ಐಪಿಎಲ್ 2020: ಡೆಲ್ಲಿ ಕ್ಯಾಪಿಟಲ್ಸ್ ಸಹ ಫಿಸಿಯೋಗೆ ಕೊರೊನಾ ಸೋಂಕು

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಸಜ್ಜಾಗುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸದಸ್ಯರೊಬ್ಬರಿಗೆ ಕೊರೊನಾವೈರಸ್ ಸೋಂಕು ತಗುಲಿದೆ. ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ಬಂದು 2 ಪರೀಕ್ಷೆಗಳಲ್ಲಿ ನೆಗೆಟಿವ್ ಬಂದಿದ್ದ ಡಿಸಿಯ ಸಹ ಫಿಸಿಯೋ ಥೆರಪಿಸ್ಟ್‌ಗೆ 3ನೇ ಪರೀಕ್ಷೆಯ ವೇಳೆ ಕೊರೊನಾ ಪಾಸಿಟಿವ್ ಬಂದಿದೆ.
'ಕೊರೊನಾ ಸೋಂಕಿರುವ ಆ ಫಿಸಿಯೋ ಫ್ರಾಂಚೈಸಿಯ ಯಾವ ಆಟಗಾರರನ್ನು ಅಥವಾ ಸಿಬ್ಬಂದಿಯನ್ನೂ ಸಂಪರ್ಕಿಸಿಲ್ಲ. ಕೊರೊನಾ ಇರುವುದು ಗೊತ್ತಾದ ಕೂಡಲೇ ಅವರು ಐಸೊಲೇಶನ್‌ಗೆ ಹೋಗಿದ್ದಾರೆ. ಸದ್ಯ ದುಬೈಯ ಐಪಿಎಲ್ ಐಸೊಲೇಶನ್ ಸೌಲಭ್ಯದಲ್ಲಿ ಮುಂದಿನ 14 ದಿನಗಳ ಕಾಲ ಇರಲಿದ್ದಾರೆ,' ಎಂದು ಡೆಲ್ಲಿ ಮಾಹಿತಿ ನೀಡಿದೆ.
ಇಬ್ಬರು ಆಟಗಾರರೂ ಸೇರಿ (ದೀಪಕ್ ಚಹಾರ್, ಋತುರಾಜ್ ಗಾಯಕ್ವಾಡ್) ಒಟ್ಟು 13 ಮಂದಿಗೆ ಚೆನ್ನೈ ಸೂಪರ್ ಕಿಂಗ್ಸ್‌ನಲ್ಲಿ ಕೊರೊನಾ ಪಾಸಿಟಿವ್ ಬಂದಿತ್ತು. ಇನ್ನು ರಾಜಸ್ಥಾನ್ ರಾಯಲ್ಸ್‌ನ ಫೀಲ್ಡಿಂಗ್ ಕೋಚ್ ದಿಶಾಂತ್ ಯಗ್ನಿಕ್‌ಗೂ ಕೊರೊನಾ ತಾಗಿತ್ತು. ಐಪಿಎಲ್ ಫ್ರಾಂಚೈಸಿಗಳಲ್ಲಿ ಕೊರೊನಾ ಕಾಣಿಸಿರುವ ಮತ್ತೊಂದು ತಂಡವಾಗಿ ಡೆಲ್ಲಿ ಗುರುತಿಸಿಕೊಂಡಿದೆ.
ಸೆಪ್ಟೆಂಬರ್ 19ರಿಂದ ನವೆಂಬರ್ 10ರ ವರೆಗೆ ಯುಎಇಯಲ್ಲಿ 13ನೇ ಆವೃತ್ತಿ ಐಪಿಎಲ್ ಆರಂಭಗೊಳ್ಳಲಿದೆ. ದುಬೈ, ಶಾರ್ಜಾ ಮತ್ತು ಅಬುಧಾಬಿ ತಾಣಗಳಲ್ಲಿ ಪಂದ್ಯಗಳು ನಡೆಯಲಿವೆ. ಭಾನುವಾರ ಬಿಸಿಸಿಐ ಐಪಿಎಲ್‌ನ ಸಂಪೂರ್ಣ ವೇಳಾಪಟ್ಟಿ ಬಿಡುಗಡೆಗೊಳಿಸಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications