ಅಭ್ಯಾಸ ಆರಂಭಿಸಿದ ಐಪಿಎಲ್ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್

ಮುಂಬೈ, ಜೂನ್ 11: ದೀರ್ಘ ದಿನಗಳ ಬಳಿಕ ಕ್ರಿಕೆಟ್ ಪ್ರೇಮಿಗಳಿಗೆ ಶುಭಸುದ್ದಿ ಬಂದಿದೆ. ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ತಂಡ ಅಭ್ಯಾಸ ಆರಂಭಿಸಿದೆ. ಕೊರೊನಾವೈರಸ್ ಪಿಡುಗು ಶುರುವಾದ ಬಳಿಕ ಮೈದಾನಕ್ಕಿಳಿದ ಮೊದಲ ಐಪಿಎಲ್ ತಂಡವಾಗಿ ಎಂಐ ಗುರುತಿಸಿಕೊಂಡಿದೆ. ಮುಂಬೈಯ ಹೊರವಲಯದಲ್ಲಿರುವ ಘನ್‌ಸೋಲಿಯಲ್ಲಿರುವ ರಿಲಯನ್ಸ್ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ ಅಭ್ಯಾಸ ಪುನರಾರಂಭಿಸಿದೆ.
ಕೋವಿಡ್-19 ಸೋಂಕಿತರು ಹೆಚ್ಚಿರುವ ಮಹಾರಾಷ್ಟ್ರ ರಾಜ್ಯದಲ್ಲೇ ನಾಲ್ಕು ಬಾರಿಯ ಐಪಿಎಲ್ ಚಾಂಪಿಯನ್ಸ್ ಮುಂಬೈ ತಂಡ ಅಭ್ಯಾಸ ಶುರು ಮಾಡಿರುವುದು ಭಾರತದಲ್ಲಿ ಕ್ರಿಕೆಟ್ ಚಟುವಟಿಕೆಗಳು ಆರಂಭಗೊಳ್ಳುವ ಮುನ್ಸೂಚನೆ ನೀಡಿದೆ.
ಮೈದಾನಕ್ಕಿಳಿದಿರುವ ಮುಂಬೈ ಇಂಡಿಯನ್ಸ್ ತಂಡದಲ್ಲಿ ಸ್ಟಾರ್ ಆಟಗಾರರು ಕಾಣಿಸಿಕೊಂಡಿದ್ದಾರೆ.

ಪ್ರಮುಖ ಆಟಗಾರರಿಗೆ ಆಹ್ವಾನ
ತಂಡದ ನಾಯಕ ರೋಹಿತ್ ಶರ್ಮಾ ಅವರನ್ನೂ ಸೇರಿಸಿ, ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ, ಅವರ ಸಹೋದರ ಕೃಣಾಲ್ ಪಾಂಡ್ಯ, ಬ್ಯಾಟ್ಸ್‌ಮನ್ ಸೂರ್ಯ ಕುಮಾರ್ ಯಾದವ್, ಆದಿತ್ಯ ತಾರೆ, ವೇಗಿ ಧವಲ್ ಕುಲಕರ್ಣಿ ಇತ್ಯಾದಿ ಮುಂಬೈಯಲ್ಲಿರುವ ಆಟಗಾರರಿಗೆ ಅಭ್ಯಾಸಕ್ಕೆ ಆಹ್ವಾನ ನೀಡಲಾಗಿದೆ ಎಂದು ಫ್ರಾಂಚೈಸಿ ಹೇಳಿದೆ.

ಅಭ್ಯಾಸ ಕಡ್ಡಾಯವಲ್ಲ
ತಂಡದ ಆಟಗಾರರಿಗೆ ಅಭ್ಯಾಸ ಕಡ್ಡಾಯವಲ್ಲ. ಅಭ್ಯಾಸದಲ್ಲಿ ಪಾಲ್ಗೊಳ್ಳಬೇಕೋ, ಬೇಡವೋ ಎಂದು ಆಟಗಾರರೇ ನಿರ್ಧರಿಸಬಹುದು ಎಂದು ಆಟಗಾರರಿಗೆ ಹೇಳಿರುವುದಾಗಿ ಮುಂಬೈ ಇಂಡಿಯನ್ಸ್ ಮ್ಯಾನೇಜ್ಮೆಂಟ್ ಮಾಹಿತಿ ನೀಡಿದೆ.

ಅಭ್ಯಾಸಕ್ಕೆ ಕಾತರದಿಂದ ಕಾಯುತ್ತಿದ್ದೇನೆ
'ಮುಂಬೈ ಇಂಡಿಯನ್ಸ್ ತಂಡ ಅಭ್ಯಾಸ ನಡೆಸಲು ನಮಗೆ ಆಯ್ಕೆ ನೀಡಿದೆ. ನಾನು ಅಲ್ಲಿ ಪಾಲ್ಗೊಳ್ಳಲು ಕಾತರದಿಂದ ಕಾಯುತ್ತಿದ್ದೇನೆ. ಬ್ಯಾಟನ್ನು ಮತ್ತೆ ಮೂಲೆಗಿಡುವ ಯೋಚನೆಯೇ ಇಲ್ಲ. ಕಳೆದ ಎರಡು ತಿಂಗಳಲ್ಲಿ ನಾನು ಮನೆಯಿಂದ ಹೊರಬಂದಿಲ್ಲ ಮತ್ತು ಖಂಡಿತವಾಗಿಯೂ ಆಟವನ್ನು ಮಿಸ್ ಮಾಡಿಕೊಂಡಿದ್ದೇನೆ,' ಎಂದು ಸೂರ್ಯಕುಮಾರ್ ಯಾದವ್ ಇಂಡಿಯನ್ ಎಕ್ಸ್‌ಪ್ರೆಸ್ ಜೊತೆ ಹೇಳಿಕೊಂಡಿದ್ದಾರೆ.

ಖಾಲಿ ಮೈದಾನದಲ್ಲಿ ಐಪಿಎಲ್?
ಈ ಬಾರಿಯ ಐಪಿಎಲ್ ಖಾಲಿ ಮೈದಾನದಲ್ಲಿ ನಡೆಯುವ ಸಾಧ್ಯತೆ ಹೆಚ್ಚಿದೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಖಾಲಿ ಮೈದಾನದಲ್ಲಿ ಟೂರ್ನಿ ನಡೆಸುವತ್ತ ಯೋಚಿಸುತ್ತಿದ್ದೇವೆ ಎಂಬರ್ಥದಲ್ಲಿ ಸ್ಟೇಟ್ ಕ್ರಿಕೆಟ್ ಅಸೋಸಿಯೇಶನ್‌ಗಳಿಗೆ ಬರೆದಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಯಾವುದಕ್ಕೂ ಶೀಘ್ರದಲ್ಲೇ ಐಪಿಎಲ್ ಭವಿಷ್ಯದ ಬಗ್ಗೆ ನಿರ್ಧಾರ ಪ್ರಕಟಿಸುವುದಾಗಿ ಗಂಗೂಲಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications