎರಡು ಸಿಕ್ಸರ್ ಹಾಗೂ 8 ಬೌಂಡರಿಗಳು ಸೇರಿತ್ತು.

ವಾರ್ನರ್ ಔಟಾದ ಬಳಿಕವೂ ಸ್ಪೋಟಕ ಬ್ಯಾಟಿಂಗ್ ಮುಂದುವರಿಸಿದ ಸಾಹಾ ಶ್ರೇಷ್ಠ ಪ್ರದರ್ಶನ ನೀಡಿದ್ದರು. 14ನೇ ಓವರ್‌ನಲ್ಲಿ ನಾರ್ಕಿಯಾಗೆ ವಿಕೆಟ್ ಒಪ್ಪಿಸಿದ ಸಾಹಾ 45 ಎಸೆತಗಳಲ್ಲಿ 87 ರನ್ ಸಿಡಿಸಿದ್ದರು. ಈ ಅದ್ಭುತ ಇನ್ನಿಂಗ್ಸ್‌ನಲ್ಲಿ 2 ಸಿಕ್ಸರ್ ಹಾಗೂ 12 ಬೌಂಡರಿ ಸೇರಿಕೊಂಡಿತ್ತು.

ಮನೀಶ್ ಪಾಂಡೆ ಕೂಡ ಉತ್ತಮ ಪ್ರದರ್ಶನ ನೀಡಿದ್ದು ಅಜೇಯ 44 ರನ್ ಗಳಿಸಿದ್ದಾರೆ. ಕೇನ್ ವಿಲಿಯಮ್ಸನ್ 11 ರನ್ ಗಳಿಸಿ ಔಟಾಗದೆ ಉಳಿದರು. ನಿಗದಿತ 20 ಓವರ್‌ಗಳಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಕೇವಲ 2 ವಿಕೆಟ್ ಕಳೆದುಕೊಂಡು 219 ರನ್ ಗಳಿಸಲು ಶಕ್ತವಾಯಿತು.

Story first published: Tuesday, October 27, 2020, 21:30 [IST]
Other articles published on Oct 27, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+